PHOTOS

ವಾಟ್ಸಾಪ್‌ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದಾರಾ? ಈ ರೀತಿ ತಿಳಿಯಿರಿ

cked you on WhatsApp: ವಾಟ್ಸಾಪ್‌ನಲ್ಲಿ ನಮ್ಮ ನಂಬರ್ ಅನ್ನು ಯಾರಾದರೂ ಬ್ಲಾಕ್ ಮಾಡಿದ್ದಾರೆಯೇ ಎಂದು ಕಂಡು ಹಿಡಿಯುವುದು...

Advertisement
1/5
ಲಾಸ್ಟ್ ಸೀನ್ ಅಥವಾ ಆನ್‌ಲೈನ್ ಸ್ಥಿತಿ
ಲಾಸ್ಟ್ ಸೀನ್ ಅಥವಾ ಆನ್‌ಲೈನ್ ಸ್ಥಿತಿ

ವಾಟ್ಸಾಪ್‌ನಲ್ಲಿ ಯಾರಾದರೂ ನಿಮ್ಮನ್ನು ನಿರ್ಬಂಧಿಸಿದ್ದಾರೆಯೇ ಎಂಬುದನ್ನು ಅವರ ಚಾಟ್ ವಿಂಡೋ ಮೂಲಕವೂ ಕಂಡು ಹಿಡಿಯಬಹುದು. ಚಾಟ್ ವಿಂಡೋದಲ್ಲಿ ಲಾಸ್ಟ್ ಸೀನ್ ಅಥವಾ ಆನ್‌ಲೈನ್‌ನಲ್ಲಿ ಇದ್ದಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ. ಇದಲ್ಲದೆ, ಸಂಪರ್ಕದ ಪ್ರೊಫೈಲ್ ಫೋಟೋ ಕೂಡ ಕಾಣಿಸುವುದಿಲ್ಲ. ಇದು ನಿಮಗೆ ಕಾಣದಿದ್ದರೆ ಅವರು ನಿಮ್ಮನ್ನು ಬ್ಲಾಕ್ ಮಾಡಿರಬಹುದು. 

ಆದಾಗ್ಯೂ, ಬಳಕೆದಾರರು ಲಾಸ್ಟ್ ಸೀನ್, ಆನ್‌ಲೈನ್ ಸ್ಥಿತಿ ಮತ್ತು ಫೋಟೋವನ್ನು ಮರೆಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಆದ್ದರಿಂದ ನೀವು ಎರಡನೇ ಹಂತವನ್ನು ಸಹ ಅನುಸರಿಸಬಹುದು.

2/5
ಸಂದೇಶದ ಮೇಲೆ ಡಬಲ್ ಟಿಕ್ ಮಾರ್ಕ್
ಸಂದೇಶದ ಮೇಲೆ ಡಬಲ್ ಟಿಕ್ ಮಾರ್ಕ್

ಸಂದೇಶ ಕಳುಹಿಸಿದ ನಂತರ ನೀಲಿ ಟಿಕ್ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ನಿಮ್ಮನ್ನು ನಿರ್ಬಂಧಿಸಿದ ಸಂಪರ್ಕಕ್ಕೆ ಕಳುಹಿಸಲಾದ ಯಾವುದೇ ಸಂದೇಶಗಳು ಯಾವಾಗಲೂ ಒಂದು ಟಿಕ್ ಮಾರ್ಕ್ ಅನ್ನು ತೋರಿಸುತ್ತವೆ ಮತ್ತು ಎರಡನೇ ಟಿಕ್ ಮಾರ್ಕ್ ಅನ್ನು ಎಂದಿಗೂ ತೋರಿಸುವುದಿಲ್ಲ. 

3/5
ಧ್ವನಿ ಮತ್ತು ವೀಡಿಯೊ ಕರೆಗಳ ವಿಫಲತೆ
ಧ್ವನಿ ಮತ್ತು ವೀಡಿಯೊ ಕರೆಗಳ ವಿಫಲತೆ

ವಾಟ್ಸಾಪ್‌ನಲ್ಲಿ ನಿಮ್ಮ ಯಾವುದೇ ಸಂಪರ್ಕ ನಿಮ್ಮನ್ನು ನಿರ್ಬಂಧಿಸಿದ್ದಾರೆ ನೀವು ಎಷ್ಟೇ ಪ್ರಯತ್ನಿಸಿದರೂ ಅವರಿಗೆ ವಾಟ್ಸಾಪ್‌ನ ಧ್ವನಿ ಮತ್ತು ವೀಡಿಯೊ ಕರೆಗಳು ಹೋಗುವುದಿಲ್ಲ.  

ಆದರೆ ಕೆಲವೊಮ್ಮೆ ನೆಟ್ ವರ್ಕ್ ಸಮಸ್ಯೆಯಿಂದ ಕರೆ ಲಿಂಕ್ ಆಗುವುದಿಲ್ಲ. 

4/5
ವಾಟ್ಸಾಪ್‌ನಲ್ಲಿ ಗ್ರೂಪ್ ರಚಿಸಿ
ವಾಟ್ಸಾಪ್‌ನಲ್ಲಿ ಗ್ರೂಪ್ ರಚಿಸಿ

ವಾಟ್ಸಾಪ್‌ನಲ್ಲಿ ಗ್ರೂಪ್ ರಚಿಸಿ ಅದರಲ್ಲಿ ನೀವು ನಿಮ್ಮನ್ನು ಬ್ಲಾಕ್ ಮಾಡಿರಬಹುದು ಎಂಬ ಸಂಶಯ ಹೊಂದಿರುವ ವ್ಯಕ್ತಿಯನ್ನು ಸೇರಿಸುವ ಮೂಲಕವೂ ಅವರು ನಿಮ್ಮನ್ನು ನಿರ್ಬಂಧಿಸಿದ್ದಾರೆಯೇ ಎಂದು ತಿಳಿಯಬಹುದು. 

5/5
ವಾಟ್ಸಾಪ್‌ ಗ್ರೂಪ್‌ನಲ್ಲಿ ಆಡ್ ಮಾಡಲು ಸಾಧ್ಯವಾಗುವುದಿಲ್ಲ
ವಾಟ್ಸಾಪ್‌ ಗ್ರೂಪ್‌ನಲ್ಲಿ ಆಡ್ ಮಾಡಲು ಸಾಧ್ಯವಾಗುವುದಿಲ್ಲ

ವಾಟ್ಸಾಪ್‌ ಗ್ರೂಪ್‌ನಲ್ಲಿ ನೀವು ಯಾರನ್ನಾದರೂ ಆಡ್ ಮಾಡಲು ಪ್ರಯತ್ನಿಸುವಾಗ ಆ ಸಂಪರ್ಕವನ್ನು ಆಡ್ ಮಾಡಲು ಸಾಧ್ಯವಾಗದಿದ್ದರೆ ಅವರು ನಿಮ್ಮನ್ನು ನಿರ್ಬಂಧಿಸಿರಬಹುದು ಎಂದರ್ಥ.





Read More