PHOTOS

ಆಯಿತು ಈ ರಾಶಿಯವರ ಭಾಗ್ಯೋದಯ ! ಇನ್ನು ಕೈ ತುಂಬಾ ಸದ್ದು ಮಾಡುವುದು ಕಾಂಚಾಣ

ತುಂಬಾ ಮಂಗಳಕರವಾಗಿದೆ. ಜುಲೈ 7, 2023 ರವರೆಗೆ ಶುಕ್ರನು ಕರ್ಕಾಟಕದಲ್ಲಿಯೇ ಇರುತ್ತಾನೆ. ಇದು ಮೂರು ...

Advertisement
1/4
ಶುಕ್ರನ ಸಂಕ್ರಮಣ
ಶುಕ್ರನ ಸಂಕ್ರಮಣ

ಶುಕ್ರನ ಸಂಕ್ರಮಣವು 3 ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ಜುಲೈ 7, 2023 ರವರೆಗೆ ಶುಕ್ರನು ಕರ್ಕಾಟಕದಲ್ಲಿಯೇ ಇರುತ್ತಾನೆ. ಇದು ಮೂರು ರಾಶಿಯವರ ಅದೃಷ್ಟವನ್ನು ಬೆಳಗುವಂತೆ ಮಾಡುತ್ತದೆ. ಶುಕ್ರನ ಸಂಕ್ರಮಣದಿಂದಾಗಿ, ಮುಂದಿನ 37 ದಿನಗಳು ಈ ರಾಶಿಯವರ ಇಚ್ಛೆ ಈಡೇರುವುದು. 

2/4
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ : ಮೇಷ ರಾಶಿಯವರಿಗೆ ಶುಕ್ರ ಸಂಕ್ರಮಣ ಶುಭಕರವಾಗಿರುತ್ತದೆ. ಈ ರಾಶಿಯವರು ಹೊಸ ಮನೆ-ಕಾರು, ಜೀವನದಲ್ಲಿ ಸೌಕರ್ಯಗಳನ್ನು ಪಡೆಯಬಹುದು. ಕಠಿಣ ಪರಿಶ್ರಮದ ಫಲ ಈ ಸಮಯದಲ್ಲಿ ಪ್ರಾಪ್ತಿಯಾಗುವುದು. ವೃತ್ತಿಜೀವನ ಉತ್ತಮವಾಗಿರಲಿದೆ. ಪ್ರೇಮ ಜೀವನ - ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಮನೆಯ ದೇವರ ಕೋಣೆಯಲ್ಲಿ  ಕರ್ಪೂರವನ್ನು ಬೆಳಗುವುದರಿಂದ ಅನೇಕ ಲಾಭಗಳಾಗುವುದು. 

3/4
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ : ಶುಕ್ರನ ರಾಶಿ ಬದಲಾವಣೆಯು ಮಿಥುನ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ದಿಢೀರ್ ಹಣಕಾಸಿನ ಲಾಭವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಆದಾಯ ಹೆಚ್ಚಾಗುತ್ತದೆ. ವ್ಯಾಪಾರಿಗಳಿಗೆ ಕೂಡಾ ಪ್ರತಿ ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗಲಿದೆ. ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಬೆಳಗಿಸುವುದರಿಂದ ಲಾಭ ಹೆಚ್ಚಾಗುತ್ತದೆ.

4/4
ಮೀನ ರಾಶಿ :
ಮೀನ ರಾಶಿ :

ಮೀನ ರಾಶಿ : ಶುಕ್ರನ ಸಂಕ್ರಮಣವು ಮೀನ ರಾಶಿಯವರ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಹೆಜ್ಜೆ ಹೆಜ್ಜೆಯಲ್ಲಿಯೂ ಪ್ರಗತಿ, ಸಮೃದ್ದಿ ನಿಮ್ಮದಾಗುವುದು.  ಪ್ರಗತಿಯ ಹಾದಿ ತೆರೆದುಕೊಳ್ಳುತ್ತಾ ಹೋಗುತ್ತದೆ.  ಪ್ರೇಮ ಜೀವನ ಚೆನ್ನಾಗಿರುತ್ತದೆ. ಆದಾಯ ಹೆಚ್ಚಲಿದೆ. ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಹಣ ಸಿಗುತ್ತದೆ.  ಕುಟುಂಬದಲ್ಲಿ ಪ್ರೀತಿ ಹೆಚ್ಚಾಗುತ್ತದೆ.  

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More