PHOTOS

ಸುಕನ್ಯಾ ಸಮೃದ್ದಿ ಯೋಜನೆಯಲ್ಲಾದ ಐದು ಪ್ರಮುಖ ಬದಲಾವಣೆಗಳನ್ನು ತಿಳಿಯಿರಿ

್ಲಿಟ್ಟುಕೊಂಡು ಮೋದಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ‘ಸುಕನ್ಯಾ ...

Advertisement
1/5
ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಖಾತೆಯನ್ನು ಮುಚ್ಚಬಹುದು
ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಖಾತೆಯನ್ನು ಮುಚ್ಚಬಹುದು

ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ತೆರೆಯಲಾದ ಖಾತೆಯನ್ನು ಮೊದಲ ಎರಡು ಸಂದರ್ಭಗಳಲ್ಲಿ ಮುಚ್ಚಬಹುದು. ಮೊದಲನೆಯದು ಮಗಳು ಮೃತಪಟ್ಟರೆ ಮತ್ತು ಎರಡನೆಯದ್ದು,  ಮಗಳ ವಿಳಾಸ ಬದಲಾದರೆ.  ಆದರೆ ಹೊಸ ಬದಲಾವಣೆಯ ನಂತರ ಖಾತೆದಾರರು, ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೂ ಇದನ್ನೂ ಮುಚ್ಚಬಹುದು. ಮತ್ತು ರಕ್ಷಕನ ಮರಣದ ಸಂದರ್ಭದಲ್ಲಿಯೂ ಖಾತೆಯನ್ನು ಅವಧಿಗೆ ಮುನ್ನ ಮುಚ್ಚಬಹುದು.  

2/5
ಈಗ ‘ಮೂರನೇ’ ಮಗಳ ಖಾತೆಯನ್ನೂ ತೆರೆಯಬಹುದು
ಈಗ ‘ಮೂರನೇ’ ಮಗಳ ಖಾತೆಯನ್ನೂ ತೆರೆಯಬಹುದು

ಈ ಯೋಜನೆಯಲ್ಲಿ ಮೊದಲು, 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವು ಇಬ್ಬರು ಹೆಣ್ಣುಮಕ್ಕಳ ಖಾತೆಗೆ ಮಾತ್ರ ಲಭ್ಯವಿತ್ತು. ಈಗ ಇದರ ಪ್ರಯೋಜನ ಮೂರನೇ ಮಗಳ ಖಾತೆಗೂ ಸಿಗಲಿದೆ. ಹೊಸ ನಿಯಮದ ಪ್ರಕಾರ, ಒಂದು ಹೆಣ್ಣು ಮಗುವಿನ ನಂತರ ಇಬ್ಬರು ಅವಳಿ ಹೆಣ್ಣುಮಕ್ಕಳು ಜನಿಸಿದರೆ, ಇಬ್ಬರಿಗೂ ಖಾತೆ ತೆರೆಯಲು ಅವಕಾಶವಿದೆ.

3/5
ಡೀಫಾಲ್ಟ್ ಖಾತೆಯಲ್ಲಿ ಬಡ್ಡಿ ದರ ಬದಲಾಗುವುದಿಲ್ಲ
ಡೀಫಾಲ್ಟ್ ಖಾತೆಯಲ್ಲಿ ಬಡ್ಡಿ ದರ ಬದಲಾಗುವುದಿಲ್ಲ

ವಾರ್ಷಿಕವಾಗಿ ಖಾತೆಯಲ್ಲಿ ಕನಿಷ್ಠ 250 ರೂ. ಹೂಡಿಕೆ ಮಾಡುವುದು ಅನಿವಾರ್ಯ. ಈ ಮೊತ್ತವನ್ನು ಠೇವಣಿ ಮಾಡದಿದ್ದಲ್ಲಿ, ಖಾತೆಯನ್ನು ಡಿಫಾಲ್ಟ್ ಎಂದು ಪರಿಗಣಿಸಲಾಗುತ್ತದೆ. ಆದರೆ ಹೊಸ ನಿಯಮಗಳ ಪ್ರಕಾರ, ಖಾತೆಯನ್ನು ಮತ್ತೆ ಸಕ್ರಿಯಗೊಳಿಸದಿದ್ದರೆ, ಮುಕ್ತಾಯದವರೆಗೆ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಅನ್ವಯವಾಗುವ ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುವುದು. ಹಿಂದೆ, ಡೀಫಾಲ್ಟ್ ಖಾತೆಗಳು ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಅನ್ವಯವಾಗುವ ದರದಲ್ಲಿ ಬಡ್ಡಿಗೆ ಅರ್ಹತೆ ಹೊಂದಿದ್ದವು.  

4/5
ಖಾತೆಯನ್ನು ನಿರ್ವಹಿಸುವ ನಿಯಮಗಳು
ಖಾತೆಯನ್ನು ನಿರ್ವಹಿಸುವ ನಿಯಮಗಳು

ಮಗಳು 10 ವರ್ಷಗಳ ನಂತರ ಮಾತ್ರ ಖಾತೆಯನ್ನು ನಿರ್ವಹಿಸಬಹುದೆಂಬ ನಿಯಮ ಮೊದಲು ಇತ್ತು. ಆದರೆ ಹೊಸ ನಿಯಮಗಳ ಪ್ರಕಾರ, ಮಗಳು 18 ವರ್ಷಕ್ಕಿಂತ ಮೊದಲು ಖಾತೆಯನ್ನು ನಿರ್ವಹಿಸಲು ಅನುಮತಿಸುವುದಿಲ್ಲ. ಅದಕ್ಕೂ ಮೊದಲು, ಪೋಷಕರು ಮಾತ್ರ ಖಾತೆಯನ್ನು ನಿರ್ವಹಿಸುವುಡು ಸಾಧ್ಯವಾಗುತ್ತದೆ. 

5/5
ಈ ವಿಚಾರ ತಿಳಿದುಕೊಳ್ಳುವುದು ಬಹಳ ಮುಖ್ಯ
ಈ ವಿಚಾರ ತಿಳಿದುಕೊಳ್ಳುವುದು ಬಹಳ ಮುಖ್ಯ

ಹೊಸ ನಿಯಮಗಳ ಅಡಿಯಲ್ಲಿ, ಖಾತೆಯಲ್ಲಿನ ತಪ್ಪಾಗಿ ಹಾಕಲಾಗುವ ಬಡ್ಡಿಯನ್ನು ಹಿಂತಿರುಗಿಸುವ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಇದಲ್ಲದೆ, ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಯ ವಾರ್ಷಿಕ ಬಡ್ಡಿಯನ್ನು ಜಮಾ ಮಾಡಲಾಗುತ್ತದೆ.





Read More