PHOTOS

QR Code ಮೂಲಕ ಪೇಮೆಂಟ್ ಮಾಡುವಾಗ ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ..!

ಂತಹ ಎಲ್ಲಾ ಅಪ್ಲಿಕೇಶನ್‌ಗಳೊಂದಿಗೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡ...

Advertisement
1/5
ಯಾವ ವೆಬ್‌ಸೈಟ್ QR ಕೋಡ್ ತೆಗೆದುಕೊಳ್ಳುತ್ತಿದೆ ಎಂಬುದನ್ನು ಗಮನಿಸಿ
ಯಾವ ವೆಬ್‌ಸೈಟ್ QR ಕೋಡ್ ತೆಗೆದುಕೊಳ್ಳುತ್ತಿದೆ ಎಂಬುದನ್ನು ಗಮನಿಸಿ

QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ಪೇಮೆಂಟ್ ಮಾಡುವಾಗ ಕೆಲವೊಮ್ಮೆ ಕೋಡ್‌ಗಳು  ಇತರ ವೆಬ್‌ಸೈಟ್‌ಗಳಿಗೆ ಕರೆದೊಯ್ಯುತ್ತವೆ. ಇಲ್ಲಿ  URL ಅನ್ನು ಓದಿಕೊಳ್ಳಿ. ಏಕೆಂದರೆ ಸ್ಕ್ಯಾಮ್‌ಗಳನ್ನು ಇದೇ ರೀತಿಯ ವಿಧಾನಗಳ ಮೂಲಕ ನಡೆಸಲಾಗುತ್ತದೆ.

2/5
QR ಕೋಡ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಡಿ
QR ಕೋಡ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಡಿ

QR ಕೋಡ್ ಅನ್ನು ಸ್ಕ್ಯಾನ್ ಮಾಡುವಾಗ, ಯಾವುದಾದರೂ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಲಿಂಕ್ ಬಂದರೆ ಹುಷಾರಾಗಿರಿ. ಯಾವುದೇ ಅಪ್ಲಿಕೇಶನ್ ಅನ್ನು  ಆಪ್ ಸ್ಟೋರ್ ಅಥವಾ Google Play Storeನಿಂದ ಮಾತ್ರವೇ ಡೌನ್‌ಲೋಡ್ ಮಾಡಿಕೊಳ್ಳಿ. 

3/5
ಮೇಲ್‌ನಲ್ಲಿ ಬರುವ QR ಕೋಡ್ ಅನ್ನು ಬಳಸಬೇಡಿ :
ಮೇಲ್‌ನಲ್ಲಿ ಬರುವ QR ಕೋಡ್ ಅನ್ನು ಬಳಸಬೇಡಿ :

ಅನೇಕ ಬಾರಿ ಹ್ಯಾಕರ್‌ಗಳು  ಮೇಲ್‌ ಮೂಲಕ ಕ್ಯೂಆರ್ ಕೋಡ್‌ಗಳನ್ನು ಕಳುಹಿಸುತ್ತಾರೆ, ಪೇಮೆಂಟ್ ವಿಫಲವಾದರೆ ಅದನ್ನು ಬಳಸುವಂತೆ ಕೋರಲಾಗುತ್ತದೆ. ಮೇಲ್ ನಲ್ಲಿ ಬರುವ  QR ಕೋಡ್ ಅನ್ನು ಬಳಸಬೇಡಿ. 

4/5
QR ಕೋಡ್ ಅನ್ನು ಪೇಮೆಂಟ್ ಅಪ್ಲಿಕೇಶನ್‌ಗೆ ತೆಗೆದುಕೊಳ್ಳಿ :
QR ಕೋಡ್ ಅನ್ನು ಪೇಮೆಂಟ್ ಅಪ್ಲಿಕೇಶನ್‌ಗೆ ತೆಗೆದುಕೊಳ್ಳಿ :

QR ಕೋಡ್‌ ಮೂಲಕ ಪೇಮೆಂಟ್ ಮಾಡುತ್ತಿದ್ದರೆ, ಅದರಲ್ಲಿಯೂ ಕೆಫೆ ಅಥವಾ ರೆಸ್ಟೋರೆಂಟ್‌ನಲ್ಲಿ, QR ಕೋಡ್ ಸ್ಕ್ಯಾನ್ ಮಾಡುವ ವೇಳೆ, ಅದು ನಿಮ್ಮನ್ನು ಪೇಮೆಂಟ್  ಅಪ್ಲಿಕೇಶನ್‌ಗೆ ಕರೆದೊಯ್ಯುತ್ತದೆಯೇ  ಎನ್ನುವುದನ್ನು ಗಮನಿಸಿಕೊಳ್ಳಿ . 

5/5
QR CODE PAYMENT
QR CODE PAYMENT

QR ಕೋಡ್ ಅನ್ನು ಎಲ್ಲಿಯಾದರೂ ಸ್ಕ್ಯಾನ್ ಮಾಡುವ ಮೊದಲು, ಅದನ್ನು ಒಮ್ಮೆ ಪರಿಶೀಲಿಸಿ.  ಏಕೆಂದರೆ ಅನೇಕ ಬಾರಿ ಹ್ಯಾಕರ್‌ಗಳು QR ಕೋಡ್‌ನಲ್ಲಿ ಪಾರದರ್ಶಕ ಫಾಯಿಲ್ ಅನ್ನು ಹಾಕುತ್ತಾರೆ. 





Read More