PHOTOS

Mercury Combust 2024: ಸಿಂಹ ರಾಶಿಯಲ್ಲಿ ಬುಧನ ಅಸ್ತಮದಿಂದ ಈ 3 ರಾಶಿಗಳಿಗೆ ಭರ್ಜರಿ ಲಾಭ!

Mercury Combust 2024: ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಬುಧನು ಸಿಂಹ ರಾಶಿ ಪ್ರವೇಶಿಸಿದ. ಸೆ.14ರಂದು ಬುಧ ಸಿಂಹ ರಾಶಿಯಲ್ಲಿ ಅಸ್ತಮಿಸಲಿದೆ....

Advertisement
1/4
ಯಾವ ರಾಶಿಯವರಿಗೆ ಅದೃಷ್ಟ?
ಯಾವ ರಾಶಿಯವರಿಗೆ ಅದೃಷ್ಟ?

ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಬುಧನು ಸಿಂಹ ರಾಶಿ ಪ್ರವೇಶಿಸಿದ. ಸೆಪ್ಟೆಂಬರ್ 14ರಂದು ಬುಧ ಸಿಂಹ ರಾಶಿಯಲ್ಲಿ ಅಸ್ತಮಿಸಲಿದೆ. ಹೀಗೆ ಗ್ರಹಗಳು ಕ್ಷೀಣಗೊಂಡಾಗ ಅದು ದುರ್ಬಲವಾಗುತ್ತದೆ. ಬುಧನು ಪ್ರಸ್ತುತ ಬುಧಾದಿತ್ಯ ಯೋಗದಲ್ಲಿ ಸೂರ್ಯನೊಂದಿಗೆ ಸಿಂಹರಾಶಿಯಲ್ಲಿದ್ದಾನೆ. ಅ ಸ್ಥಾನದಲ್ಲಿರುವ ಬುಧಗ್ರಹದ ಪ್ರಭಾವವು ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ 3 ರಾಶಿಗಳಿಗೆ ಭರ್ಜರಿ ಲಾಭ ನೀಡುತ್ತದೆ. ಈಗ ಸಿಂಹರಾಶಿಯಲ್ಲಿ ಬುಧ ಅಸ್ತಮಿಸುವುದರಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಅನ್ನೋದರ ಬಗ್ಗೆ ತಿಳಿಯಿರಿ.

2/4
ವೃಷಭ ರಾಶಿ 
ವೃಷಭ ರಾಶಿ 

ಬುಧಗ್ರಹವು ವೃಷಭ ರಾಶಿಯ 4ನೇ ಮನೆಯಲ್ಲಿ ಅಸ್ತಮಿಸುತ್ತದೆ. ಇದು ಈ ವೃಷಭ ರಾಶಿಯ ಜನರಿಗೆ ಯಶಸ್ಸನ್ನು ತರುತ್ತದೆ. ನೀವು ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ. ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ವ್ಯಾಪಾರಿಗಳಿಗೆ ಅಧಿಕ ಲಾಭ ದೊರೆಯಲಿದೆ. ಜಂಟಿ ಉದ್ಯಮಿಗಳಿಗೆ ಭರ್ಜರಿ ಧನಲಾಭವಾಗಲಿದೆ. ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಆದಾಯದ ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ನೀವು ಬಹಳಷ್ಟು ಹಣ ಉಳಿಸಬಹುದು. ನಿಮ್ಮ ಸಂಬಂಧಗಳಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ.

3/4
ಸಿಂಹ ರಾಶಿ 
ಸಿಂಹ ರಾಶಿ 

ಸಿಂಹ ರಾಶಿಯ ಮೊದಲ ಮನೆಯಲ್ಲಿ ಬುಧ ಗ್ರಹವು ಅಸ್ತಮಿಸಲಿದೆ. ಇದು ಸಿಂಹ ರಾಶಿಯವರಿಗೆ ಹಣದ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿನ ತೊಂದರೆಗಳು ಕೊನೆಗೊಳ್ಳುತ್ತವೆ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ನಾಯಕತ್ವದ ಕೌಶಲ್ಯಗಳು ಹೆಚ್ಚುತ್ತದೆ. ನಿಮಗೆ ಕಚೇರಿಯಲ್ಲಿ ದೊಡ್ಡ ಜವಾಬ್ದಾರಿ ನೀಡಬಹುದು. ವ್ಯಾಪಾರಸ್ಥರಿಗೆ ಕುಟುಂಬದಿಂದ ಸಂಪೂರ್ಣ ಬೆಂಬಲ ದೊರೆಯುತ್ತದೆ. ಇದರಿಂದ ವ್ಯಾಪಾರಸ್ಥರು ಪ್ರಗತಿ ಮತ್ತು ಲಾಭ ಪಡೆಯುತ್ತಾರೆ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯವೂ ಸಹ ಉತ್ತಮವಾಗಿರುತ್ತದೆ.

4/4
ಧನು ರಾಶಿ 
ಧನು ರಾಶಿ 

ಧನು ರಾಶಿಯ 9ನೇ ಮನೆಯಲ್ಲಿ ಬುಧ ಗ್ರಹವು ಅಸ್ತಮಿಸುತ್ತದೆ. ಇದು ಧನು ರಾಶಿಯವರ ವೃತ್ತಿಜೀವನದಲ್ಲಿನ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಪಡೆಯುತ್ತೀರಿ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ವ್ಯಾಪಾರಿಗಳಿಗೆ ಈ ಸಮಯವು ತುಂಬಾ ಅದ್ಭುತವಾಗಿರುತ್ತದೆ. ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯ ಮತ್ತು ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡುಬರಲಿದೆ.





Read More