PHOTOS

ಊಟಕ್ಕೆಂದು ಕೇವಲ 6 ರೂ. ಖರ್ಚು ಮಾಡುತ್ತಿದ್ದ ಈತ ಇಂದು ಸ್ಟಾರ್‌ ಹೀರೋ..! ಈತನ ಕಷ್ಟದ ದಿನಗಳ ಬಗ್ಗೆ ಕೇಳಿದ್ರೆ ಕಣ್ಣೀರು ಬರೋದು ಗ್ಯಾರಂಟಿ

ತಿ ಇಂದು ಒಳ್ಳೆಯ ಜಾಗದಲ್ಲಿ ಇರುತ್ತಾರೆ ಎಂದರೆ ಅದರ ಹಿಂದೆ ಒಂದು ಪರಿಶ್ರಮ ಇರುತ್ತೆ. ಅಷ್ಟೆ ಅಲ್ಲ ಆ ಜಾಗಕ್ಕೆ ಬರಲು ಆತ ಎಷ್ಟು ಕಷ್ಟದ ದಿನಗಳನ್ನು ಎದುರಿಸಿರುತ್ತ...

Advertisement
1/12

ಒಬ್ಬ ವ್ಯಕ್ತಿ ಇಂದು ಒಳ್ಳೆಯ ಜಾಗದಲ್ಲಿ ಇರುತ್ತಾರೆ ಎಂದರೆ ಅದರ ಹಿಂದೆ ಒಂದು ಪರಿಶ್ರಮ ಇರುತ್ತೆ. ಅಷ್ಟೆ ಅಲ್ಲ ಆ ಜಾಗಕ್ಕೆ ಬರಲು ಆತ ಎಷ್ಟು ಕಷ್ಟದ ದಿನಗಳನ್ನು ಎದುರಿಸಿರುತ್ತಾನೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಇದಕ್ಕೆ ಉದಾಹರನೆಯಂತೆ ಇಲ್ಲೊಬ್ಬ ಸ್ಟಾರ್‌ ನಟ ಇಂತಹ ಹಲವಾರಿ ಕಷ್ಟಗಳನ್ನು ಎದುರಿಸಿ ತಿನ್ನಲು ಗತಿ ಇಲ್ಲದೆ ಸ್ಟಾರ್‌ ನಟನಾಗಿ ಇಂದು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

2/12

ಬಾಲಿವುಡ್‌ನ ಖ್ಯಾತ ನಟ ಜಾನ್‌ ಅಬ್ರಹಾಮ್‌ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಶನದಲ್ಲಿ ತಾವು ಸಿನಿಮಾ ರಂಗಕ್ಕೆ ಬರುವ ಮುಂಚೆ ಅನುಭವಿಸಿದ ಕಷ್ಟದ ದಿನಗಳ ಕುರಿತು ಹಂಚಿಕೊಂಡರು.  

3/12

ಜಾನ್‌ ಅಬ್ರಹಂ ಇಂದು ಒಂದು ಸಿನಿಮಾಗೆ ಕೋಟಿ ಕೋಟಿ ಸಂಬಾವನೆ ಪಡೆಯ ಬಹುದು ಆದರೆ, ಒಂದು ಕಾಲದಲ್ಲಿ ಈತನಿಗೆ ಬರುತ್ತಿದ್ದ ಸಂಬಳ ಎಷ್ಟು ಗೊತ್ತಾ..? ಮುಂದೆ ಓದಿ...  

4/12

ಜಾನ್‌ ಅಬ್ರಹಂ ಎಂಬಿಎ ಪದವಿದರರಾಗದ್ದು, ಶಿಕ್ಷಣ ಮುಗಿಸಿ ನಟ ಮಾಧ್ಯಮ ಯೋಜಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದರಂತೆ.  

5/12

ಈ ಕೆಲಸ ಮಾಡಲು ನಟನಿಗೆ ಸಿಗುತ್ತಿದ್ದ ಸಂಬಳ ಕೇವಲ 6500 ರೂ ಮಾತ್ರವೇ ಆಗಿತ್ತಂತೆ.  

6/12

ಹೀಗೆ 6500 ರೂ. ಗೆ ಕೆಲಸ ಮಾಡುವ ಸಂದರ್ಭದಲ್ಲಿ  ಗ್ಲಾಡ್ರಾಗ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಬಂದಿತ್ತಂತೆ ಈ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಗೌರಿ ಖಾನ್ ಹಾಗೂ ಕರಣ್ ಜೋಹರ್ ಅವರು ತೀರ್ಪುಗಾರರಾಗಿದ್ದರಂತೆ.  

7/12

ಈ ಸ್ಪರ್ಧೆಯಲ್ಲಿ ಜಾನ್‌ ಅಬ್ರಹಂ 40000 ರೂ ಗೆದ್ದಿದ್ದರಂತೆ ಇದರ ಕುರಿತು ಮಾತನಾಡಿದ ಜಾನ್‌ ಅಬ್ರಹಂ " ಈ ಸ್ಪರ್ಧೆಯಲ್ಲಿ ನಾನು 40000 ರೂ. ಗೆದ್ದುಕೊಂಡಿದ್ದೆ ಆಗಿನ ಸಮಯಕ್ಕೆ ಈ ಹಣ ನನಗೆ ಬಹಳ ಮುಖ್ಯವಾಗಿತ್ತು, ಇದು ನಾನು ನನ್ನ ಜೀವನದಲ್ಲಿ ಮೊದಲ ಭಾರಿಗೆ ಗಳಿಸಿದ್ದ ಬಹು ಮೊತ್ತವಾದ ಹಣವಾಗಿತ್ತು."  

8/12

ನಂತರ ಸಂಬಳವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದರು ಎಂದು ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾನ್‌ ಅಬ್ರಹಂ " ಆಗಿನ ಸಮಯದಲ್ಲಿ ನಾನು ಅತೀ ಕಡಿಮೆ ಖರ್ಚು ಮಾಡುತ್ತಿದೆ, ನಾನು ಆಹಾರಕ್ಕೆ ಕೇವಲ 6 ರೂ. ಅಷ್ಟೆ ಖರ್ಚು ಮಾಡುತ್ತಿದೆ. 2 ಚಪಾತಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ, ನಂತರ ತಡರಾತ್ರಿ ವರೆಗೂ ಕೆಲಸ ಮಾಡುತ್ತಿದ್ದ ಕಾರನ ಊಟ ಮಾಡಲು ಸಮಯ ಸಿಗುತ್ತಿರಲಿಲ್ಲ, ಕೇವಲ ಒಂದು ಹೊತ್ತು ಊಟ ಮಾಡಿ ಕಾಲ ದೂಡುತ್ತಿದ್ದೆ" ಎಂದರು.  

9/12

ಕೆಲಸಕ್ಕೆ ಹೋಗುತ್ತಿದ್ದ ಜಾನ್‌ ಅವರ ಬಳಿ ಆಗಿನ ಕಾಲಕ್ಕೆ ಒಂದು ಬೈಕ್‌ ಇತ್ತಂತೆ ಅದಕ್ಕೆ ಪೆಟ್ರೊಲ್‌ ಆಕುವುದೊಂದೇ ಅವರಿಗಿದ್ದ ಖರ್ಚು ಎಂದು ಜಾನ್‌ ಹೇಳಿದ್ದಾರೆ.  

10/12

"ನನ್ನ ಬಳಿ ಮೊಬೈಲ್‌ ಫೋನ್‌ ಏನು ಇರಲಿಲ್ಲ, ರೈಲಿನಲ್ಲಿ ಪಯಣಿಸಲು ರೈಲು ಪಾಸ್‌ ಇತ್ತು ಅಷ್ಟೆ ಅದು ಬಿಟ್ಟರೆ ನಾನು ಸಂಪಾದಿಸಿ ಉಳಿದ ಹಣವನ್ನೂ ನಾನು ಮ್ಯೂಚುಯಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೆ" ಎಂದು ಜಾನ್‌ ಅಬ್ರಹಂ ಹೇಳಿದ್ದಾರೆ   

11/12

ಈ ರೀತಿ ಅವರು ಸಂಪಾದಿಸುತ್ತಿದ್ದ ಹಣವನ್ನು ಹೇಗೆ ಪ್ರಯೋಜನ ಮಾಡುತ್ತಿದ್ದರು ಎಂದು ಹೇಳುತ್ತಾ ಜಾನ್‌ ಅಬ್ರಹಂ ಸಂಪಾದಿಸಿದ ಹಣವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಅದರ ಮಹತ್ವ ಏನು ಎಂಬುದನ್ನು ಒತ್ತಿ ಹೇಳಿದ್ದಾರೆ.  

12/12

ಹೀಗೆ ತಮ್ಮ ಮೊದಲನೆಯ ಸಂಬಳದ ಕುರಿತು ನೆನಪಿಸಿಕೊಳ್ಳುತ್ತಾ ತಮ್ಮ ಕಷ್ಟದ ದಿನಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.  





Read More