PHOTOS

Mangal Gochar: ಮಾರ್ಚ್‌ನಲ್ಲಿ ಕುಂಭ ರಾಶಿಗೆ ಮಂಗಳನ ಸಂಚಾರ, ನಾಲ್ಕು ರಾಶಿಯವರಿಗೆ ಬಂಪರ್

Mangal Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು ಗ್ರಹಗಳ ಕಮಾಂಡರ್ ಎಂದು ಕರೆಯಲಾಗುತ್ತದೆ. ಮಾರ್ಚ್‌ನಲ್ಲಿ ಮಂಗಳನು ರಾಶಿ ಪರಿವರ್ತನೆ ಹೊಂದಿ ಕುಂಭ ರಾಶಿಗೆ...

Advertisement
1/8
ಮಂಗಳ ರಾಶಿ ಪರಿವರ್ತನೆ
ಮಂಗಳ ರಾಶಿ ಪರಿವರ್ತನೆ

ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಕಮಾಂಡರ್ ಎಂದು ಕರೆಯಲ್ಪಡುವ ಮಂಗಳನು ಮಾರ್ಚ್ ಮಾಸದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರ ಜಾತಕದಲ್ಲಿ ಮಂಗಳ ಬಲವಿದೆಯೋ ಅವರು ಧೈರ್ಯಶಾಲಿ ಮತ್ತು ನಿರ್ಭೀತರು ಆಗಿರುತ್ತಾರೆ. 

2/8
ಮಂಗಳ ಗೋಚಾರ
ಮಂಗಳ ಗೋಚಾರ

ಮಾರ್ಚ್ 15, 2024ರಂದು ಮಂಗಳನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. 

3/8
ಮಂಗಳ ಶನಿ ಯುತಿ
ಮಂಗಳ ಶನಿ ಯುತಿ

ಈಗಾಗಲೇ ಕುಂಭ ರಾಶಿಯಲ್ಲಿ ಶನಿ ಮಹಾತ್ಮ ಉಪಸ್ಥಿತನಿರುವುದರಿಂದ ಕುಂಭ ರಾಶಿಯಲ್ಲಿ ಮಂಗಳನ ಪ್ರವೇಶದೊಂದಿಗೆ ಈ ರಾಶಿಯಲ್ಲಿ ಮಂಗಳ ಶನಿ ಯುತಿ ಸಂಭವಿಸುತ್ತದೆ. 

4/8
ಶನಿ-ಮಂಗಳ ಯುತಿ ಪ್ರಭಾವ
ಶನಿ-ಮಂಗಳ ಯುತಿ ಪ್ರಭಾವ

ಶನಿ ಮತ್ತು ಮಂಗಳರ ಸಂಯೋಗವು ಎಲ್ಲಾ 12 ರಾಶಿಯವರ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೂ, ಈ ಸಮಯವನ್ನು ನಾಲ್ಕು ರಾಶಿಯವರ ದೃಷ್ಟಿಯಿಂದ ತುಂಬಾ ಮಂಗಳಕರ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...   

5/8
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ:  ಕುಂಭ ರಾಶಿಗೆ ಮಂಗಳನ ಪ್ರವೇಶದಿಂದಾಗಿ ಮೇಷ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಉಂಟಾಗಿದ್ದ ಅಡೆತಡೆಗಳು ನಿವಾರಣೆಯಗಳಿವೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ ಪ್ರಾಪ್ತಿಯಾಗಲಿದೆ. ಕೌಟುಂಬಿಕ ಜೀವನ ಆನಂದದಾಯಕವಾಗಿರಲಿದೆ.   

6/8
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿ:  ಕುಂಭ ರಾಶಿಯಲ್ಲಿ ಮಂಗಳ-ಶನಿ ಸಂಯೋಗವು ಸಿಂಹ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ತರಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಮೊದಲಿಗಿಂತ ಸುಧಾರಿಸಲಿದೆ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. 

7/8
ಮಕರ ರಾಶಿ
ಮಕರ ರಾಶಿ

ಮಕರ ರಾಶಿ:  ಮಂಗಳನ ರಾಶಿ ಪರಿವರ್ತನೆಯು ಮಕರ ರಾಶಿಯವರಿಗೂ ಫಲಪ್ರದವಾಗಿರಲಿದೆ. ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿರುವವರು ಈ ಸಮಯದಲ್ಲಿ ಪರಿಹಾರವನ್ನು ಪಡೆಯಲಿದ್ದಾರೆ. ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿದ್ದು, ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯಲಿದೆ.

8/8
ಕುಂಭ ರಾಶಿ
ಕುಂಭ ರಾಶಿ

ಕುಂಭ ರಾಶಿ:  ಸ್ವ ರಾಶಿಯಲ್ಲಿ ಮಂಗಳನ ಪ್ರವೇಶ, ಶನಿ-ಮಂಗಳ ಯುತಿಯಿಂದ ಕುಂಭ ರಾಶಿಯವರ ಅದೃಷ್ಟ ಬೆಳಗಲಿದೆ. ಈ ಸಮಯದಲ್ಲಿ ನೀವು ಕೆಲಸದಲ್ಲಿ ಯಶಸ್ಸು, ಉದ್ಯಮ ರಂಗದಲ್ಲಿ ಭಾರೀ ಲಾಭವನ್ನು ತರಲಿದೆ. ಇದರಿಂದಾಗಿ ಹಣಕಾಸಿನ ಸ್ಥಿತಿ ಸುಧಾರಿಸಲಿದ್ದು, ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಮೂಡಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More