PHOTOS

Jio Independence Day Offer 2023: ಸ್ವಾತಂತ್ರ್ಯ ದಿನಾಚಣೆಗೆ ಜಿಯೋದಿಂದ ಭರ್ಜರಿ ಆಫರ್!

Reliance Jio Independence Day 2023 offer: ಆಹಾರ ವಿತರಣಾ ಸೇವೆ, ಪ್ರಯಾಣ ಕಾಯ್ದಿರಿಸುವಿಕೆ, ಆನ್ಲೈನ್ ಶಾಪಿಂಗ್ ಮುಂತಾದ ಪ್ರಯೋಜನಗಳ ಜೊ...

Advertisement
1/4
ಜಿಯೋ ಸ್ವಾತಂತ್ರ್ಯ ದಿನಾಚರಣೆ ಆಫರ್ ವಿವರ
ಜಿಯೋ ಸ್ವಾತಂತ್ರ್ಯ ದಿನಾಚರಣೆ ಆಫರ್ ವಿವರ

ರಿಲಯನ್ಸ್ ಜಿಯೋದ ₹2,999 ವಾರ್ಷಿಕ ರಿಚಾರ್ಜ್ ಯೋಜನೆಯು ದಿನಕ್ಕೆ 2.5GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 1 ವರ್ಷಕ್ಕೆ ದಿನಕ್ಕೆ 100 SMS ಕೋಟಾವನ್ನು ನೀಡುತ್ತದೆ. ಒಟ್ಟಾರೆ ಈ ಯೋಜನೆಯಡಿ ಗ್ರಾಹಕರು 912.5GB ಡೇಟಾ ಪಡೆಯಲಿದ್ದಾರೆ.

2/4
ಗ್ರಾಹಕರಿಗೆ ಬರಪೂರ ಕೊಡುಗೆ
ಗ್ರಾಹಕರಿಗೆ ಬರಪೂರ ಕೊಡುಗೆ

ಡೇಟಾ ಮತ್ತು ಕರೆ ಆಫರ್ ಜೊತೆಗೆ Jio ಇಂಡಿಪೆಂಡೆನ್ಸ್ ಡೇ ಆಫರ್‍ನಲ್ಲಿ ₹249 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ Swiggy ಆರ್ಡರ್ಗಳಿಗೆ ಅನ್ವಯವಾಗುವ ₹100 ರಿಯಾಯಿತಿ ಪ್ರಯೋಜನ ಸಿಗಲಿದೆ. ಜೊತೆಗೆ ಯಾತ್ರಾ ಮೂಲಕ ಕಾಯ್ದಿರಿಸಿದ ವಿಮಾನಗಳಲ್ಲಿ ₹1,500ವರೆಗೆ ಡಿಸ್ಕೌಂಟ್ ಸಿಗಲಿದೆ. ಹೆಚ್ಚುವರಿಯಾಗಿ ಗ್ರಾಹಕರು ನಿರ್ದಿಷ್ಟ ಆಡಿಯೋ ಉತ್ಪನ್ನಗಳು ಮತ್ತು ರಿಲಯನ್ಸ್ ಡಿಜಿಟಲ್ ಮೂಲಕ ಸ್ವಾಧೀನಪಡಿಸಿಕೊಂಡಿರುವ ಗೃಹೋಪಯೋಗಿ ಉಪಕರಣಗಳ ಮೇಲೆ ಶೇ.10ರಷ್ಟು ಫ್ಲಾಟ್ ರಿಯಾಯಿತಿ ಸಿಗುತ್ತದೆ.

3/4
ಜಿಯೋ ಸ್ವಾತಂತ್ರ್ಯ ದಿನದ ಆಫರ್ ಪಡೆಯುವುದು ಹೇಗೆ?
ಜಿಯೋ ಸ್ವಾತಂತ್ರ್ಯ ದಿನದ ಆಫರ್ ಪಡೆಯುವುದು ಹೇಗೆ?

ಮೊದಲು ನಿಮ್ಮ ಸ್ಮಾರ್ಟ್‍ಫೋನ್‍ನಲ್ಲಿ MyJio ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ, ಆಫ್‍ನ ಕೆಳಗಿನ ವಿಭಾಗದಲ್ಲಿರುವ ರೀಚಾರ್ಜ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ₹2,999 ಪ್ಲಾನ್ ಆಯ್ಕೆ ಮಾಡಿ. ಬಳಿಕ ನಿಮ್ಮ ಜಿಯೋ ಸಂಖ್ಯೆಯನ್ನು ನಮೂದಿಸಿ. ಯಾವುದೇ UPI, ನೆಟ್ ಬ್ಯಾಂಕಿಂಗ್ ಅಥವಾ ಬ್ಯಾಂಕ್ ಕಾರ್ಡ್‍ಗಳನ್ನು ಬಳಸಿ ವಹಿವಾಟು ಪೂರ್ಣಗೊಳಿಸಿ. ಹಣ ಪಾವತಿಸಿದ ನಂತರ ವಾರ್ಷಿಕ ಯೋಜನೆ ಸಕ್ರಿಯವಾಗಲಿದೆ.

4/4
ಪ್ರಿಪೇಯ್ಡ್ ಬಳಕೆದಾರರಿಗೆ ಆಫರ್!
ಪ್ರಿಪೇಯ್ಡ್ ಬಳಕೆದಾರರಿಗೆ ಆಫರ್!

ಜಿಯೋ ಸ್ವಾತಂತ್ರ್ಯ ದಿನಾಚರಣೆಯ 2023ರ ಆಫರ್ ಪ್ರಸ್ತುತ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಈ ಕೊಡುಗೆಯ ಮುಕ್ತಾಯ ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಆಸಕ್ತರರು Jioನ ಅಧಿಕೃತ ವೆಬ್‍ಸೈಟ್ ಮೂಲಕ ಈ ಕೊಡುಗೆಯ ಬಗ್ಗೆ ಮಾಹಿತಿ ಪಡೆಯಬಹುದು.





Read More