PHOTOS

ಗೂಗಲ್ ನಲ್ಲಿ ಈ ಐದು ವಿಷಯಗಳ ಬಗ್ಗೆ ಸರ್ಚ್ ಮಾಡಿದರೆ ಜೈಲು ಪಾಲು ಗ್ಯಾರಂಟಿ ..!

Google ನಲ್ಲಿ ಸರ್ಚ್ ಮಾಡುವಾಗಲೂ ಬಹಳ ಎಚ್ಚರಿಕೆಯಿಂದ  ಇರಬೇಕು. ಇಲ್ಲವಾದರೆ ಈ ವಿಷಯವನ್ನು ಹುಡುಕಿರುವ ಕಾರಣಕ್ಕಾಗಿ ಜೈಲು ಪಾಲಾಗಬಹುದು. 

...
Advertisement
1/5
ಮಕ್ಕಳ ಅಶ್ಲೀಲ
ಮಕ್ಕಳ ಅಶ್ಲೀಲ

ಭಾರತ ಸರ್ಕಾರವು ಚೈಲ್ಡ್ ಪೋರ್ನೋಗ್ರಫಿ  ಬಗ್ಗೆ ತುಂಬಾ ಕಟ್ಟುನಿಟ್ಟಾಗಿದೆ. Googleನಲ್ಲಿ ಈ ಬಗ್ಗೆ  ಸರ್ಚ್ ಮಾಡುವುದು  ವೀಕ್ಷಿಸುವುದು ಅಥವಾ ಶೇರ್ ಮಾಡುವುದು ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದರೆ ಜೈಲು ಗ್ಯಾರಂಟಿ. 

2/5
ಬಾಂಬ್ ಅನ್ನು ಹೇಗೆ ತಯಾರಿಸುವುದು ?
ಬಾಂಬ್ ಅನ್ನು ಹೇಗೆ ತಯಾರಿಸುವುದು ?

ಕೆಲವೊಮ್ಮೆ Googleನಲ್ಲಿ ಅಗತ್ಯವಿರದ ವಿಷಯಗಳ ಬಗ್ಗೆ ಕೂಡಾ ಸರ್ಚ್ ಮಾಡುತ್ತಿರುತ್ತಾರೆ.   ಹಾಗಾಗಿ ಸುಮ್ಮನೆ ಕುತೂಹಲಕ್ಕೆ ಬಿದ್ದು ಕೂಡಾ ಬಾಂಬ್‌ಗಳನ್ನು ಹೇಗೆ ತಯಾರಿಸುವುದು ಇತ್ಯಾದಿ ಅನುಮಾನಾಸ್ಪದ ವಿಷಯಗಳ ಬಗ್ಗೆ ಸರ್ಚ್ ಮಾಡಬೇಡಿ. ಹಾಗೆ ಮಾಡುವುದರಿಂದ ನೀವು ತೊಂದರೆಗೆ ಸಿಲುಕಬಹುದು. ಭದ್ರತಾ ಏಜೆನ್ಸಿಗಳು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಇದರಲ್ಲಿ ಜೈಲು ಸೇರುವ ಸಾಧ್ಯತೆ ಕೂಡಾ ಹೆಚ್ಚಿರುತ್ತದೆ. 

3/5
ಗರ್ಭಪಾತ ಮಾಡುವುದು ಹೇಗೆ ?
ಗರ್ಭಪಾತ ಮಾಡುವುದು ಹೇಗೆ ?

Google ನಲ್ಲಿ ಗರ್ಭಪಾತ ವಿಧಾನಗಳನ್ನು ಹುಡುಕುವುದು ಸಹ ಅಪರಾಧದ ವರ್ಗಕ್ಕೆ ಸೇರುತ್ತದೆ. ಭಾರತೀಯ ಕಾನೂನಿನ ಪ್ರಕಾರ ವೈದ್ಯರ ಸಲಹೆ ಇಲ್ಲದೆ ಗರ್ಭಪಾತ ಮಾಡುವಂತಿಲ್ಲ.  

4/5
ಚಲನಚಿತ್ರ ಪೈರಸಿ
ಚಲನಚಿತ್ರ ಪೈರಸಿ

ಚಿತ್ರ ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ ಚಿತ್ರ ಸೋರಿಕೆಯಾಗುವುದು ಅಪರಾಧದ ಅಡಿಯಲ್ಲಿ ಬರುತ್ತದೆ. ಆನ್‌ಲೈನ್‌ನಲ್ಲಿ ಸಿನಿಮಾವನ್ನು ಸೋರಿಕೆ ಮಾಡಿದರೆ ಅಥವಾ ಡೌನ್‌ಲೋಡ್ ಮಾಡಿದರೆ ಅದು ಕೂಡಾ ಅಪರಾಧ. ಭಾರತ ಸರ್ಕಾರದ ಈ ಕಾನೂನನ್ನು ಉಲ್ಲಂಘಿಸಿದರೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ತೆರಬೇಕಾಗುತ್ತದೆ. 

5/5
ಖಾಸಗಿ ಫೋಟೋ ಮತ್ತು ವೀಡಿಯೊ
ಖಾಸಗಿ ಫೋಟೋ ಮತ್ತು ವೀಡಿಯೊ

ಸಾಮಾಜಿಕ ಮಾಧ್ಯಮ ಅಥವಾ ಗೂಗಲ್‌ನಲ್ಲಿ ಖಾಸಗಿ ಫೋಟೋಗಳು ಅಥವಾ ವೀಡಿಯೊಗಳನ್ನು ಸೋರಿಕೆ ಮಾಡುವುದು ಸಹ ಗಂಭೀರ ಅಪರಾಧ. ಇದು ಜೈಲು ಶಿಕ್ಷೆಗೂ ಕಾರಣವಾಗಬಹುದು. ತಪ್ಪಿಯೂ ಯಾರೊಬ್ಬರ ಖಾಸಗಿ ಫೋಟೋ ಅಥವಾ ವೀಡಿಯೊವನ್ನು Google ನಲ್ಲಿ ಶೇರ್ ಮಾಡಿಕೊಳ್ಳಬಾರದು. 





Read More