PHOTOS

Importance Of Silver: ಸಂತಾನ ಸುಖ ಪ್ರಾಪ್ತಿಯಲ್ಲಿ ಬೆಳ್ಳಿಯ ಮಹತ್ವದ ಕುರಿತು ನಿಮಗೆ ತಿಳಿದಿದೆಯೇ?

ortance Of Silver - ಬೆಳ್ಳಿಯನ್ನು (Silver) ಹಿಂದೂ ಧರ್ಮದಲ್ಲಿ (Hindu Religion) ಶುದ್ಧ ಮತ್ತು ಪರಿಣಾಮಕಾರಿ ಲೋಹ ಎಂದು ವಿವರಿಸಲಾಗಿದೆ. ಶಂಕರನ ...

Advertisement
1/6

1. ಗ್ರಹದೋಷ ನಿವಾರಿಸುತ್ತದೆ ಬೆಳ್ಳಿ - ಬೆಳ್ಳಿಯನ್ನು ಧರಿಸುವುದರಿಂದ, ವ್ಯಕ್ತಿಯ ದೇಹದಲ್ಲಿ ಇರುವ ನೀರಿನ ಅಂಶದ ಸಮತೊಳನದಲ್ಲಿರುತ್ತದೆ ಮತ್ತು ವ್ಯಕ್ತಿಯ ದೇಹದ ಉಷ್ಣತೆಯು ಸಹ ನಿಯಂತ್ರಣದಲ್ಲಿರುತ್ತದೆ. ಈ ಕಾರಣದಿಂದಾಗಿ, ಚಂದ್ರ ಮತ್ತು ಶುಕ್ರನ ಅನುಕೂಲಕರ ಪರಿಣಾಮಗಳು ವ್ಯಕ್ತಿಗಾಗುತ್ತವೆ ಮತ್ತು ಗ್ರಹದ ಅಡೆತಡೆಗಳು ದೂರಾಗುತ್ತವೆ.   

2/6

2. ಕೊರಳಲ್ಲಿ ಬೆಳ್ಳಿ ಚೈನ್ ಧರಿಸುವುದರಿಂದಾಗುವ ಲಾಭಗಳು - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ , ಬೆಳ್ಳಿಯ ಚೈನ್ ಅನ್ನು ಕೊರಳಲ್ಲಿ ಧರಿಸುವುದರಿಂದ, ಹಾರ್ಮೋನುಗಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.  ಇದು ಒಬ್ಬ ವ್ಯಕ್ತಿಯನ್ನು ರೋಮ್ಯಾಂಟಿಕ ಮಾಡುತ್ತದೆ, ಈ ಕಾರಣದಿಂದಾಗಿ ವೈವಾಹಿಕ ಜೀವನ ಕೂಡ ಉತ್ತಮಗೊಳ್ಳುತ್ತದೆ.  ಶೀತ ಮತ್ತು ಜ್ವರದ ಬಗ್ಗೆ ಆಗಾಗ್ಗೆ ದೂರು ನೀಡುವ ಜನರು ಕುತ್ತಿಗೆಯ ಬದಲಿಗೆ ಕೈಯಲ್ಲಿ ಬೆಳ್ಳಿಯ ಸರಪಣಿಯನ್ನು ಧರಿಸಬೇಕು, ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗಬಹುದು. 

3/6

3. ಜೀವನದಲ್ಲಿ ಯಶಸ್ಸು ಲಭಿಸುತ್ತದೆ - ಶುದ್ಧವಾದ ಬೆಳ್ಳಿಯ ಕಡಗವನ್ನು ಧರಿಸುವ ಮೂಲಕ ವಾತ, ಪಿತ್ತ ಮತ್ತು ಕಫವನ್ನು ನಿಯಂತ್ರಣದಲ್ಲಿಡಬಹುದು ಮತ್ತು ಯಾವುದೇ ವ್ಯಕ್ತಿಯು ಬೇಗನೆ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಎಂದು ಹೇಳಲಾಗುತ್ತದೆ. ನಿಮ್ಮ ಪ್ರಗತಿಯಲ್ಲಿ ಬೆಳ್ಳಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಜೇಬಿನಲ್ಲಿ ಚೌಕಾಕಾರದ ಬೆಳ್ಳಿಯನ್ನು ಇಟ್ಟುಕೊಂಡರೆ, ಜೀವನದಲ್ಲಿ ಪ್ರಗತಿ ಆರಂಭವಾಗುತ್ತದೆ , ಮತ್ತು ಪ್ರತಿ ಕ್ಷೇತ್ರದಲ್ಲಿ ಯಶಸ್ಸನ್ನು ಲಭಿಸುತ್ತದೆ.

4/6

4. ಸಂತಾನ ಸುಖ ಪ್ರಾಪ್ತಿಯಲ್ಲಾಗುತ್ತಿರುವ ಅಡೆತಡೆ ದೂರಾಗುತ್ತವೆ - ಜಾತಕದಲ್ಲಿ ಶುಕ್ರನ ದುರ್ಬಲತೆಯಿಂದಾಗಿ ನಿಮಗೆ ಸಂತಾನ ಸುಖ ಪ್ರಾಪ್ತಿಯಾಗಿರದಿದ್ದರೆ,  ಬೆಳ್ಳಿಯು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು 'ಲಾಲ್ ಕಿತಾಬ್‌'ನಲ್ಲಿ ಹೇಳಲಾಗಿದೆ. ಬೆಳ್ಳಿಯ ತಂತಿಯನ್ನು ಬಿಸಿ ಮಾಡಿ ತಣ್ಣನೆಯ ಹಾಲಿನಲ್ಲಿ ಹಾಕಿ ತಂತಿಯನ್ನು ತಣ್ಣಗಾಗಲು ಬಿಡಿ. ನಂತರ ಆ ಹಾಲನ್ನು ಕುಡಿಯಿರಿ. ಈ ನಿಯಮವನ್ನು 40 ದಿನಗಳವರೆಗೆ ಮಾಡುವುದರಿಂದ ಜಾತಕದಲ್ಲಿ ಶುಕ್ರನ ದೆಸೆ ಬಲವಾಗುತ್ತದೆ ಮತ್ತು ಸಂತಾನ ಸುಖ ಪ್ರಾಪ್ತಿಗೆ ಇರುವ ಅಡೆತಡೆಗಳು ದೂರಾಗುತ್ತವೆ.

5/6

5. ರೊಮ್ಯಾಂಟಿಕ್ ಲೈಫ್ ಗಾಗಿ ಬೆಳ್ಳಿಯ ಪಾತ್ರೆಗಳ ಬಳಕೆ - ಜೀವನವನ್ನು ರೋಮ್ಯಾಂಟಿಕ್ ಆಗಿಸಲು ಬೆಳ್ಳಿ ಪಾತ್ರೆಗಳಲ್ಲಿ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಆದರೆ, ಇದನ್ನು ಎಲ್ಲರಿಗೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ನೀವು ಯಾವುದೇ ಚಮಚ, ಗ್ಲಾಸ್ ಇತ್ಯಾದಿಗಳನ್ನು ಬಳಸಬಹುದು. ಬೆಳ್ಳಿ ಪಾತ್ರೆಗಳು ಯಾವಾಗಲೂ ಬ್ಯಾಕ್ಟೀರಿಯಾ ಮುಕ್ತವಾಗಿರುತ್ತವೆ. ಆದ್ದರಿಂದ, ಇಂತಹ ಪಾತ್ರೆಯಲ್ಲಿ ಆಹಾರವನ್ನು ತಿನ್ನುವುದರಿಂದ, ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.

6/6

6. ಮೆದುಳನ್ನು ತೀಕ್ಷ್ಣಗೊಳಿಸಲು ಬೆಳ್ಳಿಯನ್ನು ಬಳಕೆ ಮಾಡಿ - ಯಾವುದೇ ಬೆಳ್ಳಿ ಆಭರಣಗಳನ್ನು ಧರಿಸುವುದು ಜಾತಕದಲ್ಲಿ ಚಂದ್ರನನ್ನು ಬಲಪಡಿಸುತ್ತದೆ.  ನಿಮ್ಮ ಮನಸ್ಸನ್ನು ಸಮತೋಲನಗೊಳಿಸುತ್ತದೆ. ನೀವು ಅನಗತ್ಯ ಚಿಂತೆಗಳಿಂದ ದೂರವಿರುತ್ತೀರಿ, ಈ ಕಾರಣದಿಂದಾಗಿ ಯಾವುದೇ ಕೆಲಸದಲ್ಲಿ ನಿಮ್ಮ ಮೆದುಳು ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ.





Read More