PHOTOS

ಗೋಲ್ಡನ್ ಬ್ಯಾಟ್-ಬಾಲ್‌, ಪ್ಲೇಯರ್ ಆಫ್ ದಿ ಟೂರ್ನಮೆಂಟ್‌ ಟೀಂ ಇಂಡಿಯಾದ ಯಾರಿಗೆ ಯಾವ ಪ್ರಶಸ್ತಿ ?

ೆಚ್ಚು ರನ್ ಗಳಿಸಿದವರಿಗೆ ಗೋಲ್ಡನ್ ಬ್ಯಾಟ್ ಮತ್ತು ಹೆಚ್ಚು ವಿಕೆಟ್ ಪಡೆದವರಿಗೆ...

Advertisement
1/11
ಅತಿ ಹೆಚ್ಚು ಪ್ರಶಸ್ತಿ ಗೆದ್ದ ಟೀ ಇಂಡಿಯಾ :
ಅತಿ ಹೆಚ್ಚು ಪ್ರಶಸ್ತಿ ಗೆದ್ದ ಟೀ ಇಂಡಿಯಾ :

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಪಂದ್ಯಾವಳಿ ಮುಗಿದ ನಂತರ, ಫೈನಲ್‌ನಲ್ಲಿ 'ಪ್ಲೇಯರ್ ಆಫ್ ದಿ ಮ್ಯಾಚ್' ಮತ್ತು 'ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ' ನೀಡಲಾಗುತ್ತದೆ. ಇದರೊಂದಿಗೆ ಗೋಲ್ಡನ್ ಬ್ಯಾಟ್ ಮತ್ತು ಗೋಲ್ಡನ್ ಬಾಲ್ ಪ್ರಶಸ್ತಿ ಕೂಡಾ ನೀಡಲಾಯಿತು. 

2/11
ಗೋಲ್ಡನ್ ಬ್ಯಾಟ್
ಗೋಲ್ಡನ್ ಬ್ಯಾಟ್

ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್  ಕೊಹ್ಲಿ 11 ಪಂದ್ಯಗಳಲ್ಲಿ 765 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಟೂರ್ನಿಯಲ್ಲಿ 3 ಶತಕ ಹಾಗೂ 6 ಅರ್ಧ ಶತಕ ಸಿಡಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸುವ ಮೂಲಕ ವಿರಾಟ್ ಗೋಲ್ಡನ್ ಬ್ಯಾಟ್ ಪ್ರಶಸ್ತಿ ಪಡೆದರು.

3/11
ಗೋಲ್ಡನ್ ಬಾಲ್ ಪ್ರಶಸ್ತಿ
ಗೋಲ್ಡನ್ ಬಾಲ್ ಪ್ರಶಸ್ತಿ

ಮೊಹಮ್ಮದ್ ಶಮಿ ಪಂದ್ಯಾವಳಿಯಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗಿ  ಹೊರಹೊಮ್ಮಿದ್ದಾರೆ. 24 ವಿಕೆಟ್ ಪಡೆದುಕೊಂಡಿರುವ ಶಮಿ, ಪ್ರಶಸ್ತಿಯನ್ನು ಗೆದ್ದುಕೊಂಡರು. ಸೆಮಿಫೈನಲ್ ಪಂದ್ಯದಲ್ಲಿ 7 ವಿಕೆಟ್‌ಗಳನ್ನು ಕಬಳಿಸಿ  'ಅತ್ಯುತ್ತಮ ಬೌಲಿಂಗ್ ಫಿಗರ್ಸ್' ಪ್ರಶಸ್ತಿ ಗೆದ್ದುಕೊಂಡರು. 

4/11
ಪ್ಲೇಯರ್ ಆಫ್ ದಿ ಟೂರ್ನಮೆಂಟ್
ಪ್ಲೇಯರ್ ಆಫ್ ದಿ ಟೂರ್ನಮೆಂಟ್

ಭಾರತದ ವಿರಾಟ್ ಕೊಹ್ಲಿ 765 ರನ್ ಗಳಿಸಿ, ಒಂದು ವಿಕೆಟ್ ಮತ್ತು 5 ಕ್ಯಾಚ್‌ಗಳೊಂದಿಗೆ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ಪ್ರಶಸ್ತಿ ಪಡೆದರು.

5/11
ಅಧಿಕ ಸಿಕ್ಸ್
ಅಧಿಕ ಸಿಕ್ಸ್

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ‘ಮೋಸ್ಟ್ ಸಿಕ್ಸರ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೋಹಿತ್ ಶರ್ಮಾ ಟೂರ್ನಿಯಲ್ಲಿ 31 ಸಿಕ್ಸರ್‌ಗಳನ್ನು ಬಾರಿಸಿದ್ದರು.

6/11
ಪ್ಲೇಯರ್ ಆಫ್ ದಿ ಮ್ಯಾಚ್
ಪ್ಲೇಯರ್ ಆಫ್ ದಿ ಮ್ಯಾಚ್

ಟ್ರಾವಿಸ್ ಹೆಡ್ 114.17 ಸ್ಟ್ರೈಕ್ ರೇಟ್‌ನಲ್ಲಿ 120 ಎಸೆತಗಳಲ್ಲಿ 15 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 137 ರನ್ ಗಳಿಸುವ ಮೂಲಕ 6 ವಿಕೆಟ್‌ಗಳಿಂದ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇವರಿಗೆ ‘ಪ್ಲೇಯರ್ ಆಫ್ ದಿ ಮ್ಯಾಚ್’ಪ್ರಶಸ್ತಿ ನೀಡಲಾಯಿತು. 

7/11
ಅತ್ಯಧಿಕ ಸ್ಕೋರ್ ಮತ್ತು ಹೆಚ್ಚಿನ ಸ್ಟ್ರೈಕ್ ರೇಟ್ :
ಅತ್ಯಧಿಕ ಸ್ಕೋರ್ ಮತ್ತು ಹೆಚ್ಚಿನ ಸ್ಟ್ರೈಕ್ ರೇಟ್ :

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಆಟಕ್ಕಾಗಿ  ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಅತ್ಯಧಿಕ ಸ್ಕೋರ್ ಮತ್ತು ಹೆಚ್ಚಿನ ಸ್ಟ್ರೈಕ್ ರೇಟ್ ಪ್ರಶಸ್ತಿಗಳನ್ನು ನೀಡಲಾಯಿತು. ಮ್ಯಾಕ್ಸ್‌ವೆಲ್ 150.37 ರ ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 201 ರನ್ ಗಳಿಸಿದ್ದರು. 

8/11
ಅಧಿಕ ಶತಕ
ಅಧಿಕ ಶತಕ

ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಪಂದ್ಯದ  50 ಓವರ್‌ಗಳಲ್ಲಿ ನಾಲ್ಕು ಶತಕಗಳನ್ನು ಒಳಗೊಂಡಂತೆ 594 ರನ್ ಗಳಿಸಿದ್ದಾರೆ. 30ರ ಹರೆಯದ ಅವರಿಗೆ 'ಅಧಿಕ ಶತಕಗಳು' ಪ್ರಶಸ್ತಿ ನೀಡಲಾಯಿತು. 

9/11
ಅತಿ ಹೆಚ್ಚು ಅರ್ಧ ಶತಕಗಳು
ಅತಿ ಹೆಚ್ಚು ಅರ್ಧ ಶತಕಗಳು

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅತಿ ಹೆಚ್ಚು ಅರ್ಧಶತಕಗಳ ಪ್ರಶಸ್ತಿ ಪಡೆದರು. 2023ರ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ 6 ಅರ್ಧಶತಕಗಳನ್ನು ಸಿಡಿಸಿದ್ದಾರೆ.   

10/11
ಹೆಚ್ಚು ಆಟಗಾರರನ್ನು ಔಟ್ ಮಾಡಿದ ವಿಕೆಟ್ ಕೀಪರ್ :
 ಹೆಚ್ಚು ಆಟಗಾರರನ್ನು ಔಟ್ ಮಾಡಿದ ವಿಕೆಟ್ ಕೀಪರ್ :

ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಕ್ವಿಂಟನ್ ಡಿ ಕಾಕ್ ಅವರು, 20 ಮಂದಿಯನ್ನು ಔಟ್ ಮಾಡುವ ಮೂಲಕ ಹೆಚ್ಚು ಆಟಗಾರರನ್ನು ಔಟ್ ಮಾಡಿದ ವಿಕೆಟ್ ಕೀಪರ್ ಎಂದೆನಿಸಿಕೊಂಡರು.   

11/11
ಹೆಚ್ಚಿನ ಕ್ಯಾಚ್‌ಗಳು
ಹೆಚ್ಚಿನ ಕ್ಯಾಚ್‌ಗಳು

ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ 'ಮೋಸ್ಟ್ ಕ್ಯಾಚ್' ಪ್ರಶಸ್ತಿ ಪಡೆದರು. ಈ  ಕಿವೀಸ್ ಆಟಗಾರ ಟೂರ್ನಿಯಲ್ಲಿ ಗರಿಷ್ಠ ಕ್ಯಾಚ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.  





Read More