PHOTOS

ಅತಿಯಾದ ಸೋಮಾರಿಗಳಾಗಿರುತ್ತಾರೆ ಈ ರಾಶಿಯವರು.!

ಳ ಪ್ರಕಾರ, ವ್ಯಕ್ತಿಯ ಸ್ವಭಾವವನ್ನು ನಿರ್ಧರಿಸಲಾಗುತ್ತದೆ. ಕೆಲವು ರಾಶಿಯಲ್ಲಿ ಜನಿಸಿದವರು ವಿಪರಿತ ಸೋಮಾರಿಗಳಾ...

Advertisement
1/4
ಧನು ರಾಶಿ
ಧನು ರಾಶಿ

ಧನು ರಾಶಿಯವರು ತಿರುಗಾಡುವ ವಿಚಾರದಲ್ಲಿ ಬಹಳ  ಸೋಮಾರಿಗಳಾಗಿರುತ್ತಾರೆ.  ಪದೇ ಪದೇ ಎದ್ದು ನಡೆಯುವುದು ಈ ರಾಶಿಯವರಿಗೆ ಇಷ್ಟವಾಗುವುದಿಲ್ಲ. ಸಡಾ ಕುಳಿತುಕೊಂಡು ಆರಾಮ ಮಾಡುವುದೆಂದರೆ ಇವರಿಗೆ ಬಹಳ ಇಷ್ಟ. ಧನು ರಾಶಿಯವರು ಎಷ್ಟು ಸೋಮಾರಿಗಳೆಂದರೆ ತಿನ್ನಲು ಎದ್ದೇಳುವುದು ಕೂಡಾ ಅವರಿಗೆ  ಇಷ್ಟವಾಗುವುದಿಲ್ಲ. 

2/4
ಮೀನ ರಾಶಿ
ಮೀನ ರಾಶಿ

ಮೀನ ರಾಶಿಯವರು ಸಂಪೂರ್ಣವಾಗಿ ಸೋಮಾರಿಗಳಾಗಿರುವುದಿಲ್ಲ. ಅವರ ಸೋಮಾರಿತನವು ಸಮಯ ಮತ್ತು ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಅವರ ಮೂಡ್ ಸರಿಯಾಗಿದ್ದರೆ ಎಲ್ಲಾ ಕೆಲಸಗಳನ್ನೂ ಖುಷಿಯಿಂದ ಮಾಡುತ್ತಾರೆ. ಆದರೆ ಮೂಡ್ ಸರಿಯಿಲ್ಲದಿದ್ದರೆ ಸ್ವಲ್ಪ ಓಡಾಟವನ್ನು  ಕೂಡಾ ಅವರು ಸಹಿಸುವುದಿಲ್ಲ. 

3/4
ಕುಂಭ ರಾಶಿ
ಕುಂಭ ರಾಶಿ

ಕುಂಭ ರಾಶಿಯವರು ಯಾವುದೇ ಕೆಲಸವನ್ನು ಮತ್ತೆ ಮತ್ತೆ ಮಾಡಲು ಇಷ್ಟಪಡುವುದಿಲ್ಲ.  ಈ ರಾಶಿಯವರು ಹೆಚ್ಚು ಕಷ್ಟಕರವಾದ ವೃತ್ತಿಯನ್ನು ಆರಿಸಿಕೊಳ್ಳುವುದರಿಂದ ದೂರ ಉಳಿಯುತ್ತಾರೆ. ಇವರಿಗೆ ಏನೇ ಕೆಲಸ ಆಗಬೇಕಾದರೂ ಬಹಲ್ ಸುಲಭವಾಗಿ ಆಗಬೇಕು. ಸುಲಭವಾದ ಕೆಲಸಗಳನ್ನು ಮಾಡಲು ಮಾತ್ರ ಅವರು ಇಷ್ಟಪಡುತ್ತಾರೆ. ಆದರೂ ಈ ರಾಶಿಯವರಿಗೆ ಏನಾದರೂ ಜವಾಬ್ದಾರಿ ಕೊಟ್ಟರೆ ಅದರಿಂದ ಹಿಂದೆ ಸರಿಯುವುದಿಲ್ಲ. 

4/4
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿಯವರು ಎಲ್ಲರ ಗಮನ ಸೆಳೆಯಲು ಇಷ್ಟಪಡುತ್ತಾರೆ. ಶೀಘ್ರದಲ್ಲೇ ಜನಪ್ರಿಯರಾಗಲು ಬಯಸುತ್ತಾರೆ. ನೃತ್ಯ ಮತ್ತು ಹಾಡುಗಳಂತಹ ಸೃಜನಶೀಲ ಕೆಲಸಗಳಲ್ಲಿ ಅವರಿಗೆ ಆಸಕ್ತಿ ಹೆಚ್ಚು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರು ಕಠಿಣ ಪರಿಶ್ರಮದಿಂದ ದೂರ ಓಡುತ್ತಾರೆ. ಸಿಂಹ ರಾಶಿಯವರು ಒತ್ತಡಕ್ಕೆ ಒಳಗಾಗುತ್ತಾರೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More