PHOTOS

Leelavathi: ಹಿರಿಯ ನಟಿ ಲೀಲಾವತಿಯವರಿಗೆ ಸಂದ ಪ್ರಮುಖ ಪ್ರಶಸ್ತಿಗಳು

ವರನಟ ಡಾ.ರಾಜಕುಮಾರ್ ಜೊತೆ 36 ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಅಭಿಮಾನಿಗಳನ್ನು ರಂಜಿಸಿದ್ದರು. ಅವರಿಗೆ ದೊರೆತ ಪ್ರ...

Advertisement
1/5
ರಾಜ್ಯ ಪ್ರಶಸ್ತಿ
ರಾಜ್ಯ ಪ್ರಶಸ್ತಿ

‘ತುಂಬಿದ ಕೊಡ’, ‘ಮಹಾತ್ಯಾಗ’, ‘ಭಕ್ತ ಕುಂಬಾರ’, ‘ಸಿಪಾಯಿ ರಾಮು’ ಮತ್ತು ‘ಗೆಜ್ಜೆ ಪೂಜೆ’ ಸಿನಿಮಾಗಳ ನಟನೆಗೆ  ನಟಿ ಲೀಲಾವತಿಯವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. 

2/5
ಫಿಲ್ಮ್ ಫೇರ್​ ಪ್ರಶಸ್ತಿ
ಫಿಲ್ಮ್ ಫೇರ್​ ಪ್ರಶಸ್ತಿ

‘ಕನ್ನಡದ ಕಂದ’ ಚಿತ್ರಕ್ಕೆ ಹಿರಿಯ ನಟಿ ಲೀಲಾವತಿಯವರಿಗೆ ಫಿಲ್ಮ್ ಫೇರ್​ ಪ್ರಶಸ್ತಿ ಕೂಡ ಸಿಕ್ಕಿದೆ.

3/5
2 ರಾಷ್ಟ್ರ ಪ್ರಶಸ್ತಿ
2 ರಾಷ್ಟ್ರ ಪ್ರಶಸ್ತಿ

‘ಮದುವೆ ಮಾಡಿನೋಡು’ ಮತ್ತು ‘ಸಂತ ತುಕಾರಾಮ್​’ ಸಿನಿಮಾಗಳಿಗೆ ಲೀಲಾವತಿಯವರು 2 ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

4/5
ಡಾ.ರಾಜಕುಮಾರ್​ ಪ್ರಶಸ್ತಿ
ಡಾ.ರಾಜಕುಮಾರ್​ ಪ್ರಶಸ್ತಿ

ಜೀವಮಾನ ಸಾಧನೆಗಾಗಿ ನಟಿ ಲೀಲಾವತಿಯವರು 1999ರಲ್ಲಿ ‘ಡಾ.ರಾಜಕುಮಾರ್​ ಪ್ರಶಸ್ತಿ’ ಪಡೆದುಕೊಂಡರು.

5/5
ಗೌರವ ಡಾಕ್ಟರೇಟ್​
ಗೌರವ ಡಾಕ್ಟರೇಟ್​

2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ನಟಿ ಲೀಲಾವತಿಯವರಿಗೆ ಗೌರವ ಡಾಕ್ಟರೇಟ್​ ನೀಡಿ ಗೌರವಿಸಲಾಗಿದೆ.





Read More