PHOTOS

ಅಂತೂ ಇಂತೂ ಕೂಡಿಬಂತು ಮದುವೆ ಭಾಗ್ಯ: ಕೊನೆಗೂ ಮದುವೆಯಾಗುತ್ತಿದ್ದಾರೆ ಆಂಕರ್‌ ಅನುಶ್ರೀ...!? ಕರುನಾಡ ಚೆಲುವೆಯ ಹುಡುಗ ಯಾರು?

Anushree Statement on Marriage: ಕನ್ನಡದ ಪ್ರಸಿದ್ಧ ನಿರೂಪಕಿ ಅಂದ್ರೆ ಅದು ಅನುಶ್ರೀ. ತಮ್ಮ ಮಾತಿನ ಶೈಲಿಯಿಂದಲೇ ಎಂಥವರನ್ನೂ ಮನಸೂರೆಗೊಳಿ...

Advertisement
1/7
ಅನುಶ್ರೀ
 ಅನುಶ್ರೀ

ಕನ್ನಡದ ಪ್ರಸಿದ್ಧ ನಿರೂಪಕಿ ಅಂದ್ರೆ ಅದು ಅನುಶ್ರೀ. ತಮ್ಮ ಮಾತಿನ ಶೈಲಿಯಿಂದಲೇ ಎಂಥವರನ್ನೂ ಮನಸೂರೆಗೊಳಿಸುವ ಕೌಶಲ್ಯತೆ ಅವರಿಗಿದೆ. ಆದರೆ ಇನ್ನೂ ವಿವಾಹವಾಗದ ಅನುಶ್ರೀಗೆ ಎಲ್ಲಿ ಹೋದರೂ ಮೊದಲು ಕೇಳುವ ಪ್ರಶ್ನೆ, ನಿಮ್ಮ ಮದುವೆ ಯಾವಾಗ? ಅಂತಾ...  

2/7
ಅನುಶ್ರೀ
 ಅನುಶ್ರೀ

ಸದ್ಯ ಈ ಪ್ರಶ್ನೆಗೆ ಅನುಶ್ರೀಯೇ ಉತ್ತರ ನೀಡಿದ್ದಾರೆ. "ನಾನು ಮದುವೆಯೇ ಬೇಡ ಎಂದು ಇದ್ದವಳು. ಈಗ ಮದುವೆಯಾಗುವ ನಿರ್ಧಾರದಲ್ಲಿದ್ದೇನೆ. ಆದರೆ ಹುಡುಗನನ್ನು ಹುಡುಕಿ ಕೊಡಿ" ಎಂದಿದ್ದಾರೆ.   

3/7
ಅನುಶ್ರೀ
 ಅನುಶ್ರೀ

ತುಳುವಿನ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಅನುಶ್ರೀ ಮಾತನಾಡಿದ್ದಾರೆ.   

4/7
ಅನುಶ್ರೀ
 ಅನುಶ್ರೀ

"ನನ್ನ ಬಳಿ ಕೋಟ್ಯಂತರ ಜನ ಕೇಳುವ ಪ್ರಶ್ನೆ ನಿಮ್ಮ ಮದುವೆ ಯಾವಾಗ? ನಾನು ರಿಯಲ್ ಆಗಿ ಮದುವೆಯಾದ್ರೆ ಯಾರೂ ನಂಬಲಿಕ್ಕಿಲ್ಲ. ರಕ್ಷಿತ್‌ ಶೆಟ್ಟಿ ಜೊತೆ ಕೂಡ ಮೂರು ಸಲ ಮದುವೆ ಮಾಡಿಸಿದ್ದಾರೆ. ನನ್ನ ಕಸಿನ್‌ʼನ ಗಂಡನೊಟ್ಟಿಗೂ ಮದುವೆ ಮಾಡಿಸಿ ಬಿಟ್ಟಿದ್ದರು. ಅವಳು ಕಾಲ್‌ ಮಾಡಿ ಹೇಳಿದ್ದಳು" ಎಂದಿದ್ದಾರೆ.   

5/7
ಅನುಶ್ರೀ
 ಅನುಶ್ರೀ

"ನಾನು ನನ್ನ ಅಪ್ಪನ-ಅಮ್ಮನ ಆ ದಿನಗಳನ್ನು ನೋಡಿದ್ದೇನೆ. ಅದೆಲ್ಲವನ್ನು ನೆನಪಿಸಿಕೊಂಡಾಗ ಮದುವೆಯೇ ಬೇಡ ಅನ್ನುವ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ. ಅಪ್ಪ-ಅಮ್ಮನ ಜೀವನ ನಮ್ಮ ಮೇಲೂ ಪರಿಣಾಮ ಬೀರಿದೆ. ಹಾಗಾಗಿ ವಯಸ್ಸು ಆಗ್ತಾ ಇದೆ ಅನ್ನುವ ಬಗ್ಗೆ ಕೂಡ ಯೋಚಿಸುತ್ತಿಲ್ಲ. ಇನ್ನು ನಾನು ಮದುವೆಯೇ ಬೇಡ ಅಂತಾ ಇದ್ದವಳು. ಈಗ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೇನೆ. ಆದ್ರೆ ಹುಡುಗನನ್ನು ಹುಡುಕಿ ಕೊಡಿ" ಎಂದಿದ್ದಾರೆ.   

6/7
ಅನುಶ್ರೀ
 ಅನುಶ್ರೀ

"ನನಗೆ ನನ್ನದೇ ಆದ ಜವಾಬ್ದಾರಿಗಳಿತ್ತು. ಕನಸುಗಳಿತ್ತು. ಅದನ್ನೆಲ್ಲ ಮಾಡಿ ನಾನು ಮದುವೆ ಆಗುತ್ತೇನೆ ಎಂದು ನಿರ್ಧರಿಸಿದ್ದೆ. ನಾನು ಸಮಯ ತೆಗೆದುಕೊಳ್ಳುತ್ತೇನೆ. ಸಮಾಜದ ನೀತಿ ನಿಯಮಗಳ ಅನುಸಾರ ಇಷ್ಟೇ ವರ್ಷಕ್ಕೆ ಮದುವೆ ಆಗಬೇಕೆಂದು ಯಾರೋ ಹೇಳುತ್ತಾರೆ  ಎಂದು ಆಗಬೇಡಿ. ನೀವು ಮದುವೆ ಆಗಲು ರೆಡಿಯಾಗಿದ್ದರೆ ಮಾತ್ರ ಆ ನಿರ್ಧಾರಕ್ಕೆ ಬನ್ನಿ" ಎಂದಿದ್ದಾರೆ.  

7/7
ಅನುಶ್ರೀ
 ಅನುಶ್ರೀ

"ಒಂದು ಹೆಣ್ಣು ತನ್ನವರನ್ನು ಬಿಟ್ಟು ನಿಮ್ಮನ್ನು ನಂಬಿ ಬರುತ್ತಾಳೆ. ನೀವು ಅವರನ್ನು ಬಿಡುವಂತೆಯೇ ಇಲ್ಲ. ಮಕ್ಕಳನ್ನು ಹುಟ್ಟಿಸಿದ ನಂತರ ನಾನು ಮಕ್ಕಳನ್ನು ನೋಡಿಕೊಳ್ಳಲು ತಯಾರಿಲ್ಲ ಎಂದರೆ ಆ ಮಕ್ಕಳು ಏನು ತಪ್ಪು ಮಾಡಿರುತ್ತಾರೆ? ಅವರ ಬಗ್ಗೆ ಕೇಳೋದ್ಯಾರು? ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ರೆಡಿ ಇದ್ದೀರಿ ಎಂದಾದರೆ ಮಾತ್ರ ಮದುವೆ ವಿಚಾರಕ್ಕೆ ಹೋಗಿ. ಇಲ್ಲವಾದರೆ ಹೋಗಲೇಬೇಡಿ" ಎಂದಿದ್ದಾರೆ.  





Read More