PHOTOS

Mangal Gochar: ಇನ್ನೈದು ದಿನಗಳಲ್ಲಿ ಮಕರ ರಾಶಿಗೆ ಮಂಗಳನ ಪ್ರವೇಶ, ಈ 4 ರಾಶಿಯವರ ಜೀವನದ ಮೇಲೆ ಮಹತ್ವದ ಪರಿಣಾಮ

Mangal Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಕಮಾಂಡರ್ ಎಂತಲೇ ಕರೆಯಲ್ಪಡುವ ಮಂಗಳ ಗ್ರಹ ಶೀಘ್ರದಲ್ಲೇ ರಾಶಿ ಪರಿವರ್ತನೆ ಹೊಂದಲಿದ್ದಾನೆ. ಈ ಸಮಯದಲ್ಲಿ ಮಂಗಳ...

Advertisement
1/8
ಮಂಗಳ ಗೋಚರ
ಮಂಗಳ ಗೋಚರ

ಮಂಗಳ ಗೋಚರ:  ಶೀಘ್ರದಲ್ಲೇ ಗ್ರಹಗಳ ಕಮಾಂಡರ್ ಮಂಗಳ ಗುರುವಿನ ರಾಶಿಚಕ್ರ ಚಿಹ್ನೆ ಧನು ರಾಶಿಯನ್ನು ತೊರೆದು ತನ್ನ ಉಚ್ಛ ರಾಶಿಯಾದ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. 

2/8
ಮಂಗಳ ರಾಶಿ ಬದಲಾವಣೆ
ಮಂಗಳ ರಾಶಿ ಬದಲಾವಣೆ

ಮಂಗಳ ರಾಶಿ ಬದಲಾವಣೆ:  ಫೆಬ್ರವರಿ 06, 2024ರಂದು ಮಕರ ರಾಶಿಗೆ ಪ್ರವೇಶಿಸಲಿರುವ ಮಂಗಳ 2024ರ ಮಾರ್ಚ್ 15 ರವರೆಗೆ ಇದೆ ರಾಶಿಯಲ್ಲಿ ಸಂಚರಿಸಲಿದ್ದಾನೆ. 

3/8
ಮಂಗಳ ಸಂಚಾರದ ಪ್ರಭಾವ
ಮಂಗಳ ಸಂಚಾರದ ಪ್ರಭಾವ

ಮಂಗಳ ಸಂಚಾರದ ಪ್ರಭಾವ:  ಮಂಗಳನ ರಾಶಿ ಬದಲಾವಣೆಯ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಆದರೂ, ಈ ಸಮಯದಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಮಹತ್ವದ ಪರಿಣಾಮ ಕಂಡು ಬರಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ... 

4/8
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ:  ಮಂಗಳ ರಾಶಿ ಪರಿವರ್ತನೆಯು ಮೇಷ ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಈ ಸಮಯದಲ್ಲಿ ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ. 

5/8
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ:  ಮಂಗಳ ರಾಶಿ ಬದಲಾವಣೆಯು ಮಿಥುನ ರಾಶಿಯವರ ಜೀವನದಲ್ಲಿ ಅಶುಭ ಫಲಗಳನ್ನು ತರಲಿದೆ. ಅದರಲ್ಲೂ ನಿಮ್ಮ ಒಡಹುಟ್ಟಿದವರ ಕೋಪ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಇದು ನಿಮ್ಮ ಉದ್ವೇಗಕ್ಕೆ ಕಾರಣವಾಗಬಹುದು. ವಿವಾದಾತ್ಮಕ ವಿಷಯಗಳಿಂದ ದೂರವಿದ್ದರೆ ಒಳ್ಳೆಯದು. ಇದಲ್ಲದೆ, ಆರೋಗ್ಯ ಸಮಸ್ಯೆಗಳು ಕೂಡ ನಿಮ್ಮನ್ನು ಬಾಧಿಸಬಹುದು. 

6/8
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ:  ಮಂಗಳ ಸಂಚಾರ ಬದಲಾವಣೆಯಿಂದ ತುಲಾ ರಾಶಿಯವರು ಮಂಗಳಕರ ಫಲಗಳನ್ನು ಅನುಭವಿಸುವಿರಿ. ಈ ಸಮಯದಲ್ಲಿ ನೀವು ಮನೆ, ಭೂಮಿ, ವಾಹನದಿಂದ ಲಾಭವನ್ನು ಗಳಿಸುವಿರಿ. ವೃತ್ತಿ ಬದುಕಿನಲ್ಲಿ ಪ್ರತಿಯನ್ನು ಕಾಣುವಿರಿ. ಆದಾಗ್ಯೂ, ತಿಂಗಳ ದ್ವಿತೀಯಾರ್ಧದಲ್ಲಿ ಬೆಂಕಿ ಅಪಘಾತದ ಬಗ್ಗೆ ಎಚ್ಚರಿಕೆಯಿಂದ ಇರಿ. 

7/8
ಮಕರ ರಾಶಿ
ಮಕರ ರಾಶಿ

ಮಕರ ರಾಶಿ:  ಮಕರ ರಾಶಿಯವರಿಗೆ ಮಂಗಳ ರಾಶಿ ಬದಲಾವಣೆ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ನೀವು ನಿಮ್ಮ ಕೋಪಕ್ಕೆ ಕಡಿವಾಣ ಹಾಕಲೇಬೇಕು. ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಲು ಆಹಾರ ಪದ್ಧತಿಯ ಮೇಲೆ ಹೆಚ್ಚಿನ ನಿಗಾವಹಿಸಿ.  ಅಪಘಾತಗಳ ಬಗ್ಗೆ ಜಾಗರೂಕರಾಗಿರಿ. ಆದಾಗ್ಯೂ, ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಸಮಯ.

8/8
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More