PHOTOS

ಹಲ್ಲುಜ್ಜುವ ಬ್ರಷ್ ಅನ್ನು ಬಾತ್ ರೂಮ್ ನಲ್ಲಿ ಇಡ್ತೀರಾ! ಎಷ್ಟೊಂದು ಅಪಾಯಕಾರಿ ಗೊತ್ತಾ?

h in the bathroom: ಕೆಲವರು ಟೂತ್ ಬ್ರಷ್ ಗಳನ್ನು ಬಾತ್ ರೂಂನಲ್ಲಿ ಸಿಂಕ್ ಪಕ್ಕ ಅಥವಾ ಬೇಸಿನ್ ಬಳಿ ಇಡುತ್ತಾರೆ. ಆದರೆ ಇದು ಎಷ್ಟು ಅಪಾ...

Advertisement
1/7
ಟೂತ್ ಬ್ರಷ್
ಟೂತ್ ಬ್ರಷ್

ಬಹುತೇಕ ಎಲ್ಲರೂ ಬೆಳಿಗ್ಗೆ ಬ್ರಷ್ ಮಾಡುತ್ತಾರೆ. ಕೆಲವರು ಬ್ರಷ್ ಗಳನ್ನು ಬಾತ್ ರೂಂನಲ್ಲಿ ಇಡುತ್ತಾರೆ. ಇದನ್ನು ಮಾಡುವುದು ತುಂಬಾ ಅಪಾಯಕಾರಿ.

2/7
ಟೂತ್ ಬ್ರಷ್
ಟೂತ್ ಬ್ರಷ್

ಬಾತ್‌ರೂಮ್‌ನಲ್ಲಿ ಇಟ್ಟ ಬ್ರಷ್ ಮೇಲೆ ಸೂಕ್ಷ್ಮಜೀವಿಗಳು ಕೂರಬಹುದು. ಇದನ್ನು ಬಾಯಿಗೆ ಹಾಕಿಕೊಂಡಾಗ ಅವು ನಮ್‌ಮ ದೇಹವನ್ನು ಸೇರಬಹದು. ಈ ರೋಗಾಣು ನೇರವಾಗಿ ಹೊಟ್ಟೆ ಸೇರಿ, ಆರೋಗ್ಯಕ್ಕೆ ಹಾನಿ ಮಾಡಬಹುದು.

3/7
ಟೂತ್ ಬ್ರಷ್
ಟೂತ್ ಬ್ರಷ್

ಕೆಲವೊಮ್ಮೆ ಈ ಸೂಕ್ಷ್ಮ ಜೀವಿಗಳು ಹೊಟ್ಟೆ ನೋವು, ವಾಂತಿಗೆ ಕಾರಣವಾಗಬಹುದು. ಕೆಲವರು ತೀವ್ರವಾದ ಜೀರ್ಣಕಾರಿ ಸಮಸ್ಯೆಗಳನ್ನು ಸಹ ಅನುಭವಿಸುತ್ತಾರೆ. 

4/7
ಟೂತ್ ಬ್ರಷ್
ಟೂತ್ ಬ್ರಷ್

ಕೆಲವರಿಗೆ ಆಗಾಗ್ಗೆ ಅಲರ್ಜಿ ಇರುತ್ತದೆ. ನಾಲಿಗೆ ಕೆಂಪಾಗುತ್ತದೆ. ಬಾಯಿಯಲ್ಲಿ ಹುಣ್ಣಾಗಿ ನೋಯುತ್ತದೆ. ರಕ್ತಸ್ರಾವವೂ ಆಗಬಹುದು. ಇದಕ್ಕೂ ಸಹ ಬಾತ್‌ರೂಮ್‌ನಲ್ಲಿ ಇಡುವ ಬ್ರಷ್‌ ಕಾರಣವಾಗಬಹುದು.

5/7
ಟೂತ್ ಬ್ರಷ್
ಟೂತ್ ಬ್ರಷ್

ಕೆಲವು ಚಿಕ್ಕ ಮಕ್ಕಳು ಬಾತ್ ರೂಮ್‌ನಲ್ಲಿ ಕುಳಿತು ಹಲ್ಲುಜ್ಜುತ್ತಾರೆ. ಆದರೆ ಹೀಗೆ ಮಾಡುವುದರಿಂದ ಹಾನಿಕಾರಕ ಸೂಕ್ಷ್ಮಾಣುಗಳು ನೇರವಾಗಿ ಹೊಟ್ಟೆಯೊಳಗೆ ಹೋಗುತ್ತವೆ. ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಮಕ್ಕಳು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ.

6/7
ಟೂತ್ ಬ್ರಷ್
ಟೂತ್ ಬ್ರಷ್

ನಾವು ಬಳಸುವ ಬ್ರಷ್ ಗಳನ್ನು ನಾಲ್ಕು ತಿಂಗಳಿಗೊಮ್ಮೆ ಬದಲಾಯಿಸಬೇಕು. ಬಾತ್ ರೂಮ್‌ ಒಳಗೆ ಎಂದಿಗೂ ಇಡಬಾರದು. ಹಲ್ಲುಜ್ಜುವ ಮೊದಲು ಮತ್ತು ನಂತರ ಬೆಚ್ಚಗಿನ ನೀರಿನಿಂದ ಬ್ರಷ್ ಅನ್ನು ಸ್ವಚ್ಛಗೊಳಿಸಿ.

7/7
ಟೂತ್ ಬ್ರಷ್
ಟೂತ್ ಬ್ರಷ್

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More