PHOTOS

ಶುಕ್ರ-ಚಂದಿರನ ಮೈತ್ರಿಯಿಂದ ನಿರ್ಮಾಣಗೊಂಡಿದೆ 'ಕಲಾತ್ಮಕ ಯೋಗ', ಈ ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!

p;ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಶುಕ್ರ-ಚಂದಿರನ ಮೈತ್ರಿಯ ಕಾರಣ ಕಲಾತ್ಮಕ ಯೋಗ ನಿರ್ಮಾಣಗೊಂಡಿದೆ. ಇದರಿಂದ ಮೂರು ರಾಶಿಗಳ ಜಾತಕದವರ ಜೀವನದ...

Advertisement
1/5

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಶುಕ್ರ-ಚಂದಿರನ ಮೈತ್ರಿಯ ಕಾರಣ ಕಲಾತ್ಮಕ ಯೋಗ ನಿರ್ಮಾಣಗೊಂಡಿದೆ. ಇದರಿಂದ ಮೂರು ರಾಶಿಗಳ ಜಾತಕದವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ.   

2/5

ಮೇಷ ರಾಶಿ: ಶುಕ್ರ-ಚಂದ್ರನ ಮೈತ್ರಿಯ ಕಾರಣ ನಿರ್ಮಾಣಗೊಳ್ಳುತ್ತಿರುವ ಕಲಾತ್ಮಕ ಯೋಗ ಮೇಷ ರಾಶಿಯ ಜಾತಕದವರ ಪಾಲಿಗೆ ಅತ್ಯಧ್ಬುತ ಸಾಬೀತಾಗಲಿದೆ. ಏಕೆಂದರೆ ಈ ಅವಧಿಯಲ್ಲಿ ನಿಮಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ವಾಹನ-ಆಸ್ತಿಪಾಸ್ತಿ ಖರೀದಿಗೆ ನೀವು ಮನಸ್ಸು ಮಾಡುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನ ಉತ್ತಮವಾಗಿರಲಿದೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಉನ್ನತಿ ಪ್ರಾಪ್ತಿಯಾಗಲಿದೆ. ಇನ್ನೊಂದೆಡೆ ನಿಮಗೆ ನಿಮ್ಮ ತಾಯಿಯ ಬೆಂಬಲ ಪ್ರಾಪ್ತಿಯಾಗಲಿದೆ. ತಾಯಿ ಕಡೆಯಿಂದ ಧನಪ್ರಾಪ್ತಿಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ಅಧಿಕ ಮೊದಲಿಗಿಂತ ಹೆಚ್ಚು ಲಾಭವನ್ನು ಗಳಿಸುವಲ್ಲಿ ಯಶಸ್ಸನ್ನು ಪಡೆಯುವಿರಿ.  

3/5

ವೃಷಭ ರಾಶಿ: ವೃಷಭ ರಾಶಿಯ ಜಾತಕದವರ ವೃತ್ತಿಜೀವನ ಮತ್ತು ವ್ಯಾಪಾರದ ದೃಷ್ಟಿಯಿಂದ ಕಲಾತ್ಮಕ ಯೋಗ ತುಂಬಾ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಆ ಅವಧಿಯಲ್ಲಿ ನಿಮ್ಮ ಆದಾಯದ ಮೂಲಗಳು ವೃದ್ಧಿಯಾಗಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಪಾಪ್ತಿಯಾಗುವ ಸಾಧ್ಯತೆ ಇದೆ. ಕಾರ್ಯಸ್ಥಳದಲ್ಲಿ ನಿಮ್ಮ ಕೆಲಸದಿಂದ ಮೇಲಾಧಿಕಾರಿಗಳು ಪ್ರಭಾವಿತಗೊಳ್ಳಲಿದ್ದಾರೆ. ಪರಿಣಾಮವಶಾತ್ ನಿಮಗೆ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ಬಯಸಿದ ಜಾಗಕ್ಕೆ ವರ್ಗಾವಣೆ ಮತ್ತು ಪ್ರಮೋಷನ್ ಸಿಗಲಿದೆ. ವ್ಯಾಪಾರದಲ್ಲಿ ತೊಡಗಿಸಿಕೊಂಡ ಜನರಿಗೆ ಭಾರಿ ಲಾಭ ಸಿಗುವ ಸಾಧ್ಯತೆ ಇದೆ.   

4/5

ಮಿಥುನ ರಾಶಿ: ಕಲಾತ್ಮಕ ಯೋಗ ಮಿಥುನ ರಾಶಿಯ ಜಾತಕದವರ ಪಾಲಿಗೆ ಅದ್ಭುತ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳಲಿವೆ. ಅದೃಷ್ಟ ನಿಮ್ಮೊಂದಿಗಿರಲಿದೆ. ಯಾವುದೇ ಕಾರಣವಶಾತ್ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ.  ಈ ಅವಧಿಯಲ್ಲಿ ನಿಮ್ಮ ಬಳಿ ಕೆಲ ಅವಕಾಶಗಳು ಒದಗಿಬರಲಿದ್ದು ಅವುಗಳಿಂದ ಉತ್ತಮ ಆರ್ಥಿಕ ಲಾಭವನ್ನು ಪಡೆಯುವಿರಿ. ಧರ್ಮ-ಕಾರ್ಯಗಳಲ್ಲಿ ನಿಮ್ಮ ಅಭಿರುಚಿ ಹೆಚ್ಚಾಗಲಿದೆ. ಕೆಲಸ-ವ್ಯವಸಾಯದ ನಿಮಿತ್ತ ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಒಂದು ವೇಳೆ ನೀವು ವಿವಾಹಿತರಾಗಿದ್ದಾರೆ, ಬಾಳಸಂಗಾತಿಯ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. 

5/5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  





Read More