PHOTOS

Kitchen Vastu: ಅಡುಗೆಮನೆಯಲ್ಲಿ ವಾಸ್ತು ದೋಷ ನಿವಾರಣೆಗೆ ಸುಲಭ ಮಾರ್ಗ

Kitchen Vastu: ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಅದು ಮನೆಯ ಹಣಕಾಸಿನ ಸ್ಥಿತಿ, ವೃತ್ತಿ ಬದುಕಿನ ಮೇಲೆ ನಕಾರಾತ್ಮಕ ಪರಿಣಾಮವನ್...

Advertisement
1/7
ಅಡುಗೆ ಮನೆಯಲ್ಲಿ ವಾಸ್ತು ದೋಷ
ಅಡುಗೆ ಮನೆಯಲ್ಲಿ ವಾಸ್ತು ದೋಷ

ಅಡುಗೆ ಮನೆಯಲ್ಲಿರುವ ವಾಸ್ತು ದೋಷಗಳು ಮನೆಯ ಆರ್ಥಿಕ ಬದುಕು, ವೃತ್ತಿ ಬದುಕಿನ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯಲ್ಲಿ ವಾಸ್ತು ದೋಷ ನಿವಾರಣೆಗೆ ಕೆಲವು ವಿಚಾರಗಳ ಬಗ್ಗೆ ವಿಶೇಷ ಗಮನ ಅಗತ್ಯವಿದೆ. ಅವುಗಳೆಂದರೆ... 

2/7
ಕೆಂಪು ಬಣ್ಣದ ಬಲ್ಬ್
ಕೆಂಪು ಬಣ್ಣದ ಬಲ್ಬ್

ಮನೆಯಲ್ಲಿ ದಿಕ್ಕಿಗೆ ಅನುಗುಣವಾಗಿಯೇ ಅಡುಗೆ ಮನೆ ನಿರ್ಮಿಸದಿದ್ದರೆ ವಾಸ್ತು ದೋಷ ಉಂಟಾಗುತ್ತದೆ. ಇದರ ದುಷ್ಪರಿಣಾಮಗಳನ್ನು ತಪ್ಪಿಸಲು ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಕೆಂಪು ಬಣ್ಣದ ಬಲ್ಬ್ ಸದಾ ಉರಿಯುತ್ತಿರುವಂತೆ ಕ್ರಮ ಕೈಗೊಳ್ಳಿ. 

3/7
ಗೋಡೆಯ ಬಣ್ಣ
ಗೋಡೆಯ ಬಣ್ಣ

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯ ಗೋಡೆಗಳ ಮೇಲೆ ಯಾವುದೇ ಕಾರಣಕ್ಕೂ ನೀಲಿ, ಕಪ್ಪು ಬಣ್ಣವನ್ನು ಬಳಸಬಾರದು. ಇದರ ಬದಲಿಗೆ ತಿಳಿ ಕಿತ್ತಳೆ, ಕ್ರೀಂ ಸೇರಿದಂತೆ ಲೈಟ್ ಬಣ್ಣಗಳನ್ನು ಬಳಸುವುದರಿಂದ ಅಡುಗೆ ಮನೆ ವಾಸ್ತು ದೋಷವನ್ನು ನಿವಾರಿಸಬಹುದು. 

4/7
ಸ್ವಸ್ತಿಕ
ಸ್ವಸ್ತಿಕ

ಅಡುಗೆ ಮನೆಯಲ್ಲಿ ಕಪ್ಪು ಕಲ್ಲು ಅಥವಾ ಗ್ರಾನೈಟ್ ಬಳಕೆಯಿಂದ ವಾಸ್ತು ದೋಷ ಉಂಟಾಗುತ್ತದೆ. ಇದನ್ನು ತಪ್ಪಿಸಲು ಸ್ವಸ್ತಿಕ ಚಿಹ್ನೆಯನ್ನು ಬಳಸಿ. 

5/7
ಸ್ಕ್ರೀನ್ ಬಳಕೆ
ಸ್ಕ್ರೀನ್ ಬಳಕೆ

ಇತ್ತೀಚಿನ ದಿನಗಳಲ್ಲಿ ಓಪೆನ್ ಕಿಚನ್ ಹೆಚ್ಚು ಪ್ರಚಲಿತದಲ್ಲಿದೆ. ಒಂದೊಮ್ಮೆ ನಿಮ್ಮ ಮನೆಯಲ್ಲಿ ಮುಖ್ಯ ದ್ವಾರದ ಮುಂದೆ ಅಡುಗೆ ಮನೆ ಇದ್ದರೆ ಇದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ವಾಸ್ತು ದೋಷವನ್ನು ನಿವಾರಿಸಲು ಅಡುಗೆ ಮನೆಗೆ ಒಂದು ಸ್ಕ್ರೀನ್ ಹಾಕುವುದು ಪ್ರಯೋಜನಕಾರಿ ಆಗಿದೆ. 

6/7
ಸ್ವಚ್ಛತೆ
ಸ್ವಚ್ಛತೆ

ಅಡುಗೆ ಮನೆಯಲ್ಲಿ ಎಂದಿಗೂ ಕೊಳಕು ಬಿಡಬೇಡಿ. ಇದೂ ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಅಡುಗೆಮನೆ ಸ್ವಚ್ಛತೆ ಜೊತೆಗೆ ಸಿಂಕ್ ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. 

7/7
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More