PHOTOS

ಇಶಾ ಅಂಬಾನಿ ಧರಿಸಿದ್ದ ಈ ನೆಕ್ಲೇಸ್ ಬೆಲೆ ಎಷ್ಟು ಗೊತ್ತಾ..? ಕೇಳಿದ್ರೆ ನೀವು ಶಾಕ್ ಆಗ್ತೀರಾ

ತು ಐಷಾರಾಮಿಯ ಪ್ರತಿರೂಪವಾಗಿರುವ ಇಶಾ ಅಂಬಾನಿ ತಮ್ಮ ಸಹೋದರ ಅನಂತ್ ಅಂಬಾನಿ ಅವರ ವಿವಾಹದಲ್ಲಿ ಐತಿಹಾಸಿಕ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಸಂದರ್ಭದ...

Advertisement
1/6

ಆಧುನಿಕತೆ ಮತ್ತು ಐಷಾರಾಮಿಯ ಪ್ರತಿರೂಪವಾಗಿರುವ ಇಶಾ ಅಂಬಾನಿ ತಮ್ಮ ಸಹೋದರ ಅನಂತ್ ಅಂಬಾನಿ ಅವರ ವಿವಾಹದಲ್ಲಿ ಐತಿಹಾಸಿಕ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ, ಅವರು ಕಾಂತಿಲಾಲ್ ಛೋಟಾಲಾಲ್ ರಚಿಸಿದ "ಗಾರ್ಡನ್ ಆಫ್ ಲವ್" ಎಂಬ ಅತ್ಯಂತ ದುಬಾರಿಯಾದ ವಜ್ರದ ಆಭರಣವನ್ನು ಧರಿಸಿ ಎಲ್ಲರನ್ನೂ ನಿಬ್ಬೆರೆಗಾಗಿಸಿದರು.   

2/6

ಇಶಾ ಈ ಸಂದರ್ಭದಲ್ಲಿ ಧರಿಸಿದ್ದ, ಆಭರಣವು ಅದರ ವಿಶಿಷ್ಟ ಸೃಷ್ಟಿಗೆ ಪ್ರಸಿದ್ಧವಾಗಿದೆ, ಇದು ಗುಲಾಬಿ, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣದ ಅಮೂಲ್ಯ ವಜ್ರಗಳಿಂದ ಕೂಡಿದೆ, ಇದು ಹೂಬಿಡುವ ಉದ್ಯಾನದ ಭಾವನೆಯನ್ನು ನೀಡುತ್ತದೆ. ಇನ್ನೂ ಇದನ್ನು ತಯಾರಿಸಲು 4000 ಗಂಟೆಗಳ ಕಾಲ ಬೇಕಾಯಿತಂತೆ.  

3/6

ನೆಕ್ಲೇಸ್ ಅದರ ಮಧ್ಯದಲ್ಲಿ ಆಕರ್ಷಕ ಹೃದಯ ಆಕಾರದ ನೀಲಿ ವಜ್ರವನ್ನು ಹೊಂದಿದೆ, ಇದು ಸಮೃದ್ಧಿಯ ಸಂಕೇತವಾಗಿದೆ. ಇದನ್ನು ಸಂಪೂರ್ಣವಾಗಿ ಕಟ್ ಡೈಮಂನ್ಡ್ಸ್ ನಿಂದ ಮಾಡಲಾಗಿದ್ದು, ಇದು ಈ ಆಭರಣವನ್ನು ಇನ್ನಷ್ಟು ವಿಶಿಷ್ಟವಾಗುವಂತೆ ಮಾಡಿದೆ.  

4/6

ವಜ್ರದ ಕಿವಿಯೋಲೆಗಳು ಮತ್ತು ಬೆರಗುಗೊಳಿಸುವ ಮಾಂಗ್ ಟಿಕ್ಕಾದೊಂದಿಗೆ ಈ ಆಭರಣಗಳು ಇಶಾ ಅವರು ಅಣ್ಣನ ಮದುವೆಯಲ್ಲಿ ವಿಶಿಷ್ಟವಾಗಿ ಕಾಣುವಂತೆ ಮಾಡಿತು.  

5/6

ಇನ್ನೂ ಇಶಾ ಅಂಬಾನಿ, ಅಬು ಜಾನಿ ಸಂದೀಪ್ ಖೋಸ್ಲಾ ಅವರು ವಿನ್ಯಾಸಗೊಳಿಸಿದ  ಗೌನ್‌ ಅನ್ನು ಧರಿಸಿದ್ದರು. ಈ ಗೌನ್ ಅನ್ನು ಜರ್ಡೋಜಿ ಹ್ಯಾಂಡ್ ಎಂಬ್ರಾಯ್ಡರಿ ಮತ್ತು ಸ್ವರೋವ್ಸ್ಕಿ ಹರಳುಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ, ಇದು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತು. ಇಶಾ ಅವರ ವಿಶೇಷ ಸೃಜನಶೀಲತೆ ಮತ್ತು ಸ್ವಯಂ ಪ್ರೇರಣೆ ಈ ಅದ್ಭುತ ಸಮಾರಂಭದಲ್ಲಿ ಆಕೆಗೆ ವಿಶಿಷ್ಟ ಸ್ಥಾನವನ್ನು ತಂದುಕೊಟ್ಟಿತು.  

6/6

ಇಶಾ ಅಂಬಾನಿ ತನ್ನ ಸಹೋದರನ ಮದುವೆಯಲ್ಲಿ ನಿಜವಾಗಿಯೂ ತನ್ನ ವಿಶಿಸ್ಟ ಫ್ಯಾಶನ್ ಸೆನ್ಸ್‌ನಿಂದ ಗುರುತಿಸಿಕೊಂಡರು. ಅವಳ ಆಭರಣಗಳು ಮತ್ತು ಅವಳ ಫ್ಯಾಷನ್ ಆಯ್ಕೆಗಳು ಅವಳ ಅಸಾಧಾರಣತೆಯನ್ನು ಸಮಾರಂಭದಲ್ಲಿ ನೆರೆದವರ ಮುಂದೆ ಎತ್ತಿ ತೋರುವಂತೆ ಮಾಡಿತು. ಇನ್ನು ಇಶಾ ಅವರ ಈ ನೆಕ್ಯಾಲ್ಸ್ನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಬಾರಿ ಚರ್ಚೆಗಳು ಶುರುವಾಗಿವೆ. ಆದರೆ ಇನ್ನೂ ಈ ಆಭರಣದ ನಿಕರ ಬೆಲೆ ಎಷ್ಟು ಎಂದು ಕಂಡು ಹಿಡಿಯಲು ಸಾಧ್ಯವಾಗಿಲ್ಲ.  





Read More