PHOTOS

KL Rahul : ಟೆಸ್ಟ್‌ಗೂ ಮುನ್ನ ಉಜ್ಜಯಿನಿ ದೇವಸ್ಥಾನಕ್ಕೆ ಭೇಟಿ ನೀಡಿದ ಕೆಎಲ್ ರಾಹುಲ್ ದಂಪತಿ! 

etty : ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಸದ್ಯ ಅತ್ಯಂತ ಕಳಪೆ ಫಾರ್ಮ್‌ನಿಂದಾಗಿ ಸಂಕಷ್ಟದಲ್ಲಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ...

Advertisement
1/5

ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಇಂದೋರ್ ಟೆಸ್ಟ್‌ಗೂ ಮುನ್ನ ಉಜ್ಜಯಿನಿಯ ಮಹಾಕಾಲ್ ದೇವಸ್ಥಾನಕ್ಕೆ ಆಗಮಿಸಿ ಭಸ್ಮ ಆರತಿಯಲ್ಲಿ ಪಾಲ್ಗೊಂಡರು.

2/5

ಈ ಜೋಡಿಯ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕೆಎಲ್ ರಾಹುಲ್ ಹಳದಿ ಬಣ್ಣದ ಧೋತಿ ಧರಿಸಿರುವುದನ್ನ ಫೋಟೋದಲ್ಲಿ ನೋಡಬಹುದು. ಹಾಗೆ, ಅಥಿಯಾ ಶೆಟ್ಟಿ ಕೂಡ ಹಳದಿ ಬಣ್ಣದ ಸೂಟ್ ಧರಿಸಿದ್ದಾರೆ.

3/5

ಆಸ್ಟ್ರೇಲಿಯಾ ಸರಣಿಯಲ್ಲಿ ಸತತ ಸೋಲು ಕಂಡಿರುವ ಕಾರಣ ಅವರನ್ನು ತಂಡದಿಂದ ಕೈಬಿಡಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. 

4/5

ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಈ ವರ್ಷದ ಆರಂಭದಲ್ಲಿ ಜನವರಿ 23 ರಂದು ವಿವಾಹವಾದರು. ಮದುವೆಯಾದ 1 ತಿಂಗಳ ನಂತರ, ಇಬ್ಬರೂ ಬಾಬಾ ಮಹಾಕಾಲ್ ಆಶೀರ್ವಾದ ಪಡೆಯಲು ಬಂದಿದ್ದಾರೆ.

5/5

ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಮಾರ್ಚ್ 1 ರಿಂದ ನಡೆಯಲಿದೆ. ಕೆಎಲ್ ರಾಹುಲ್ ಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.





Read More