PHOTOS

Mangal Gochar: ಶೀಘ್ರದಲ್ಲೇ ಮಂಗಳನ ಸಂಚಾರದಲ್ಲಿ ಬದಲಾವಣೆ, ಈ ರಾಶಿಯವರಿಗೆ ಸಿಗಲಿದೆ ಅದೃಷ್ಟದ ಬೆಂಬಲ

Mangal Gochar 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇನ್ನೂ ಕೆಲವೇ ದಿನಗಳಲ್ಲಿ ಮಂಗಳ ರಾಶಿ ಪರಿವರ್ತನೆಯಾಗಲಿದ್ದು, ಇದರ ಪರಿಣಾಮವಾಗಿ ಮೂರು ರಾಶಿಯವರ ಜೀ...

Advertisement
1/8
ಮಂಗಳ ಗೋಚಾರ
ಮಂಗಳ ಗೋಚಾರ

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು ಗ್ರಹಗಳ ಕಮಾನದರ್ ಎಂದು ಕರೆಯಲಾಗುತ್ತದೆ. ಮಂಗಳನ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಯವರ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. 

2/8
ಶೀಘ್ರದಲ್ಲೇ ಮಂಗಳ ಸಂಚಾರ ಬದಲಾವಣೆ
ಶೀಘ್ರದಲ್ಲೇ ಮಂಗಳ ಸಂಚಾರ ಬದಲಾವಣೆ

ಸದ್ಯ ಧನು ರಾಶಿಯಲ್ಲಿ ಸಂಚರಿಸುತ್ತಿರುವ ಮಂಗಳನು ಅತಿ ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. 

3/8
ಫೆಬ್ರವರಿ ಮೊದಲ ವಾರದಲ್ಲಿ ಮಂಗಳ ಸಂಚಾರ ಬದಲಾವಣೆ
ಫೆಬ್ರವರಿ ಮೊದಲ ವಾರದಲ್ಲಿ ಮಂಗಳ ಸಂಚಾರ ಬದಲಾವಣೆ

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಇನ್ನೂ ಹತ್ತು ದಿನಗಳ ಬಳಿಕ ಎಂದರೆ 2024ರ ಫೆಬ್ರವರಿ 5ರಂದು ಮಂಗಳನು ಧನು ರಾಶಿಯಿಂದ ಹೊರಬಂದು ಮಕರ ರಾಶಿಗೆ ಸಂಚರಿಸಲಿದ್ದಾನೆ. 

4/8
ಮೂರು ರಾಶಿಯವರಿಗೆ ಭಾರೀ ಅದೃಷ್ಟ
ಮೂರು ರಾಶಿಯವರಿಗೆ ಭಾರೀ ಅದೃಷ್ಟ

ಮಂಗಳನ ರಾಶಿ ಪರಿವರ್ತನೆ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಅವಧಿಯಲ್ಲಿ ಮೂರು ರಾಶಿಯ ಜನರಿಗೆ ವೃತ್ತಿ, ವ್ಯಾಪಾರ-ವ್ಯವಹಾರ, ಹಣಕಾಸಿನ ವಿಷಯದಲ್ಲಿ ವಿಶೇಷ ಪ್ರಯೋಜನವಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

5/8
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ:  ಮಂಗಳ ಸಂಚಾರದಿಂದಾಗಿ ಮೇಷ ರಾಶಿಯವರು ವಿಶೇಷ ಪ್ರಯೋಜನವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಹಿಂದೆ ಮಾಡಿದ ಹೂಡಿಕೆಗಳಿಂದ ಲಾಭವನ್ನು ಗಳಿಸುವಿರಿ. ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶದ ಫಲವಾಗಿ ಭಾರೀ ಹಣಕಾಸಿನ ಪ್ರಯೋಜನಗಳನ್ನು ಕಾಣುವಿರಿ. ಕೆಲಸದ ಸ್ಥಳದಲ್ಲಿ ಬಡ್ತಿಯ ಸಾಧ್ಯತೆಗಲಿದ್ದು ಒಟ್ಟಾರೆ ಈ ಅವಧಿಯಲ್ಲಿ ನೀವು ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತೀರಿ. 

6/8
ಧನು ರಾಶಿ
ಧನು ರಾಶಿ

ಧನು ರಾಶಿ:   ಮಂಗಳ ರಾಶಿ ಪರಿವರ್ತನೆಯು ಧನು ರಾಶಿಯವರಿಗೂ ಕೂಡ ಫಲಪ್ರದವಾಗಿದೆ. ಈ ಸಮಯದಲ್ಲಿ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಳಿದ್ದು ನೀವು ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಸಂದರ್ಭದಲ್ಲಿ ನಿಮ್ಮ ಆಸೆ ಈಡೇರಲಿದೆ. ಇದರಿಂದ ಭವಿಷ್ಯದಲ್ಲಿ ಲಾಭದ ನಿರೀಕ್ಷೆಯಿದೆ. 

7/8
ಮೀನ ರಾಶಿ
ಮೀನ ರಾಶಿ

ಮೀನ ರಾಶಿ:  ಮಂಗಳನ ರಾಶಿಯ ಬದಲಾವಣೆಯಿಂದಾಗಿ ಮೀನ ರಾಶಿಯವ ಜನರು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಬಂಪರ್ ಲಾಭವನ್ನು ಪಡೆಯಲಿದ್ದಾರೆ. ಉದ್ಯೋಗ ರಂಗದಲ್ಲಿ ನೀವು ಇಷ್ಟು ದಿನಗಳ ಕಾಲ ಎದುರಿಸಿಟ್ಟಿದ್ದ ಅಡೆತಡೆಗಳು ದೂರವಾಗಳಿವೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುವವರಿಗೂ ಒಳ್ಳೆಯ ಸಮಯ ಇದಾಗಿದೆ. 

8/8
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More