PHOTOS

Loksabha Elections 2024: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸುವುದು ಹೇಗೆ? ಇಲ್ಲಿದೆ ಮಾಹಿತಿ

How to add name in Electoral Voter list?: ಚುನಾವಣೆಯಲ್ಲಿ ಮತದಾನ ಮಾಡಬೇಕಾದರೆ ನಿಮ್ಮ ಹೆಸರು ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್...

Advertisement
1/5
18 ವರ್ಷ ವಯಸ್ಸಾಗಿರಬೇಕು
18 ವರ್ಷ ವಯಸ್ಸಾಗಿರಬೇಕು

ಚುನಾವಣೆಯಲ್ಲಿ ಮತದನಾ ಮಾಡಲು ನಿಮಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ ವರ್ಷದ ಜನವರಿ 1 ರಿಂದ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಭಾರತೀಯರಾಗಿರಬೇಕು ಮತ್ತು ಯಾವುದೇ ಕಾನೂನಿನ ಅಡಿ ಅನರ್ಹರಾಗಬಾರದು. 

2/5
ಆನ್‌ಲೈನ್ ನೋಂದಣಿ
ಆನ್‌ಲೈನ್ ನೋಂದಣಿ

ಚುನಾವಣಾ ಆಯೋಗವು ಆನ್‌ಲೈನ್ ನೋಂದಣಿ ಸೌಲಭ್ಯಗಳನ್ನು ಪರಿಚಯಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿರಿ.

3/5
ಫಾರ್ಮ್ 6 ಭರ್ತಿ ಮಾಡಿ
ಫಾರ್ಮ್ 6 ಭರ್ತಿ ಮಾಡಿ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಲು ಆನ್‌ಲೈನ್ ಫಾರ್ಮ್ 6 ಭರ್ತಿ ಮಾಡಬೇಕು. ಈ ಅರ್ಜಿಯಲ್ಲಿ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಸೇರಿದಂತೆ ವೈಯಕ್ತಿಕ ವಿವರಗಳು ಹಾಗೂ ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಅಪ್‌ಲೋಡ್ ಮಾಡಲಾದ ಎಲ್ಲಾ ದಾಖಲೆಗಳು ಮಾನ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ದಾಖಲೆಗಳಲ್ಲಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ಸರ್ಕಾರ ನೀಡಿದ ಗುರುತಿನ ಚೀಟಿ ಇರುತ್ತದೆ.

4/5
ಅಪ್ಲಿಕೇಶನ್ ಸ್ಥಿತಿ ಟ್ರ್ಯಾಕ್
ಅಪ್ಲಿಕೇಶನ್ ಸ್ಥಿತಿ ಟ್ರ್ಯಾಕ್

ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ ಒದಗಿಸಿದ ಮಾಹಿತಿಯನ್ನು ಪರಿಶೀಲಿಸಲು ಬೂತ್ ಮಟ್ಟದ ಅಧಿಕಾರಿ (BLO) ಸ್ಥಳ ಪರಿಶೀಲನೆ ನಡೆಸುತ್ತಾರೆ. ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ ನೀವು ಅದೇ ವಿಳಾಸದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. NVSP ವೆಬ್‌ಸೈಟ್ ಅಥವಾ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಮೂಲಕ ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ನಿಮ್ಮ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಸಹಾಯ ಅಥವಾ ಪ್ರಶ್ನೆಗಳಿಗೆ ನೀವು ಚುನಾವಣಾ ಆಯೋಗದ ಸಹಾಯವಾಣಿಯನ್ನು ಸಂಪರ್ಕಿಸಬಹುದು.

5/5
ತಿದ್ದುಪಡಿ ಮತ್ತು ಅಪ್‌ಡೇಟ್‌
ತಿದ್ದುಪಡಿ ಮತ್ತು ಅಪ್‌ಡೇಟ್‌

ನಿಮ್ಮ ವೋಟರ್‌ ಲಿಸ್ಟ್‌ನಲ್ಲಿ ಯಾವುದೇ ದೋಷಗಳು ಅಥವಾ ಬದಲಾವಣೆ ಮಾಡಬೇಕಾದ ಸಂದರ್ಭದಲ್ಲಿ ಫಾರ್ಮ್‌ 8, ಫಾರ್ಮ್ 8A ಆಯ್ಕೆ ಮಾಡಿಕೊಳ್ಳಬಹುದು. ನಂತರ ತಿದ್ದುಪಡಿ ಮಾಹಿತಿ ಸರಿಪಡಿಸಬಹುದು. ನೀವು ನೇರವಾಗಿ ಹತ್ತಿರದ ಚುನಾವಣಾ ನೋಂದಣಿ ಅಧಿಕಾರಿ (ERO) ಕಚೇರಿ ಅಥವಾ ಮತದಾರರ ಅನುಕೂಲ ಕೇಂದ್ರ (VFC)ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.





Read More