PHOTOS

ಇವುಗಳಲ್ಲಿ ಯಾವುದಾದರೂ ಒಂದು ವಸ್ತು ನಿಮ್ಮ ಪರ್ಸ್‌ನಲ್ಲಿದ್ದರೆ ಎಂದಿಗೂ ಹಣಕಾಸಿನ ಸಮಸ್ಯೆ ಕಾಡುವುದಿಲ್ಲ!

                              

...
Advertisement
1/7
ಲಕ್ಷ್ಮಿ ದೇವಿಯ ಫೋಟೋ
ಲಕ್ಷ್ಮಿ ದೇವಿಯ ಫೋಟೋ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರೂ ಲಕ್ಷ್ಮಿ ದೇವಿಯ ಕುಳಿತ ಭಂಗಿಯ ಚಿತ್ರವನ್ನು ತಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ, ನಿಮ್ಮ ಪರ್ಸ್‌ನಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ.

2/7
ಈ ವಸ್ತುಗಳನ್ನು ಹಣದೊಂದಿಗೆ ಇಟ್ಟುಕೊಳ್ಳಿ
ಈ ವಸ್ತುಗಳನ್ನು ಹಣದೊಂದಿಗೆ ಇಟ್ಟುಕೊಳ್ಳಿ

ಒಂದು ಅರಳಿ ಎಲೆಯನ್ನು ಶುಭ ಸಮಯವನ್ನು ನೋಡಿ ಅದನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಇದನ್ನು ಮಾಡುವುದರಿಂದ ನೀವು ಜೀವನದಲ್ಲಿ ಎಂದಿಗೂ ಬಡತನವನ್ನು ಎದುರಿಸುವುದಿಲ್ಲ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

3/7
ಕೆಂಪು ಕಾಗದ
ಕೆಂಪು ಕಾಗದ

ಕೆಂಪು ಬಣ್ಣದ ಕಾಗದದ ಮೇಲೆ ನಿಮ್ಮ ಇಚ್ಛೆಯನ್ನು ಬರೆಯುವ ಮೂಲಕ, ಕೆಂಪು ರೇಷ್ಮೆ ದಾರದಿಂದ ಗಂಟು ಕಟ್ಟಿ ಅದನ್ನು ಪರ್ಸ್‌ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಆಸೆ ಬೇಗನೆ ಈಡೇರುತ್ತದೆ  ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Raksha Bandhan 2021: ರಕ್ಷಾಬಂಧನದಲ್ಲಿ ಸಹೋದರಿಯರು ರಾಶಿ ಪ್ರಕಾರ Rakhi ಕಟ್ಟಿದರೆ ಸಹೋದರನ ಅದೃಷ್ಟ ಬದಲಾಗುತ್ತಂತೆ!

4/7
ಅಕ್ಕಿ ಧಾನ್ಯಗಳು
ಅಕ್ಕಿ ಧಾನ್ಯಗಳು

ಹಿಂದೂ ಧರ್ಮದಲ್ಲಿ ಅಕ್ಕಿ ಧಾನ್ಯಗಳಿಗೆ ವಿಶೇಷ ಮಹತ್ವವಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಿಮ್ಮ ಪರ್ಸ್‌ನಲ್ಲಿ ಒಂದು ಚಿಟಿಕೆ ಅಕ್ಕಿ ಧಾನ್ಯಗಳನ್ನು ಇಟ್ಟುಕೊಂಡರೆ, ನಿಮ್ಮ ಪರ್ಸ್‌ನಿಂದ ಅನಗತ್ಯವಾಗಿ ಹಣ ಖರ್ಚಾಗುವುದಿಲ್ಲ ಎಂದು ಹೇಳಲಾಗುತ್ತದೆ. 

5/7
ನೋಟ್ಸ್ ಯಾವಾಗಲೂ ಪರ್ಸ್ ನಲ್ಲಿರುತ್ತದೆ
ನೋಟ್ಸ್ ಯಾವಾಗಲೂ ಪರ್ಸ್ ನಲ್ಲಿರುತ್ತದೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ನಿಮ್ಮ ಹೆತ್ತವರಿಂದ ಅಥವಾ ಹಿರಿಯರಿಂದ ಆಶೀರ್ವಾದ ಪಡೆದು ಹಣ ಸ್ವೀಕರಿಸಿದ್ದರೆ, ಆ ನೋಟಿಗೆ ಕುಂಕುಮ ಮತ್ತು ಅರಿಶಿನ ತಿಲಕವನ್ನು ಹಚ್ಚುವ ಮೂಲಕ ನೀವು ಅದನ್ನು ಯಾವಾಗಲೂ ನಿಮ್ಮ ಪರ್ಸ್‌ನಲ್ಲಿ (Purse) ಇಟ್ಟುಕೊಳ್ಳಬೇಕು. ಹಿರಿಯರ ಆಶೀರ್ವಾದದಿಂದ ನಿಮ್ಮ ಪರ್ಸ್ ಎಂದಿಗೂ ಖಾಲಿಯಾಗುವುದಿಲ್ಲ.

ಇದನ್ನೂ ಓದಿ-  Vastu: ಮನೆಯಲ್ಲಿ ಗಾಜು ಒಡೆಯುವುದು ಶುಭವೋ? ಅಶುಭವೋ?

6/7
ಗೋಮತಿ ಚಕ್ರವನ್ನು ಪರ್ಸ್‌ನಲ್ಲಿಡಿ
ಗೋಮತಿ ಚಕ್ರವನ್ನು ಪರ್ಸ್‌ನಲ್ಲಿಡಿ

ಹಣದ ಜೊತೆಯಲ್ಲಿ, ನೀವು ನಿಮ್ಮ ಪರ್ಸ್‌ನಲ್ಲಿ ಕೌರಿ ಅಥವಾ ಗೋಮತಿ ಚಕ್ರವನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಎಂತಹದ್ದೇ ಆರ್ಥಿಕ ಸಮಸ್ಯೆಯಿದ್ದರೂ ನಿವಾರಣೆಯಾಗುತ್ತದೆ.

7/7
ಲಕ್ಷ್ಮಿ ಪರ್ಸ್‌ನಲ್ಲಿ ವಾಸಿಸುವಳು
ಲಕ್ಷ್ಮಿ ಪರ್ಸ್‌ನಲ್ಲಿ ವಾಸಿಸುವಳು

ಲಕ್ಷ್ಮೀ ದೇವಿಗೆ ಸಂಬಂಧಿಸಿದ ಗೋಮತಿ ಚಕ್ರ, ಸಮುದ್ರ ಕೌರಿ, ಲೋಟಸ್ ಗಟ್ಟೆ, ಬೆಳ್ಳಿ ನಾಣ್ಯ ಇತ್ಯಾದಿಗಳನ್ನು ಸಹ ನೀವು ನಿಮ್ಮ ಪರ್ಸ್‌ನಲ್ಲಿ ಇರಿಸಿಕೊಳ್ಳಬಹುದು. ಈ ಯಾವುದೇ ವಸ್ತುಗಳನ್ನು ಪರ್ಸ್‌ನಲ್ಲಿ ಇಡುವ ಮೊದಲು ಅವುಗಳನ್ನು ಲಕ್ಷ್ಮಿ ದೇವಿಯ ಪಾದಗಳ ಮೇಲೆ ಇರಿಸಿ. ನಂತರ ನಿಮ್ಮ ಪರ್ಸ್‌ನಲ್ಲಿ ಇಡಿ. ಹೀಗೆ ಮಾಡುವುದರಿಂದ ಎಂದಿಗೂ ಹಣದ ಕೊರತೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)





Read More