PHOTOS

ಮಾರ್ಚ್ ತಿಂಗಳಲ್ಲಿ ಈ ರಾಶಿಯವರ ಜೀವನದಲ್ಲಿ ಉಕ್ಕುವುದು ಧನ ಸಂಪತ್ತು! ಕಷ್ಟಗಳೆಲ್ಲಾ ಸರಿಯುವುದು ದೂರ

ು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಲೆಕ್ಕ ಇ...

Advertisement
1/5
ಶನಿಯ ಉದಯ
ಶನಿಯ ಉದಯ

ಕುಂಭ ರಾಶಿಯಲ್ಲಿ ಅಸ್ತಮಿಸಿರುವ ಶನಿ ಮಾರ್ಚ್ 5 ರಂದು  ಸಂಪೂರ್ಣವಾಗಿ ಉದಯಿಸುತ್ತಾನೆ. ಶನಿಯ ಉದಯದಿಂದಾಗಿ ಈ ರಾಶಿಯವರು ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಪಡೆಯುತ್ತಾರೆ.  ಯಾವ ಹಾದಿಯಲ್ಲಿ ನಡೆದರೂ ಸುಗಮವಾಗಿಯೇ ಇರುತ್ತದೆ. 

2/5
ವೃಷಭ ರಾಶಿ
ವೃಷಭ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಗ್ರಹದ ಉದಯದಿಂದಾಗಿ ವೃಷಭ ರಾಶಿಯವರಿಗೆ ಶುಭ ಫಲಗಳು ದೊರೆಯುತ್ತವೆ. ಈ ಸಮಯದಲ್ಲಿ, ಈ ರಾಶಿಯವರು ಏನು ಮಾಡಿದರೂ ಸಫಲರಾಗುತ್ತಾರೆ. ಜೀವನದಲ್ಲಿ ಪ್ರಗತಿಯ ಹಾದಿ ತೆರೆಯುತ್ತದೆ. ನಿಂತು ಹೋಗಿದ್ದ ಕೆಲಸ ಪೂರ್ಣಗೊಳ್ಳುತ್ತದೆ. ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. 

3/5
ಕುಂಭ ರಾಶಿ
ಕುಂಭ ರಾಶಿ

ಶನಿಯು ಕುಂಭ ರಾಶಿಯಲ್ಲಿಯೇ ಉದಯಿಸಲಿದ್ದಾನೆ. ಹಾಗಾಗಿ ಈ ಸಮಯದಲ್ಲಿ, ಈ ರಾಶಿಯವರು ಹೊಸ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಹಠಾತ್ ಧನಲಾಭಾವಾಗುವುದು. ಶನಿಯ ಉದಯದಿಂದಾಗಿ ಈ ರಾಶಿಯವರಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ. ಶುಭ ಫಲಗಳು ಲಭಿಸಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಶೀಘ್ರ ಪ್ರಗತಿ ಕಾಣುವ ಸಾಧ್ಯತೆ ಇದೆ.

4/5
ಸಿಂಹ ರಾಶಿ
ಸಿಂಹ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯ ಉದಯವು ಸಿಂಹ ರಾಶಿಯವರಿಗೆ ಶುಭ ಸಂಕೇತವಾಗಿದೆ. ಶನಿಯ ಉದಯದಿಂದಾಗಿ ಈ ಸಮಯದಲ್ಲಿ ಅನೇಕ ಅವಕಾಶಗಳು ಸಿಗುತ್ತವೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಸ್ನೇಹಿತರೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಈ ರಾಶಿಗಳ ಜನರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

5/5
ಮೀನ ರಾಶಿ
ಮೀನ ರಾಶಿ

ಶನಿಯ ಉದಯವು ಮೀನ ರಾಶಿಯವರಿಗೆ ಲಾಭ ತರಲಿದೆ. ಕಳೆದ ತಿಂಗಳು ತೊಂದರೆ ಅನುಭವಿಸಿದವರು ಮಾರ್ಚ್ ತಿಂಗಳಲ್ಲಿ ಒಳ್ಳೆಯ ದಿನಗಳನ್ನು ಕಾಣುವರು. ಈ ಅವಧಿಯಲ್ಲಿ ಶುಭ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.  ಕಳೆದು ಹೋದ ಮನಸ್ಸಿನ ಶಾಂತಿ ಮತ್ತೆ ಸಿಗುವುದು. 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More