PHOTOS

Photo Gallery: ಅರಮನೆಯಂತಿರುವ ಎಂ.ಎಸ್.ಧೋನಿ ಲಕ್ಷುರಿಯಸ್‌ ಬಂಗಲೆ ಹೇಗಿದೆ ನೋಡಿ

ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ತನ್ನ ತವರು ರಾಂಚಿಯಲ್ಲಿ ಬಿಡುವಿ...

Advertisement
1/5
ಧೋನಿ ಮನೆ ತುಂಬಾ ಸುಂದರವಾಗಿದೆ
ಧೋನಿ ಮನೆ ತುಂಬಾ ಸುಂದರವಾಗಿದೆ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ ಅವರ ಮನೆಯ ಮುಂಭಾಗದ ವಿನ್ಯಾಸವು ಅದ್ಭುತವಾಗಿದೆ. ಛಾವಣಿಯ ಬಣ್ಣ ಕಪ್ಪಾಗಿದ್ದು, ನೋಡಲು ಸುಂದರವಾಗಿದೆ. ಮಾಹಿ ಬಂಗಲೆ 7 ಎಕರೆಗಳಲ್ಲಿ ಹರಡಿಕೊಂಡಿದೆ. ಈ ಐಷಾರಾಮಿ ಬಂಗಲೆ ರಾಂಚಿಯಲ್ಲಿದೆ.

2/5
ಬೈಕ್‌ಗಳಿಗೆ ಪ್ರತ್ಯೇಕ ಸ್ಥಳ
ಬೈಕ್‌ಗಳಿಗೆ ಪ್ರತ್ಯೇಕ ಸ್ಥಳ

ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ಬೈಕ್‌ಗಳ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ತಿಳಿದಿದೆ. ಅವರ ಬಳಿ ವಿವಿಧ ಮಾದರಿಯ ದ್ವಿಚಕ್ರ ವಾಹನಗಳ ಬಹುದೊಡ್ಡ ಸಂಗ್ರಹವಿದೆ. ಹೀಗಾಗಿ ತಮ್ಮ ಬಂಗಲೆಯಲ್ಲಿ ಬೈಕ್‌ಗಳಿಗಾಗಿಯೇ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಿಕೊಂಡಿದ್ದಾರೆ.

3/5
ಆಟದ ಮೈದಾನ, ಜಿಮ್ ಮತ್ತು ಪೂಲ್ ಕೂಡ ಇದೆ  
ಆಟದ ಮೈದಾನ, ಜಿಮ್ ಮತ್ತು ಪೂಲ್ ಕೂಡ ಇದೆ  

ಎಂ.ಎಸ್.ಧೋನಿಯ ಐಷಾರಾಮಿ ಬಂಗಲೆಯಲ್ಲಿ ಜಿಮ್, ಈಜುಕೊಳ ಮತ್ತು ಪಾರ್ಕ್ ಹಾಗೂ ಅನೇಕ ಒಳಾಂಗಣ ಆಟಗಳನ್ನು ಆಡಲು ಸಾಕಷ್ಟು ಸ್ಥಳಾವಕಾಶವಿದೆ.

4/5
ಭವ್ಯವಾದ ಒಳಾಂಗಣ
ಭವ್ಯವಾದ ಒಳಾಂಗಣ

ಎಂ.ಎಸ್.ಧೋನಿಯ ಬಂಗಲೆಯ ಒಳಭಾಗವು ತುಂಬಾ ಅದ್ಭುತವಾಗಿದೆ. ಅವರ ಲಿವಿಂಗ್ ರೂಮಿನಲ್ಲಿ ಬ್ರೌನ್ ವೆಲ್ವೆಟ್ ಸೋಫಾ ಮತ್ತು ಕಾಫಿ ಟೇಬಲ್ ಕೂಡ ಇದೆ. ಈ ಭವ್ಯವಾದ ಒಳಾಂಗಣವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.  

5/5
ಐಷಾರಾಮಿ ಮನೆಯ ಮಲಗುವ ಕೋಣೆ
ಐಷಾರಾಮಿ ಮನೆಯ ಮಲಗುವ ಕೋಣೆ

ಎಂ.ಎಸ್.ಧೋನಿಯವರ ಐಷಾರಾಮಿ ಬಂಗಲೆಯಲ್ಲಿ ಮಲಗುವ ಕೋಣೆಯು ಸಾಕಷ್ಟು ಆಧುನಿಕವಾಗಿದೆ. ಅವರ ಹಾಸಿಗೆಯ ಭಾಗವು ಬಹುತೇಕ ಚಾವಣಿಯನ್ನು ಮುಟ್ಟುವಂತಿದೆ. ಅತ್ಯುತ್ತಮವಾಗಿ ಮನೆಯ ಮಲಗುವ ಕೋಣೆಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಸಕಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.





Read More