PHOTOS

ನಂಬರ್ ಸೇವ್ ಮಾಡದೆಯೂ WhatsApp ಸಂದೇಶ ಕಳುಹಿಸಬಹುದು: ಹೇಗೆಂದು ತಿಳಿಯಿರಿ...

ಬಳಕೆದಾರರಿಗೆ ವಾಟ್ಸಾಪ್ ಅನೇಕ ವೈಶಿಷ್ಟ್ಯಗಳನ್ನು ನೀಡಿದೆ.

...
Advertisement
1/7
ಅತ್ಯಂತ ಸರಳ ಮತ್ತು ಸುಲಭ ವಿಧಾನ
ಅತ್ಯಂತ ಸರಳ ಮತ್ತು ಸುಲಭ ವಿಧಾನ

ಅನೇಕ ಬಾರಿ ಫೋನ್‌ನಲ್ಲಿ ನಂಬರ್ ಸೇವ್ ಮಾಡದೆಯೂ ಆ ಸಂಪರ್ಕಗಳಿಗೆ ನಾವು ಸಂದೇಶಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಕಳುಹಿಸಬೇಕಾದ ಸಂದರ್ಭ ಎದುರಾಗುತ್ತವೆ. ಆದರೆ ಈ ವಿಶೇಷ ವೈಶಿಷ್ಟ್ಯದ ಬಗ್ಗೆ ಮಾಹಿತಿ ಇರುವುದಿಲ್ಲ. ಅತ್ಯಂತ ಸುಲಭ ಮತ್ತು ಸರಳವಾಗಿ ಈ ರೀತಿ ನಾವು ಸಂದೇಶಗಳನ್ನು ಮತ್ತೊಬ್ಬರಿಗೆ ಕಳುಹಿಸಬಹುದಾಗಿದೆ.  

2/7
ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಸಂದೇಶ ಕಳುಹಿಸುವುದು ಹೇಗೆ..?
 ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಸಂದೇಶ ಕಳುಹಿಸುವುದು ಹೇಗೆ..?

ಯಾವುದೇ ಬಳಕೆದಾರರು ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಫೋನಿನಲ್ಲಿ ಸೇವ್ ಮಾಡದಿರುವ ನಂಬರ್ ಗಳಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವುದು ಹೇಗೆ..?

3/7
ಫೋನ್ ಬ್ರೌಸರ್ ಓಪನ್ ಮಾಡಿ ಈ ಲಿಂಕ್ ಬಳಸಿ
ಫೋನ್ ಬ್ರೌಸರ್ ಓಪನ್ ಮಾಡಿ ಈ ಲಿಂಕ್ ಬಳಸಿ

ಮೊದಲು ನಿಮ್ಮ ಯಾವುದೇ ಐಒಎಸ್ ಮತ್ತು ಆಂಡ್ರಾಯ್ಡ್‌ ಫೋನ್ ಬ್ರೌಸರ್ ಓಪನ್ ಮಾಡಿರಿ. ಬಳಿಕ ಈ ಕೆಳಗಿನ ಲಿಂಕ್ ಅನ್ನು ಕಾಪಿ ಮಾಡಿ ಅಡ್ರೆಸ್ ಬಾರ್ ನಲ್ಲಿ ಪೇಸ್ಟ್ ಮಾಡಿ.

ಲಿಂಕ್ ಇಲ್ಲಿದೆ ನೋಡಿ: ‘http://wa.me/xxxxxxxxxx’ or ‘http://api.whatsapp.com/send?phone=xxxxxxxxxxx’

4/7
ರಿಸೀವರ್ ಸಂಖ್ಯೆಯನ್ನು ನಮೂದಿಸಿ
ರಿಸೀವರ್ ಸಂಖ್ಯೆಯನ್ನು ನಮೂದಿಸಿ

ಯಾವುದೇ ‘Xxxxxxxxxx’ ಫೋನ್ ನಂಬರ್ ಗೆ ನೀವು ಸಂದೇಶವನ್ನು ಕಳುಹಿಸಬೇಕಾದರೆ ನೀವು ದೇಶದ ಕೋಡ್‌ನೊಂದಿಗೆ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಉದಾ: ನೀವು ಈ ಸಂಖ್ಯೆ +919911111111 ಗೆ ಸಂದೇಶವನ್ನು ಕಳುಹಿಸಲು ಬಯಸಿದರೆ, ನೀವು ಅಡ್ರೆಸ್ ಬಾರ್ ನಲ್ಲಿ http://wa.me/919911111111 ಅನ್ನು ನಮೂದಿಸಬೇಕು. ಇಲ್ಲಿ ನೀಡಲಾದ 91 ಸಂಖ್ಯೆಯು ಭಾರತ ದೇಶದ ಸಂಕೇತವಾಗಿದೆ.

5/7
WhatsApp web ಕ್ಲಿಕ್ ಮಾಡಿ
WhatsApp web ಕ್ಲಿಕ್ ಮಾಡಿ

ನೀವು ಅಡ್ರೆಸ್ ಬಾರ್ ನಲ್ಲಿ ಲಿಂಕ್ ಹಾಕಿದ ಬಳಿಕ WhatsApp web ಆಪ್ಶನ್ ಕ್ಲಿಕ್ ಮಾಡಿ.  

6/7
WhatsApp web ಪುಟ ತೆರೆಯಿರಿ
WhatsApp web ಪುಟ ತೆರೆಯಿರಿ

ಬಳಿಕ ನೀವು ನಿಮ್ಮ ಮೊಬೈಲ್ ಸಂಖ್ಯೆಯ WhatsApp web ಪುಟವನ್ನು ತೆರೆಯಿರಿ.

7/7
ಈಗ ಸಂದೇಶವನ್ನು ಕಳುಹಿಸಿರಿ
ಈಗ ಸಂದೇಶವನ್ನು ಕಳುಹಿಸಿರಿ

ಈಗ ನೀವು ನಂಬರ್ ಸೇವ್ ಮಾಡಿರದ ವ್ಯಕ್ತಿಗೆ ಸುಲಭವಾಗಿ ವಾಟ್ಸಾಪ್ ಸಂದೇಶವನ್ನು ಕಳುಹಿಸಬಹುದು.





Read More