PHOTOS

ಸೂರ್ಯಾಸ್ತದ ಬಳಿಕ ಇವುಗಳನ್ನು ಕಂಡರೆ ಶೀಘ್ರದಲ್ಲೇ ಲಕ್ಷ್ಮಿ ನಿಮ್ಮ ಮನೆ ಪ್ರವೇಶಿಸಲಿದ್ದಾಳೆ ಎಂದರ್ಥ

Astro Tips: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಕಣ್ಣಿಗೆ ಬೀಳುವ ಕೆಲವು ಚಿಹ್ನೆಗಳು ಶೀಘ್ರದಲ್ಲೇ ಆ ಮನೆಗೆ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಪ...

Advertisement
1/8
ಸೂರ್ಯಾಸ್ತ
ಸೂರ್ಯಾಸ್ತ

ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯೋದಯದಂತೆ ಸೂರ್ಯಾಸ್ತಕ್ಕೂ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ಬಳಿಕ ಕಾಣುವ ಕೆಲವು ಚಿಹ್ನೆಗಳು ಆ ಮನೆಯಲ್ಲಿ ಶೀಘ್ರದಲ್ಲೇ ಮಾತೆ ಲಕ್ಷ್ಮಿ ಪ್ರವೇಶವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. 

2/8
ಸಂಪತ್ತಿನ ದೇವತೆ
ಸಂಪತ್ತಿನ ದೇವತೆ

ಹಿಂದೂ ಧರ್ಮದಲ್ಲಿ ಮಾತೆ ಲಕ್ಷ್ಮಿಯನ್ನು ಸಂಪತ್ತು, ವೈಭವ, ಸಂತೋಷ ಮತ್ತು ಸಮೃದ್ಧಿಯ ಪ್ರತೀಕ ಎನ್ನಲಾಗುತ್ತದೆ. ಯಾವ ಮನೆಯಲ್ಲಿ ಲಕ್ಷ್ಮಿಯ ಆಶೀರ್ವಾದ ಇರುತ್ತದೋ ಅಂತಹ ಮನೆಯಲ್ಲಿ ಎಂದಿಗೂ ಹಣದ ಸಮಸ್ಯೆ ಇರುವುದಿಲ್ಲ. ಸುಖ-ಸಂಪತ್ತಿಗೆ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. 

3/8
ಲಕ್ಷ್ಮಿ ಆಶೀರ್ವಾದ
ಲಕ್ಷ್ಮಿ ಆಶೀರ್ವಾದ

ಹಾಗಾಗಿಯೇ, ಪ್ರತಿಯೊಬ್ಬರೂ ಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕು ಎಂದು ಬಯಸುತ್ತಾರೆ. 

4/8
ಮನೆಗೆ ಲಕ್ಷ್ಮಿ ಆಗಮನದ ಸಂಕೇತ
ಮನೆಗೆ ಲಕ್ಷ್ಮಿ ಆಗಮನದ ಸಂಕೇತ

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ಬಳಿಕ ಕಾಣಿಸಿಕೊಳ್ಳುವ ಕೆಲವು ಚಿಹ್ನೆಗಳು ನಿಮ್ಮ ಮನೆಗೆ ಶೀಘ್ರದಲ್ಲೇ ಲಕ್ಷ್ಮಿ ಆಮನವಾಗಲಿದೆ ಎಂಬುದನ್ನೂ ಸೂಚಿಸುತ್ತದೆ. ಆ ಸುಳಿವುಗಳೆಂದರೆ... 

5/8
ಹಕ್ಕಿ ಗೂಡು
ಹಕ್ಕಿ ಗೂಡು

ಮುಸ್ಸಂಜೆ ವೇಳೆಯಲ್ಲಿ ಹಕ್ಕಿ ಗೂಡು ಕಟ್ಟುವುದನ್ನು ನೀವು ಕಂಡರೆ ಅತಿ ಶೀಘ್ರದಲ್ಲಿ ಹಠಾತ್ ಧನಲಾಭವಾಗಲಿದೆ ಎಂದರ್ಥ. 

6/8
ಕಪ್ಪು ಇರುವೆ
ಕಪ್ಪು ಇರುವೆ

ಮನೆಯಲ್ಲಿ ಸಂಜೆ ಸೂರ್ಯಾಸ್ತದ ನಂತರ ನೀವು ಇದ್ದಕ್ಕಿದ್ದಂತೆ ಕಪ್ಪು ಇರುವೆಗಳ ಸಮೂಹವನ್ನು ಕಂಡರೆ ಇದು ಸಂಪತ್ತಿನ ದೇವತೆ ನಿಮ್ಮಿಂದ ಸಂತುಷ್ಟಗೊಂಡಿದ್ದಾಳೆ. ನಿಮ್ಮ ಮೇಲೆ ಲಕ್ಷ್ಮಿಯ ಅನುಗ್ರಹವಿದೆ ಎಂಬುದನ್ನು ಸೂಚಿಸುತ್ತದೆ. 

7/8
ಹಲ್ಲಿ
ಹಲ್ಲಿ

ಸಾಮಾನ್ಯವಾಗಿ ಹಲ್ಲಿಯನ್ನು ಕಂಡರೆ ಜನ ಹೆದರುತ್ತಾರೆ. ಆದರೆ, ಸೂರ್ಯಾಸ್ತದ ಬಳಿಕ ಹಲ್ಲಿಯನ್ನು ಕಾಣುವುದು ಶುಭ ಸಂಕೇತ. ಅದರಲ್ಲೂ ಮೂರು ಹಲ್ಲಿಗಳನ್ನು ಒಟ್ಟಿಗೆ ಕಂಡರೆ ಇದು ಲಕ್ಷ್ಮಿ ಆಗಮನವನ್ನು ಸೂಚಿಸುತ್ತದೆ. 

8/8
ಕನಸಿನಲ್ಲಿ ಇವುಗಳ ಗೋಚರ
ಕನಸಿನಲ್ಲಿ ಇವುಗಳ ಗೋಚರ

ಇದಲ್ಲದೆ, ರಾತ್ರಿ ವೇಳೆ ಕನಸ್ಸಿನಲ್ಲಿ ಪೊರಕೆ, ಶಂಖ, ಹಾವು, ಕಮಲ, ಗುಲಾಬಿ ಹೊವುಗಳನ್ನು ಕಂಡರೆ ಇದೂ ಸಹ ಶೀಘ್ರದಲ್ಲೇ ನಿಮ್ಮ ಮನೆಗೆ ಸಂಪತ್ತಿನ ಲಕ್ಷ್ಮಿ ಆಗಮಿಸಲಿದ್ದಾಳೆ ಎಂಬುದರ ಸಂಕೇತವಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More