PHOTOS

ದೇವರ ಮನೆಯಲ್ಲಿ ಇಟ್ಟಿರುವ ಈ ವಸ್ತುಗಳಿಂದ ಎದುರಾಗಬಹುದು ಸಮಸ್ಯೆ.!

ಮನೆಯ ದೇವಸ್ಥಾನದಲ್ಲಿ ಯಾವ ವಸ್ತುಗಳನ್ನು ಇಡಬೇಕು, ಯಾವ ವಸ್ತುಗಳನ್ನು ಇಡಬಾರದು. ಯಾವುದು ಯಾವ ದಿಕ್ಕಿನಲ್ಲಿದ್ದರೆ ಶ್ರೇಯಸ್ಕರ ಎನ್ನುವುದನ್ನು ತಿಳಿಸಲಾಗಿದೆ. &n...

Advertisement
1/5
ಹರಿದು ಹೋಗಿರುವ ಧಾರ್ಮಿಕ ಪುಸ್ತಕಗಳು
 ಹರಿದು ಹೋಗಿರುವ ಧಾರ್ಮಿಕ ಪುಸ್ತಕಗಳು

ಪೂಜೆ ಮಾಡುವ ಕೋಣೆಯಲ್ಲಿ ಎಂದಿಗೂ ಹರಿದ ಪುಸ್ತಕಗಳು ಇರಬಾರದು ಎನ್ನುತ್ತಾರೆ ವಾಸ್ತು ತಜ್ಞರು.  ಅಂತಹ ಯಾವುದೇ ಪುಸ್ತಕ ನಿಮ್ಮ ದೇವರ ಮನೆಯಲ್ಲಿದ್ದರೆ ತಕ್ಷಣ ಅದನ್ನು ತೆಗೆದು,  ನೀರಿನಲ್ಲಿ ವಿಸರ್ಜಿಸಿ.  

2/5
ಮುರಿದ ಅಕ್ಷತೆ :
ಮುರಿದ ಅಕ್ಷತೆ :

ಹಿಂದೂ ಧರ್ಮದಲ್ಲಿ ಕೆಲವು ದೇವರು ಮತ್ತು ದೇವತೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ದೇವರು ಮತ್ತು ದೇವತೆಗಳಿಗೆ ಅಕ್ಷತೆಯನ್ನು ಅರ್ಪಿಸಲಾಗುತ್ತದೆ. ಆದರೆ ಒಡೆದ ಅಕ್ಕಿಯನ್ನು ಎಂದಿಗೂ ಪೂಜಾ ಮನೆಯಲ್ಲಿ ಇಡಬಾರದು.  ಒಡೆದ ಅಕ್ಕಿ ಕಾಲುಗಳು ದೇವರ ಕೋಣೆಯಲ್ಲಿದ್ದರೆ ತಕ್ಷಣ ಅವುಗಳನ್ನು ತೆಗೆದು ಸಂಪೂರ್ಣ ಅಕ್ಕಿಯನ್ನು ಇಟ್ಟುಕೊಳ್ಳಿ. 

3/5
ದೇವರ ರೌದ್ರಾವತಾರದ ಮೂರ್ತಿ :
 ದೇವರ ರೌದ್ರಾವತಾರದ ಮೂರ್ತಿ :

ವಾಸ್ತು ಶಾಸ್ತ್ರದ ಪ್ರಕಾರ, ಕ್ರೋಧದ ರೂಪದಲ್ಲಿರುವ ದೇವತೆಗಳ ವಿಗ್ರಹವನ್ನು ಪೂಜಾ ಮನೆಯಲ್ಲಿ ಪ್ರತಿಷ್ಠಾಪಿಸಬಾರದು. ಹೀಗೆ ಮಾಡಿದರೆ ಮನೆಯಲ್ಲಿ ದುರಾದೃಷ್ಟ ಬರುತ್ತದೆ ಎಂಬ ನಂಬಿಕೆ ಇದೆ.   

4/5
ಪಿತೃಗಳ ಫೋಟೋ :
 ಪಿತೃಗಳ ಫೋಟೋ :

ಹಿಂದೂ ಧರ್ಮದಲ್ಲಿ, ಪೂರ್ವಜರನ್ನು ಪೂಜ್ಯನೀಯ  ಎಂದು ಪರಿಗಣಿಸಲಾಗುತ್ತದೆ. ಆದರೆ ಅವರಿಗೆ ಯಾವತ್ತೂ  ದೇವರ ಮನೆಯಲ್ಲಿ ಸ್ಥಾನ ನೀಡಬಾರದು.ಹೀಗೆ ಮಾಡುವುದರಿಂದ ಮನೆಯ ಮೇಲೆ ಅಶುಭ ಪರಿಣಾಮ ಬೀರುತ್ತದೆ.   

5/5
ಛಿದ್ರಗೊಂಡ ಮೂರ್ತಿಗಳು :
ಛಿದ್ರಗೊಂಡ ಮೂರ್ತಿಗಳು :

ವಾಸ್ತು ಶಾಸ್ತ್ರ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ, ದೇವಾಲಯದಲ್ಲಿ ದೇವರು ಮತ್ತು ದೇವತೆಗಳ  ಮುರಿದ ವಿಗ್ರಹಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಒಡೆದ ಮತ್ತು ಮುರಿದ ವಿಗ್ರಹಗಳನ್ನು  ದೇವರ ಮನೆಯಲ್ಲಿ ಇಡಬಾರದು ಎಂದು ವಾಸ್ತುದಲ್ಲಿ ಹೇಳಲಾಗಿದೆ. ಹೀಗೆ ಮಾಡಿದರೆ ಪೂಜೆಯ ಪೂರ್ಣ ಫಲ ಸಿಗುವುದಿಲ್ಲ. ಅಲ್ಲದೆ, ನಕಾರಾತ್ಮಕ ಶಕ್ತಿಯು ಮನೆಯಲ್ಲಿ ನೆಲೆಸುತ್ತದೆ. 





Read More