PHOTOS

ಸರ್ಕಾರಿ ನೌಕರರಿಗೆ ಬಂಪರ್ !ವೇತನದಲ್ಲಿ ಆಗುವುದು ಒಂದು ಲಕ್ಷಕ್ಕಿಂತ ಅಧಿಕ ಹೆಚ್ಚಳ ! ಯಾವ ಲೆಕ್ಕಾಚಾರದಲ್ಲಿ ಎನ್ನುವ ವಿವರ ಇಲ್ಲಿದೆ

ರರಿಗೆ ಸಂಬಳ ಹೆಚ್ಚಳದ ಬಗ್ಗೆ ಹೊಸ ಅಪ್ಡೇಟ್ ಹೊರ ಬಿದ್ದಿದೆ.ಈ ಬಾರಿ ವೇತನದಲ್ಲಿ ಭಾರೀ ಹೆಚ್...

Advertisement
1/8
ಶುಭ ಸಮಾಚಾರ
ಶುಭ ಸಮಾಚಾರ

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಅಪ್‌ಡೇಟ್‌ ಬಂದಿದೆ.ಬಹಳ ದಿನಗಳಿಂದ ಕಾಯುತ್ತಿದ್ದ ಶುಭ ಸಮಾಚಾರ ಸಿಗಲಿದೆ.ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತೊಮ್ಮೆ ಹೆಚ್ಚಳವಾಗಲಿದೆ.ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಮತ್ತೆ ಗಣನೀಯ ಏರಿಕೆಯಾಗಲಿದೆ.

2/8
ಹೆಚ್ಚಳದ ಘೋಷಣೆ
ಹೆಚ್ಚಳದ ಘೋಷಣೆ

ಜುಲೈ 2024 ರಲ್ಲಿ ಹೆಚ್ಚಳದ ಘೋಷಣೆಯನ್ನು ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಮಾಡಲಾಗುವುದು ಎಂದು ಹೇಳಲಾಗಿದೆ.ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳವಾದರೆ, ನೌಕರ ತುಟ್ಟಿಭತ್ಯೆ 1,00,170 ವರೆಗೆ ಪಡೆಯಬಹುದು.ಈ ಹೆಚ್ಚಳವು ದರ್ಜೆಯ ವೇತನ ಮತ್ತು ವೇತನವನ್ನು ಅವಲಂಬಿಸಿ ಬದಲಾಗುತ್ತದೆ.   

3/8
ವೇತನದಲ್ಲಿ ಗಣನೀಯ ಏರಿಕೆ
ವೇತನದಲ್ಲಿ ಗಣನೀಯ ಏರಿಕೆ

7ನೇ ವೇತನ ಆಯೋಗದ ಪ್ರಕಾರ ಡಿಎ ಹೆಚ್ಚಳದಿಂದ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆ ಇದೆ.ಜುಲೈ 2024 ರಿಂದ ಕೇಂದ್ರ ಸರ್ಕಾರಿ ನೌಕರರು ತುಟ್ಟಿ ಭತ್ಯೆಯಲ್ಲಿ ಭಾರಿ ಹೆಚ್ಚಳವನ್ನು ನಿರೀಕ್ಷಿಸಬಹುದು. 7ನೇ ವೇತನ ಆಯೋಗದ ಆವರ್ತಕ ಪರಿಷ್ಕರಣೆಯ ಭಾಗವಾಗಿ ಈ ಹೆಚ್ಚಳವಾಗಿದೆ.

4/8
ಭಾರೀ ಹೆಚ್ಚಳ
ಭಾರೀ ಹೆಚ್ಚಳ

ಜುಲೈ 2024 ರಲ್ಲಿ ತುಟ್ಟಿಭತ್ಯೆಯನ್ನು 3% ಅಥವಾ 4% ರಷ್ಟು ಹೆಚ್ಚಿಸಿದರೆ,ಉದ್ಯೋಗಿಗಳಿಗೆ ಭಾರಿ ವೇತನ ಹೆಚ್ಚಳವಾಗುತ್ತದೆ.ಇದು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೊಡ್ಡ ಪರಿಹಾರವಾಗಲಿದೆ. 

5/8
ಡಿಎ ಹೆಚ್ಚಳ
ಡಿಎ ಹೆಚ್ಚಳ

ಜೂನ್ 2024ರ ಹಣದುಬ್ಬರವನ್ನು ಜನವರಿ 2024ರಿಂದ ಜೂನ್ 2024 ರವರೆಗಿನ AICPI ಸಂಖ್ಯೆಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.ಜೂನ್ 2024ರ AICPI ಸೂಚ್ಯಂಕ ಸಂಖ್ಯೆಗಳು ಇನ್ನೂ ಬಿಡುಗಡೆಯಾಗಬೇಕಿದೆ.ಇದು ಹೊರಬಂದಾಗ ಮಾತ್ರ ಜುಲೈ 2024 ರ ಡಿಎ ಹೆಚ್ಚಳ ಎಷ್ಟಾಗುವುದು ಎನ್ನುವ ಸ್ಪಷ್ಟ ಮಾಹಿತಿ ಸಿಗಲಿದೆ.  

6/8
ಲೆಕ್ಕಾಚಾರ ಹೀಗಿದೆ
ಲೆಕ್ಕಾಚಾರ ಹೀಗಿದೆ

ಉದ್ಯೋಗಿಯ ಮೂಲ ವೇತನ 31,500 ರೂಪಾಯಿ ಆಗಿದ್ದರೆ ಪ್ರಸ್ತುತ  ಸಿಗುತ್ತಿರುವ ತುಟ್ಟಿಭತ್ಯೆ (50%) -  15,750/ತಿಂಗಳಿಗೆ. ಇದನ್ನು 6 ತಿಂಗಳಿಗೆ ಲೆಕ್ಕ ಹಾಕಿದರೆ ಇದು  94,500 ರೂ. ಆಗುತ್ತದೆ. ಹೊಸ ತುಟ್ಟಿಭತ್ಯೆ  ಪ್ರಕಾರ ಅಂದರೆ 53% ದಂತೆ ತಿಂಗಳಿಗೆ 16,695 ರೂಪಾಯಿ,  6 ತಿಂಗಳಿಗೆ  1,00,170 ರೂಪಾಯಿ.  

7/8
ಜುಲೈ ತಿಂಗಳಿನಿಂದಲೇ ಅನ್ವಯ
ಜುಲೈ ತಿಂಗಳಿನಿಂದಲೇ ಅನ್ವಯ

ಇದರಿಂದ ಹಣದುಬ್ಬರ ಹಾಗೂ ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ಬಳಲುತ್ತಿರುವ ನೌಕರರಿಗೆ ಬಹುದೊಡ್ಡ ರಿಲೀಫ್ ಆಗಲಿದೆ.ಡಿಎ ಹೆಚ್ಚಳ ಘೋಷಣೆಯಾದರೆ ಈ ದರವು  ಜುಲೈ ತಿಂಗಳಿನಿಂದಲೇ ಅನ್ವಯವಾಗುವುದು.

8/8
ಸೂಚನೆ :
ಸೂಚನೆ :

ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ.ಆ ಮೂಲಕತುಟ್ಟಿಭತ್ಯೆ  ದರದಲ್ಲಿ ಹೆಚ್ಚಳದ ಗ್ಯಾರಂಟಿ ನೀಡುವುದಿಲ್ಲ.ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.  





Read More