PHOTOS

ದಿನನಿತ್ಯ ಐದಾರು ಎಸಳು ಪುದೀನಾ ತಿನ್ನಿ… ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು

Health Benefits of Pudina: ದಿನನಿತ್ಯದ ಆಹಾರದಲ್ಲಿ ಬಳಸುವ ವಸ್ತುಗಳ ಪೈಕಿ ಪುದೀನಾ ಕೂಡ ಒಂದು. ಇವುಗಳನ್ನು ನಾನ್ ವೆಜ್, ಪುಲಾವ್ ಮತ್ತು ಬ...

Advertisement
1/8
ಪುದೀನಾ ಆರೋಗ್ಯ ಪ್ರಯೋಜನಗಳು
ಪುದೀನಾ ಆರೋಗ್ಯ ಪ್ರಯೋಜನಗಳು

ಪುದೀನಾದಲ್ಲಿರುವ ಪೋಷಕಾಂಶಗಳ ಬಗ್ಗೆ ನಿಮಗೆ ತಿಳಿದಿದೆಯೇ?ಎಲ್ಲಾ ಪೌಷ್ಟಿಕಾಂಶದ ಮೌಲ್ಯಗಳು ಪುದೀನದಲ್ಲಿವೆ ಎಂದರೆ ನಂಬುತ್ತೀರಾ? ಹೌದು ಪುದೀನಾವನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

2/8
ಅರೋಮಾಥೆರಪಿ
ಅರೋಮಾಥೆರಪಿ

ಪುದೀನಾ ಮನಸ್ಸನ್ನು ಶಾಂತಗೊಳಿಸುವ ಗುಣಗಳನ್ನು ಹೊಂದಿದೆ. ಇದೇ ಕಾರಣದಿಂದ ಪುದೀನಾವನ್ನು ಅರೋಮಾಥೆರಪಿಯಲ್ಲಿ ಬಳಸಲಾಗುತ್ತದೆ.

3/8
ರೋಗನಿರೋಧಕ ಶಕ್ತಿ
ರೋಗನಿರೋಧಕ ಶಕ್ತಿ

ಪುದೀನಾ ರೋಗನಿರೋಧಕ ಶಕ್ತಿಯಲ್ಲಿ ಸಮೃದ್ಧವಾಗಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಇದು ಪರಿಹಾರವನ್ನು ನೀಡುತ್ತದೆ. ಅಂದರೆ ಶೀತ, ಕೆಮ್ಮು ಮತ್ತು ಗಂಟಲು ನೋವನ್ನು ಕಡಿಮೆ ಮಾಡಲು ಇದು ಬೆಸ್ಟ್ ಮನೆಮದ್ದು.

4/8
ಜೀರ್ಣಾಂಗ ವ್ಯವಸ್ಥೆ
ಜೀರ್ಣಾಂಗ ವ್ಯವಸ್ಥೆ

ಪುದೀನಾವನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಹೊಟ್ಟೆ ನೋವು, ಅಸಿಡಿಟಿ ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ.

5/8
ಬಾಯಿ ದುರ್ವಾಸನೆ
 ಬಾಯಿ ದುರ್ವಾಸನೆ

ಕೆಲವರಿಗೆ ಬಾಯಿ ದುರ್ವಾಸನೆ ಇರುತ್ತದೆ. ಪ್ರಯತ್ನ, ಪ್ರಯೋಗಗಳ ಹೊರತಾಗಿಯೂ ಎಫೆಕ್ಸ್ ಇರುವುದಿಲ್ಲ. ಹೀಗಿದ್ದಾಗ ಬೆಳಿಗ್ಗೆ ಎರಡು ಪುದೀನ ಎಲೆಗಳನ್ನು ಚೆನ್ನಾಗಿ ಅಗಿಯಿರಿ. ಇದು ಬಾಯಿಯ ದುರ್ವಾಸನೆ ಹೋಗಲಾಡಿಸುವುದು ಮಾತ್ರವಲ್ಲದೆ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.

6/8
ಕೂದಲ ಬೆಳವಣಿಗೆ
ಕೂದಲ ಬೆಳವಣಿಗೆ

ಪುದೀನಾ ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಪುದೀನಾದಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಮತ್ತು ಕ್ಯಾರೋಟಿನ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ ಕೂದಲು ಉದುರುವುದನ್ನು ತಡೆಯುತ್ತದೆ.

7/8
ದೃಷ್ಟಿ
ದೃಷ್ಟಿ

ಪುದೀನಾದಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸುತ್ತದೆ. ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳನ್ನು ಸಹ ತಡೆಯುತ್ತದೆ.

8/8
ಪುದೀನಾ
ಪುದೀನಾ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)





Read More