PHOTOS

IRDAI ಹೊಸ ಪ್ರಸ್ತಾಪ, ವಿಮಾ ಪ್ರೀಮಿಯಂಗೆ ಸಂಬಂಧಿಸಿದಂತೆ ಪಾಲಿಸಿದಾರರಿಗೆ ಸಿಗಲಿದೆ ಈ ಅನುಕೂಲ

ವರ್ಗಕ್ಕೆ ಅತ್ಯಂತ ಮಹತ್ವವಾಗಿರುವ ಈ ಪ್ರಸ್ತಾವನೆ

ವಿಮಾ ನಿಯಂತ್ರಣ ಸಂಸ್ಥೆಯಿಂದ ಮುಂಚಿತವಾಗಿ ಪಾಲಿಸಿಯ ವಿಮಾ ಪ್ರೀಮಿಯಂ ಪಾವತಿಸುವ ಅವಕಾಶ

...

Advertisement
1/4
ಪಾಲಿಸಿಯ ವಿಮಾ ಪ್ರೀಮಿಯಂ ಅನ್ನು ಮುಂಚಿತವಾಗಿ ಪಾವತಿಸಲು ಅವಕಾಶ
ಪಾಲಿಸಿಯ ವಿಮಾ ಪ್ರೀಮಿಯಂ ಅನ್ನು ಮುಂಚಿತವಾಗಿ ಪಾವತಿಸಲು ಅವಕಾಶ

ಮುಂಬೈ: ನೀವು ಸಂಬಳ ಪಡೆಯುವ ವೃತ್ತಿಪರರಲ್ಲದಿದ್ದರೆ, ಅಂದರೆ ನಿಮ್ಮ ಗಳಿಕೆಗೆ ನಿಗದಿತ ಸಮಯದ ಮಿತಿಯಿಲ್ಲಿ ಇಲ್ಲದಿದ್ದರೆ ನೀವು ಈ ಸುದ್ದಿಯನ್ನು ಎಚ್ಚರಿಕೆಯಿಂದ ಓದಬೇಕು. ವಾಸ್ತವವಾಗಿ ವಿಮಾ ನಿಯಂತ್ರಣ ಸಂಸ್ಥೆಯು (IRDAI) ಈಗ ನಿಮ್ಮ ಪಾಲಿಸಿಯ ವಿಮಾ ಪ್ರೀಮಿಯಂ (Insurance Policy) ಅನ್ನು ಮುಂಚಿತವಾಗಿ ಪಾವತಿಸಲು ಅವಕಾಶವನ್ನು ನೀಡುತ್ತದೆ. ಅಲ್ಲದೆ ಹೊಸ ಯೋಜನೆಯ ಅಡಿಯಲ್ಲಿ ನೀವು ನಿಗದಿತ ದಿನಾಂಕದ ಮೊದಲು ಪ್ರೀಮಿಯಂ ಪಾವತಿಸಿದಾಗ ಪ್ರೀಮಿಯಂ ಮೇಲೆ ರಿಯಾಯಿತಿಯನ್ನು ನೀಡುತ್ತದೆ ಅಥವಾ ಪ್ರೀಮಿಯಂ ಠೇವಣಿ ಇಡುವ ಮೊದಲು ಗ್ರಾಹಕರಿಗೆ ಬಡ್ಡಿಯನ್ನು ಪಾವತಿಸಲಾಗುತ್ತದೆ.

2/4
ಕರಡು ಸುತ್ತೋಲೆ ಶೀಘ್ರದಲ್ಲೇ ಬಿಡುಗಡೆ
ಕರಡು ಸುತ್ತೋಲೆ ಶೀಘ್ರದಲ್ಲೇ ಬಿಡುಗಡೆ

ಐಆರ್‌ಡಿಎಐ ತನ್ನ ಈ ಪ್ರಸ್ತಾವನೆಯನ್ನು ಜೀವ ವಿಮಾ ಕಂಪನಿಗಳೊಂದಿಗೆ (Life Insurance Companies) ಚರ್ಚೆ ನಡೆಸಿದೆ. ಸದ್ಯದ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಈ ಪ್ರಸ್ತಾವನೆಯ ಕರಡು ಸುತ್ತೋಲೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಇದನ್ನೂ ಓದಿ - ಈ ರೀತಿಯ Insurance Plan ತೆಗೆದುಕೊಳ್ಳುವುದು ಲಾಭಕಾರಿ, ಈ ಗಂಭೀರ ಕಾಯಿಲೆಗಳಿಗೂ ಸಿಗುತ್ತೆ ಕ್ಲೇಮ್

3/4
ವಿಮಾ ಹೊಂದಿರುವವರ ಹಿತದೃಷ್ಟಿಯಿಂದ ನಿರ್ಧಾರ
ವಿಮಾ ಹೊಂದಿರುವವರ ಹಿತದೃಷ್ಟಿಯಿಂದ ನಿರ್ಧಾರ

ಹೊಸ ನಿಯಮವನ್ನು ಜಾರಿಗೆ ತರುವ ಹಿಂದಿನ ಐಆರ್‌ಡಿಎಐ ಉದ್ದೇಶವೆಂದರೆ ಜನರ ಜೀವ ವಿಮಾ ಪಾಲಿಸಿಯ (Life Insurance Policy) ಅವಧಿ ಮುಗಿಯಬಾರದು. ಅದೇ ಸಮಯದಲ್ಲಿ ವಿಮಾ ಕಂಪನಿಗಳ ಕೆಲಸವೂ ಅಡೆತಡೆಯಿಲ್ಲದೆ ಬೆಳೆಯುತ್ತಲೇ ಇರಬೇಕು ಎಂಬುದಾಗಿದೆ.

ಈ ನಿರ್ಧಾರದಿಂದ ಪಾಲಿಸಿದಾರರು ಇನ್ನು ಮುಂದೆ ಪಾಲಿಸಿಯ ನಿಗದಿತ ದಿನಾಂಕದವರೆಗೆ ಕಾಯಬೇಕಾಗಿಲ್ಲ. ಈ ನಿರ್ಧಾರದಿಂದ ಜನರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ವಿಮಾ ಪ್ರೀಮಿಯಂ ಅನ್ನು ಠೇವಣಿ ಇರಿಸುವ ಮೂಲಕ ತಮ್ಮ ಪಾಲಿಸಿಯನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಐಆರ್‌ಡಿಎಐ (IRDAI) ತಿಳಿಸಿದೆ. ಈ ಪ್ರಸ್ತಾವನೆ ಪ್ರಕಾರ ಠೇವಣಿ ಮಾಡಿದ ಮೊದಲ ಪ್ರೀಮಿಯಂನಲ್ಲಿ ಯಾವುದೇ ಬಡ್ಡಿ ನಷ್ಟವಾಗುವುದಿಲ್ಲ. ಈಗ ಪಾಲಿಸಿದಾರರಿಗೆ ಪ್ರೀಮಿಯಂನಲ್ಲಿ ರಿಯಾಯಿತಿ ಸಿಗುತ್ತದೆ ಅಥವಾ ಬ್ಯಾಂಕ್ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ - Privatisation News: ಖಾಸಗೀಕರಣದತ್ತ ಈ ಸರ್ಕಾರಿ ವಿಮಾ ಕಂಪನಿ!

4/4
ಬಡ್ಡಿಯನ್ನು ಈ ರೀತಿ ಲೆಕ್ಕಹಾಕಲಾಗುತ್ತದೆ
ಬಡ್ಡಿಯನ್ನು ಈ ರೀತಿ ಲೆಕ್ಕಹಾಕಲಾಗುತ್ತದೆ

ಬಡ್ಡಿಯನ್ನು ಈ ರೀತಿ ಲೆಕ್ಕಹಾಕಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಉಳಿತಾಯ ಖಾತೆದಾರರು ಪ್ರತಿವರ್ಷ ಏಪ್ರಿಲ್ 1 ರಂದು ಬಡ್ಡಿ ದರವನ್ನು ಮತ್ತು ಆ ಬಡ್ಡಿ ದರಕ್ಕೆ 1 ಪ್ರತಿಶತವನ್ನು ಸೇರಿಸುವ ಮೂಲಕ ಪಾಲಿಸಿ ಹೊಂದಿರುವವರಿಗೆ ವಿಮಾ ಕಂಪನಿಗೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಕಂಪನಿಗಳು ಐಆರ್‌ಡಿಎಐ (IRDAI)ಗೆ 7 ದಿನಗಳ ಒಳಗೆ ಸಮಯಕ್ಕೆ ಮುಂಚಿತವಾಗಿ ತೆಗೆದುಕೊಂಡ ಪ್ರೀಮಿಯಂ ಬಗ್ಗೆ ಮಾಹಿತಿಯನ್ನು ಸಹ ನೀಡಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.





Read More