PHOTOS

ಕಪ್ಪು ಜೀರಿಗೆ, ಸಾಸಿವೆಯ ನ್ಯಾಚುರಲ್ ಹೇರ್ ಡೈ ಅನ್ನು ಮಹಿಳೆಯರಷ್ಟೇ ಅಲ್ಲ, ಪುರುಷರೂ ಬಳಸಬಹುದು!

ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಿಮ್ಮ ಅಕಾಲಿಕ ಬಿಳಿ ಕೂದಲಿಗೆ ಶಾಶ್ವತ ಪರಿಹಾರ ನೀಡಲು ಮನೆಯಲ್ಲೇ ...

Advertisement
1/10
ಅಕಾಲಿಕ ಬಿಳಿ ಕೂದಲು
ಅಕಾಲಿಕ ಬಿಳಿ ಕೂದಲು

ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದೀರಾ? ಸಾಸಿವೆಯಿಂದ ತಯಾರಿಸಬಹುದಾದ ಈ ನ್ಯಾಚುರಲ್ ಹೇರ್ ಡೈ ಅನ್ನು ಮಹಿಳೆಯರಷ್ಟೇ ಅಲ್ಲ ಪುರುಷರೂ ಕೂಡ ಬಳಸಬಹುದು. 

2/10
ನ್ಯಾಚುರಲ್ ಹೇರ್ ಡೈ ತಯಾರಿಸಲು ಬೇಕಾಗುವ ಪದಾರ್ಥಗಳು
ನ್ಯಾಚುರಲ್ ಹೇರ್ ಡೈ ತಯಾರಿಸಲು ಬೇಕಾಗುವ ಪದಾರ್ಥಗಳು

>> ಸಾಸಿವೆ  >> ಕರಿಬೇವಿನ ಎಲೆ  >> ಮೆಂತ್ಯ  >> ಕಪ್ಪು ಜೀರಿಗೆ  >> ಕೊಬ್ಬರಿ ಎಣ್ಣೆ   

3/10
ಸಾಸಿವೆ
ಸಾಸಿವೆ

ಸಾಸಿವೆಯು ಬಿಳಿ ಕೂದಲನ್ನು ಕಪ್ಪಾಗಿಸುವುದರ ಜೊತೆಗೆ ಹೇರ್ ಫಾಲ್ ಅನ್ನೂ ಸಹ ಕಂಟ್ರೋಲ್ ಮಾಡುತ್ತೆ. 

4/10
ಕರಿಬೇವಿನ ಎಲೆಗಳು
ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳಲ್ಲಿರುವ ಐರನ್ ಅಂಶವು ಬಿಳಿ ಕೂದಲನ್ನು ಕಪ್ಪಾಗಿಸಲು ಪರಿಣಾಮಕಾರಿ ಆಗಿದೆ. 

5/10
ಮೆಂತ್ಯ ಕಾಳು
ಮೆಂತ್ಯ ಕಾಳು

ಇದು ಕೂದಲನ್ನು ಬುಡದಿಂದ ಕಪ್ಪಾಗಿಸುವುದರ ಜೊತೆಗೆ ನೆತ್ತಿಯನ್ನು ಕೂಡ ಅಲರ್ಜಿಗಳಿಂದ ಮುಕ್ತಿ ಗೊಳಿಸುತ್ತೆ. 

6/10
ಕಪ್ಪು ಜೀರಿಗೆ
ಕಪ್ಪು ಜೀರಿಗೆ

ಕಲೋಂಜಿ ಸೀಡ್ಸ್ ಎಂದರೆ ಕಪ್ಪು ಜೀರಿಗೆಯು ಕೂದಲಿಗೆ ಕಡು ಕಪ್ಪು ಬಣ್ಣವನ್ನು ನೀಡುತ್ತದೆ. 

7/10
ನ್ಯಾಚುರಲ್ ಹೇರ್ ಡೈ ತಯಾರಿಸುವ ವಿಧಾನ
ನ್ಯಾಚುರಲ್ ಹೇರ್ ಡೈ ತಯಾರಿಸುವ ವಿಧಾನ

ಮೊದಲಿಗೆ ತಾಜಾ ಕರಿಬೇವಿನ ಎಲೆಗಳು, ಕಪ್ಪು ಜೀರಿಗೆ, ಮೆಂತ್ಯ ಕಾಳುಗಳನ್ನು ಒಟ್ಟಿಗೆ ಹಾಕಿ ಮಿಕ್ಸಿ ಮಾಡಿಕೊಳ್ಳಿ. ನಂತರ ಬಾಣಲೆಯಲ್ಲಿ 3 ಸ್ಪೂನ್ ಸಾಸಿವೆ ಹಾಕಿ ಸಣ್ಣ ಉರಿಯಲ್ಲಿ ಹುರಿದು ಬಳಿಕ ಮಿಕ್ಸಿ ಮಾಡಿಟ್ಟ ಮಿಶ್ರಣವನ್ನು ಬಾಣಲೆಗೆ ಹಾಕಿ 4 ನಿಮಿಷ ಹುರಿಯಿರಿ. 

8/10
ಅಕಾಲಿಕ ಬಿಳಿ ಕೂದಲಿಗೆ ನ್ಯಾಚುರಲ್ ಹೇರ್ ಡೈ
ಅಕಾಲಿಕ ಬಿಳಿ ಕೂದಲಿಗೆ ನ್ಯಾಚುರಲ್ ಹೇರ್ ಡೈ

ಬಾಣಲೆಯಲ್ಲಿ ಚೆನ್ನಾಗಿ ಹುರಿದ ಎಲ್ಲಾ ವಸ್ತುಗಳನ್ನು ಮತ್ತೊಮ್ಮೆ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಬಳಿಕ ಆ ಪುಡಿಯನ್ನು ಒಂದು ಗಾಜಿನ ಡಬ್ಬಿಯಲ್ಲಿ ಹಾಕಿ ಶೇಖರಿಸಿಡಿ. 

9/10
ನ್ಯಾಚುರಲ್ ಹೇರ್ ಡೈ ಯಾವಾಗ ಹೇಗೆ ಬಳಸಬೇಕು?
ನ್ಯಾಚುರಲ್ ಹೇರ್ ಡೈ ಯಾವಾಗ ಹೇಗೆ ಬಳಸಬೇಕು?

ನೀವು ಈ ಹೇರ್ ಡೈ ಅನ್ನು ಬಳಸುವಾಗ ಮೊದಲು ನೀವು ಶೇಖರಿಸಿಟ್ಟಿರುವ ಪುಡಿಯನ್ನು ಬಟ್ಟಲಿಗೆ ಹಾಕಿ ಅದರಲ್ಲಿ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಬಳಿಕ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ಅರ್ಧ ಗಂಟೆ ಬಳಿಕ ಬರೀ ನೀರಿನಿಂದ ಹೇರ್ ವಾಶ್ ಮಾಡಿ. ಬೇಕಿದ್ದಲ್ಲಿ, ಮರುದಿನ ಶಾಂಪೂ ಮಾಡಿ. 

10/10
ನ್ಯಾಚುರಲ್ ಹೇರ್ ಡೈ
ನ್ಯಾಚುರಲ್ ಹೇರ್ ಡೈ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More