PHOTOS

ITR Filing: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಈ 5 ತಪ್ಪು ಮಾಡಬೇಡಿ…

ಯಾವುದೇ ಸಂದರ್ಭದಲ್ಲಿ ನೀವಾಗಿಯೇ ಆದಾಯ ತೆರಿಗೆ ಸಲ್ಲಿಸುವಾಗ ತಪ್ಪುಗಳನ್ನು ಮಾಡಬಾರದು, ಒಂದು ವೇಳೆ ಮಾ...

Advertisement
1/5
ತೆರಿಗೆ ಕಡಿತ ವಿವರ ಹಂಚಿಕೊಳ್ಳುವಾಗಿನ ತಪ್ಪುಗಳು
ತೆರಿಗೆ ಕಡಿತ ವಿವರ ಹಂಚಿಕೊಳ್ಳುವಾಗಿನ ತಪ್ಪುಗಳು

ತೆರಿಗೆದಾರರು ತೆರಿಗೆ ಕಡಿತಗಾರನ TAN ಸಂಖ್ಯೆಯ ಸರಿಯಾದ ವಿವರಗಳನ್ನು 26AS ನಮೂನೆಯಲ್ಲಿ ಹಂಚಿಕೊಳ್ಳಬೇಕು. ಅಲ್ಲದೆ ಅವರು ಬಯಸಿದ ಆದಾಯ ಪಡೆಯಲು ತಮ್ಮ ಐಟಿಆರ್ ಫೈಲಿಂಗ್‌ನಲ್ಲಿ ಚಲನ್ ಸಂಖ್ಯೆ ಮತ್ತು BSR ಕೋಡ್‌ನ ವಿವರಗಳನ್ನು ಎಚ್ಚರಿಕೆಯಿಂದ ತುಂಬಬೇಕು.

2/5
ಬ್ಯಾಂಕ್ ಖಾತೆ ವಿವರ ಹಂಚಿಕೊಳ್ಳುವಾಗಿನ ತಪ್ಪುಗಳು
ಬ್ಯಾಂಕ್ ಖಾತೆ ವಿವರ ಹಂಚಿಕೊಳ್ಳುವಾಗಿನ ತಪ್ಪುಗಳು

ಆದಾಯ ತೆರಿಗೆ ಇಲಾಖೆಯು ನಿಮ್ಮ ಬ್ಯಾಂಕ್ ಖಾತೆಗೆ ಮರುಪಾವತಿಯನ್ನು ಜಮಾ ಮಾಡುತ್ತದೆ. ಆದ್ದರಿಂದ ನೀವು ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್ ಅಥವಾ MICR ಕೋಡ್‌ನಂತಹ ಸರಿಯಾದ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬೇಕು. ಇಲ್ಲದಿದ್ದರೆ ಐಟಿಆರ್ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ.

3/5
ಬಂಡವಾಳ ಲಾಭಗಳ ದಾಖಲಾತಿ
ಬಂಡವಾಳ ಲಾಭಗಳ ದಾಖಲಾತಿ

ಐಟಿಆರ್ ಸಲ್ಲಿಸುವಾಗ ಬಂಡವಾಳ ಗಳಿಕೆಯ ವಿವರಗಳನ್ನು ಹಂಚಿಕೊಳ್ಳುವುದು ಅತ್ಯಂತ ತ್ರಾಸದಾಯಕ ಕೆಲಸಗಳಲ್ಲಿ ಒಂದಾಗಿದೆ. ತೆರಿಗೆದಾರರು ತಮ್ಮ ಹೂಡಿಕೆಗಳ ವಿವಿಧ ಹಿಡುವಳಿ ಅವಧಿಯ ವಿವರಗಳನ್ನು ವಿವಿಧ ಹೂಡಿಕೆ ಸಾಧನಗಳಲ್ಲಿ ಹಂಚಿಕೊಳ್ಳಬೇಕು. ವಿವಿಧ ದೀರ್ಘಾವಧಿಯ ಮತ್ತು ಅಲ್ಪಾವಧಿ ಬಂಡವಾಳ ಗಳಿಕೆಗಾಗಿ ವಿವಿಧ ತೆರಿಗೆ ದರಗಳು ಪ್ರಕ್ರಿಯೆಯನ್ನು ತೊಡಕಾಗಿಸುತ್ತದೆ. ಆದ್ದರಿಂದ ರಿಟರ್ನ್ಸ್ ಸಲ್ಲಿಸುವಾಗ ನೀವು ಸರಿಯಾದ ವಿವರಗಳನ್ನು ಒದಗಿಸಬೇಕಾಗುತ್ತದೆ.

4/5
ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವಾಗಿನ ತಪ್ಪುಗಳು
ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವಾಗಿನ ತಪ್ಪುಗಳು

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ವೇಳೆ ವೈಯಕ್ತಿಕ ವಿವರಗಳನ್ನು ನೀಡುವಾಗ ಅತ್ಯಂತ ಜಾಗರೂಕರಾಗಿರಬೇಕು. ನಿಮ್ಮ ಐಟಿಆರ್ ಫೈಲಿಂಗ್‌ಗೆ ಸಂಬಂಧಿಸಿದಂತೆ ತೆರಿಗೆ ಇಲಾಖೆಯು ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಬಯಸಿದಲ್ಲಿ ನೀವು ಸರಿಯಾದ ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆಯನ್ನು ಹಂಚಿಕೊಳ್ಳಬೇಕು. ಆನ್‌ಲೈನ್ ಪೋರ್ಟಲ್ ಬಳಸಿ ನೀವು ಫೋನ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಸುಲಭವಾಗಿ ಅಪ್‌ಡೇಟ್ ಮಾಡಬಹುದು.

5/5
ವಿದೇಶಿ ಬ್ಯಾಂಕ್ ಖಾತೆ ವಿವರ ಹಂಚಿಕೊಳ್ಳುವಾಗಿನ ತಪ್ಪುಗಳು
ವಿದೇಶಿ ಬ್ಯಾಂಕ್ ಖಾತೆ ವಿವರ ಹಂಚಿಕೊಳ್ಳುವಾಗಿನ ತಪ್ಪುಗಳು

ಒಂದು ವೇಳೆ ನೀವು ವಿದೇಶಿ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರೆ ಐಟಿಆರ್ ಸಲ್ಲಿಸುವಾಗ ನೀವು ಅದರ ವಿವರಗಳನ್ನು ಹಂಚಿಕೊಳ್ಳಬೇಕು. ವಿವರಗಳನ್ನು ಹಂಚಿಕೊಳ್ಳಲು ತೆರಿಗೆದಾರರು ಐಟಿಆರ್ 2ರ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು.





Read More