PHOTOS

ಮನೆಯ ಸಮೃದ್ದಿ ಉಳಿಯಬೇಕಾದರೆ ಅಡುಗೆ ಮನೆಯಲ್ಲಿ ಎಂದಿಗೂ ಈ ವಸ್ತುಗಳು ಖಾಲಿಯಾಗಬಾರದಂತೆ !

ಶಸ್ಸನ್ನು ಸಾಧಿಸುವಲ್ಲಿ ವಾಸ್ತು ಶಾಸ್ತ್ರದ ಪಾತ್ರ ಮಹತ್ವದ್ದು. ವಾಸ್ತು ಶಾಸ್ತ್ರದಲ್ಲಿ ಹೇಳಲಾದ  ನಿಯಮಗಳನ್ನು ಪಾಲಿಸಿದರೆ ದೊಡ್ಡ ಮಟ್ಟದ ಲಾಭವಾಗುವುದು. ವಾ...

Advertisement
1/5
ಗೋಧಿ ಹಿಟ್ಟು
ಗೋಧಿ ಹಿಟ್ಟು

ಅಡುಗೆಮನೆಯಲ್ಲಿ ಹಿಟ್ಟು ಖಾಲಿಯಾಗಲು ಬಿಡಬಾರದು. ಹಿತ್ತು ಖಾಲಿಯಾಗುತ್ತದೆ ಎಂದಾದರೆ ಅದು ಬಡತನ ಬಂದೊದಗುವ ಲಕ್ಷಣ ತೋರಿಸುತ್ತದೆ. ಹಿಟ್ಟು ಖಾಲಿಯಾದರೆ ಇದು ಮನೆಯಲ್ಲಿ ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ.

2/5
ಅರಿಶಿನ
ಅರಿಶಿನ

ಅರಿಶಿನವು ಭಾರತೀಯ ಆಹಾರದಲ್ಲಿ ಬಳಸುವ ಪ್ರಮುಖ ಮಸಾಲೆಯಾಗಿದೆ. ಅರಿಶಿನವನ್ನು ಧಾರ್ಮಿಕ ಮತ್ತು ಶುಭ ಕಾರ್ಯಗಳಲ್ಲಿಯೂ ಬಳಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಪೂಜೆಯಲ್ಲಿ ಅರಿಶಿನವನ್ನು ಬಳಸುತ್ತಾರೆ. ಅಡುಗೆಮನೆಯಲ್ಲಿ ಅರಿಶಿನ ಖಾಲಿಯಾದರೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟ ಕೂಡಾ ಮರೆಯಾಗುತ್ತದೆಯಂತೆ.

3/5
ಅಕ್ಕಿ
ಅಕ್ಕಿ

ಅಕ್ಕಿ ತಾಯಿ ಲಕ್ಷ್ಮಿ ಮತ್ತು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಶುಕ್ರನು ಸಂಪತ್ತು, ಸಮೃದ್ಧಿ ಮತ್ತು ಐಷಾರಾಮಿ ಅಂಶವಾಗಿದೆ. ಮನೆಯಲ್ಲಿ ಅಕ್ಕಿ ಮುಗಿದರೆ ಮನೆಯ ಸುಖ ಸಮೃದ್ಧಿ ಹಾಳಾಗುತ್ತದೆ. 

4/5
ಉಪ್ಪು
ಉಪ್ಪು

ಜ್ಯೋತಿಷ್ಯದಲ್ಲಿ ಉಪ್ಪನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಉಪ್ಪು ಖಾಲಿಯಾದರೆ ರಾಹು ದೋಷ ಉಂಟಾಗುತ್ತದೆ. ಇದು ನಿಮ್ಮ ಕೆಲಸವನ್ನು ಹಾಳು ಮಾಡುತ್ತದೆ ಮತ್ತು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ. 

5/5
ಸಾಸಿವೆ ಎಣ್ಣೆ
ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ ಶನಿ ದೇವರಿಗೆ ಸಂಬಂಧಿಸಿದೆ. ಮನೆಯಲ್ಲಿ ಸಾಸಿವೆ ಖಾಲಿಯಾಗಲು ಬಿಡಬೇಡಿ. ಇದು ಶನಿದೇವರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಶನಿದೇವನ ಕೋಪವು ಮನೆಯಲ್ಲಿ ಬಿಕ್ಕಟ್ಟು, ಬಡತನ ಮತ್ತು ಸಮಸ್ಯೆಗಳನ್ನು ತರುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 





Read More