PHOTOS

Photo Gallery: ‘ಗೃಹಪ್ರವೇಶ’ ಮಾಡಿದ ಕಿರುತೆರೆ ಫೇಮಸ್ ಜೋಡಿ ಚಂದನ್-ಕವಿತಾ

ಕಿರುತೆರೆಯ ಫೇಮಸ್​ ಜೋಡಿ ಚಂದನ್ ಕುಮಾರ್ ಹಾಗೂ ಕವಿತಾ ಗೌಡ  ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ.

...
Advertisement
1/5
ಗೃಹಪ್ರವೇಶ ಮಾಡಿದ ಫೇಮಸ್ ಜೋಡಿ
ಗೃಹಪ್ರವೇಶ ಮಾಡಿದ ಫೇಮಸ್ ಜೋಡಿ

ಕಿರುತೆರೆಯ ಫೇಮಸ್​ ಜೋಡಿ ಚಂದನ್ ಕುಮಾರ್ ಹಾಗೂ ಕವಿತಾ ಗೌಡ  ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ.

2/5
ಹೊಸ ಮನೆ ಖರೀದಿ
ಹೊಸ ಮನೆ ಖರೀದಿ

ನಟಿ ಕವಿತಾಗೌಡ ಮತ್ತು ನಟ ಚಂದನ್ ಕುಮಾರ್ ಹೊಸ ಮನೆ ಖರೀದಿಸಿದ್ದಾರೆ. ಈ ಬಗ್ಗೆ ಇತ್ತೀಚೆಗಷ್ಟೇ ಅಭಿಮಾನಿಗಳ ಜೊತೆಗೆ ಈ ಜೋಡಿ ಮಾಹಿತಿ ಹಂಚಿಕೊಂಡಿತ್ತು. ಇದೀಗ ಆಪ್ತರ ಸಮ್ಮುಖದಲ್ಲಿ ಅದ್ದೂರಿ ಗೃಹಪ್ರವೇಶ ಮಾಡಿದ್ದಾರೆ.

3/5
ಫೋಟೋ & ವಿಡಿಯೋ ವೈರಲ್
ಫೋಟೋ & ವಿಡಿಯೋ ವೈರಲ್

ಚಂದು ಮತ್ತು ಕವಿತಾ ದಂಪತಿಯ ಗೃಹಪ್ರವೇಶದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಸಾವಿರಾರು ಅಭಿಮಾನಿಗಳು ಕಾಮೆಂಟ್ಸ್ ಮಾಡುವ ಮೂಲಕ ಜೋಡಿಗೆ ಶುಭ ಹಾರೈಸಿದ್ದಾರೆ.

4/5
ಟ್ರೇಡಿಷನಲ್ ಲುಕ್‍ನಲ್ಲಿ ಜೋಡಿ ಮಿಂಚಿಂಗ್!
ಟ್ರೇಡಿಷನಲ್ ಲುಕ್‍ನಲ್ಲಿ ಜೋಡಿ ಮಿಂಚಿಂಗ್!

ಗೃಹಪ್ರವೇಶದ ದಿನ ಚಂದನ್ ಮತ್ತು ಕವಿತಾ ಟ್ರೇಡಿಷನಲ್‌ ಉಡುಪಿನಲ್ಲಿ ಮಿಂಚಿದರು. ಈ ಫೋಟೋಗಳ ಮೂಲಕ ಈ ಜೋಡಿಯ ಮದುವೆಯನ್ನು ಅಭಿಮಾನಿಗಳು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.

5/5
ಪ್ರೀತಿಸಿ ಮದುವೆಯಾಗಿದ್ದ ಜೋಡಿ
ಪ್ರೀತಿಸಿ ಮದುವೆಯಾಗಿದ್ದ ಜೋಡಿ

‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದ ಜೋಡಿ ಚಂದನ್ ಮತ್ತು ಕವಿತಾ ಪೋಷಕರ ಒಪ್ಪಿಗೆ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.





Read More