PHOTOS

Budh Asta 2024: ಈ ರಾಶಿಯವರಿಗೆ ಅಸ್ತಮ ಬುಧನಿಂದ ವೃತ್ತಿ ಬದುಕಿನಲ್ಲಿ ತೊಂದರೆ, ತುಂಬಾ ಎಚ್ಚರಿಕೆ ಅಗತ್ಯ

Budh Asta 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲ್ಪಡುವ ಬುಧನು ನಾಳೆ ಎಂದರೆ ಏಪ್ರಿಲ್ 04ರಂದು ಅಸ್ತಮ ಸ್ಥಿತಿಗೆ ಜಾರಲಿದ್ದಾನೆ. ಇದ...

Advertisement
1/6
ಬುಧನ ಹಿಮ್ಮುಖ ಚಲನೆ
ಬುಧನ ಹಿಮ್ಮುಖ ಚಲನೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುದ್ದಿವಂತಿಕೆ, ವ್ಯವಹಾರ, ಮಾತಿನ ಅಂಶ ಎಂದು ನಂಬಲಾಗಿರುವ ಬುಧ ಏಪ್ರಿಲ್ 04ರಂದು ಮೇಷ ರಾಶಿಯಲ್ಲಿ ಅಸ್ತಮ ಸ್ಥಿತಿಗೆ ಜಾರಲಿದ್ದಾನೆ. ಬಳಿಕ ಮೇ 01ರಂದು ಬುಧ ಉದಯಿಸಲಿದ್ದಾನೆ. ಈ ಸಮಯದಲ್ಲಿ ಐದು ರಾಶಿಯ ಜನರಿಗೆ ವೃತ್ತಿ-ವ್ಯವಹಾರದಲ್ಲಿ ಸವಾಲುಗಳು ಹೆಚ್ಚಾಗಬಹುದು. ಹಾಗಾಗಿ ಅವರು ಹೆಜ್ಜೆ ಹೆಜ್ಜೆಗೂ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ... 

2/6
ಮೇಷ ರಾಶಿ
ಮೇಷ ರಾಶಿ

ಸ್ವ ರಾಶಿಯಲ್ಲಿಯೇ ಬುಧ ಅಸ್ತಮವು ಮೇಷ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ತೊಂದರೆಗಳನ್ನು ಹೆಚ್ಚಿಸಲಿದ್ದಾನೆ. ಈ ಸಮಯದಲ್ಲಿ ನೀವು ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರಗಳನ್ನು ಮುಂದೂಡುವುದು ಒಳ್ಳೆಯದು. 

3/6
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿಯ ಉದ್ಯೋಗಸ್ಥರಿಗೆ ಈ ಸಮಯ ಅಷ್ಟು ಉತ್ತಮವಾಗಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಹೊರೆ ಹೆಚ್ಚಾಗುವುದರಿಂದ ಒತ್ತಡಕ್ಕೆ ಒಳಗಾಗಬಹುದು. ಇದು ನಿಮ್ಮ ಆತ್ಮಸ್ಥೈರ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು. 

4/6
ಕನ್ಯಾ ರಾಶಿ
ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಬುಧನ ಹಿಮ್ಮುನ ಚಲನೆಯಿಂದ ವೃತ್ತಿ ರಂಗದಲ್ಲಿ ಹಲವು ಸವಾಲುಗಳು ಎದುರಾಗಬಹುದು. ಆದಾಗ್ಯೂ, ಎಂತಹುದ್ದೇ ಸಂದರ್ಭದಲ್ಲಿ ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ತಡೆಯುರಿ. ಕಷ್ಟಪಟ್ಟು ಹಿಡಿದ ಕೆಲಸವನ್ನು ಸಾಧಿಸುವತ್ತ ಗಮನಹರಿಸಿ. 

5/6
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರೇ ಬುಧನ ಹಿಮ್ಮುಖ ಚಲನೆಯ ಈ ಸಮಯದಲ್ಲಿ ನೀವು ವಿಶೇಷವಾಗಿ ಕಚೇರಿಯಲ್ಲಿ ಯಾರೊಂದಿಗೂ ಸಹ ಅನಗತ್ಯ ವಾದಗಳಲ್ಲಿ ತೊಡಗುವುದನ್ನು ತಪ್ಪಿಸಿ. ಕೆಲಸದ ಒತ್ತಡದ ನಡುವೆ ಆತುರಾತುರವಾಗಿ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. 

6/6
ಧನು ರಾಶಿ
ಧನು ರಾಶಿ

ಈ ಸಮಯದಲ್ಲಿ ಧನು ರಾಶಿಯ ಜನರು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸಬೇಕಾಗಬಹುದು. ಕಚೇರಿಯಲ್ಲಿ ಅನಗತ್ಯ ವಿಷಯಗಳು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಇದನ್ನು ತಪ್ಪಿಸಲು ಬುದ್ದಿವಂತಿಕೆಯಿಂದ ವಿಷಯಗಳನ್ನು ಇತ್ಯರ್ಥಪಡಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More