PHOTOS

ಅನಂತ್‌ ಮದುವೆಗೆ ವಿದೇಶದಿಂದ ಬಂದ ಕಾರ್ಡಶಿಯಾನ್ ಸಹೋದರಿಯರು: ದೇವಸ್ಥಾನದಲ್ಲಿ ಪೂಜೆ..ಬಡ ಮಕ್ಕಳಿಗೆ ಊಟ ನೀಡಿ ಮಾನವೀಯಾತೆ ಮೆರೆದ ಚೆಂದುಳ್ಳಿಯರು...

ಿಯಾನ್ ತನ್ನ ಸಹೋದರಿ ಖ್ಲೋಯ್ ಕಾರ್ಡಶಿಯಾನ್ ಅವರೊಂದಿಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕಾಗಿ ಭಾರತಕ್ಕೆ ಬಂದಿದ್ದರು. ಇದೇ ಸಮಯದಲ್ಲಿ ಈ ಸಹ...

Advertisement
1/5

ರಿಯಾಲಿಟಿ ಟಿವಿ ತಾರೆ ಕಿಮ್ ಕಾರ್ಡಶಿಯಾನ್ ತನ್ನ ಸಹೋದರಿ ಖ್ಲೋಯ್ ಕಾರ್ಡಶಿಯಾನ್ ಅವರೊಂದಿಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕಾಗಿ ಭಾರತಕ್ಕೆ ಬಂದಿದ್ದರು. ಇದೇ ಸಮಯದಲ್ಲಿ ಈ ಸಹೋದರಿಯರು ಇಸ್ಕಾನ್‌ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲಸಲಿದರು.  

2/5

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ಸಮಾರಂಭದಲ್ಲಿ ಅನೇಕ ವಿದೇಶಿ ಸೆಲೆಬ್ರಿಟಿಗಳು ಕೂಡ ಭಾಗಯಾಗಿದ್ದರು. ಇದರಲ್ಲಿ ಟಿವಿ ರಿಯಾಲಿಟಿ ತಾರೆಗಳಾದ ಕಿಮ್ ಕಾರ್ಡಶಿಯಾನ್ ಮತ್ತು ಕ್ಲೋಯ್ ಕಾರ್ಡಶಿಯಾನ್ ಕೂಡ ಒಬ್ಬರು. ಅಂಬಾನಿ ಮನೆಯ ಮದುವೆಗಾಗಿ ಸಹೋದರಿಯಾರು ವಿದೇಸದಿಂದ ಬಂದಿಳಿದಿದ್ದರು. ತಾಜ್‌ ಹೋಟೆಲ್‌ನಲ್ಲಿ ಸ್ಟಾರ್‌ ಇನ್ಫ್ಲೂಎನ್ಸರ್ಸ್ಗೆ ಅದ್ದೂರಿ ಸ್ವಾಗತ ನೀಡಲಾಯಿತು.  

3/5

ಅನಂತ್-ರಾಧಿಕಾ ಮದುವೆಗೆ ಭಾರತಕ್ಕೆ ಬಂದಿದ್ದ ಕಿಮ್ ಮತ್ತು ಆಕೆಯ ಸಹೋದರಿ ಕ್ಲೋಯ್ ದೇಶಿಯ ಉಡುಪು ಧರಿಸಿ ಎಲ್ಲರ ಕಣ್ಮನ ಸೆಳೆದರು. ಅಂಬಾನಿ ಕುಟುಂಬದ ಕಾರ್ಯಕ್ರಮಗಳಿಗೆ ಹಾಜರಾಗಿದ್ದಲ್ಲದೆ, ಮುಂಬೈನ ಇಸ್ಕಾನ್ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.  

4/5

ಕಿಮ್ ಕಾರ್ಡಶಿಯಾನ್ ಮತ್ತು ಖ್ಲೋ ಕಾರ್ಡಶಿಯಾನ್ ಅವರ ಇಸ್ಕಾನ್ ದೇವಾಲಯದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಈ ಫೋಟೋಗಳಲ್ಲಿ, ಕಿಮ್ ಮತ್ತು ಕ್ಲೋಯ್ ತಮ್ಮ ಡ್ರೆಸ್‌ಗಳ ಮೇಲೆ ದುಪಟ್ಟಾಗಳನ್ನು ಮತ್ತು ಅವರ ಕೂದಲಿನಲ್ಲಿ ಹೂವುಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಈ ಫೊಟೊಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.  

5/5

ಕಾರ್ಡಶಿಯಾನ್ ಸಹೋದರಿಯರು ತಮ್ಮ ಕೈಯಿಂದಲೇ ಮಕ್ಕಳಿಗೆ ಊಟ ಬಡಿಸುತ್ತಿದ್ದಾರೆ. ಇದೀಗ, ಕಿಮ್ ಕಾರ್ಡಶಿಯಾನ್ ಮತ್ತು ಖ್ಲೋಯ್ ಕಾರ್ಡಶಿಯಾನ್ ಅವರ ಈ ಫೋಟೋಗಳು ಎಲ್ಲರ ಹೃದಯವನ್ನು ಗೆಲ್ಲುತ್ತಿವೆ.    





Read More