PHOTOS

ಟಿ-20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪೈಕಿ ಒಬ್ಬ ಭಾರತೀಯ..!

T20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ ಮನ್ ಗಳ ಮಾಹಿತಿ ಇಲ್ಲಿದೆ.

...
Advertisement
1/5
ಮಹೇಲಾ ಜಯವರ್ಧನೆ
ಮಹೇಲಾ ಜಯವರ್ಧನೆ

ಶ್ರೀಲಂಕಾದ ಮಹೇಲಾ ಜಯವರ್ಧನೆ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ ಮನ್‌ಗಳಲ್ಲಿ ಒಬ್ಬರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಹೆಸರಿನಲ್ಲಿ 54 ಶತಕಗಳಿವೆ. ಮಹೇಲಾ ಟಿ-20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ್ದಾರೆ. ಅವರು 31 ಪಂದ್ಯಗಳಲ್ಲಿ 1,016 ರನ್ ಗಳಿಸಿದ್ದಾರೆ, ಇದರಲ್ಲಿ 1 ಭರ್ಜರಿ ಶತಕವೂ ಸೇರಿದೆ. ಟಿ-20 ವಿಶ್ವಕಪ್‌ನಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟ್ಸ್‌ ಮನ್. ಮಹೇಲಾ ನಿವೃತ್ತಿಯಾಗಿದ್ದಾರೆ.

2/5
ಕ್ರಿಸ್ ಗೇಲ್
ಕ್ರಿಸ್ ಗೇಲ್

ಕ್ರಿಸ್ ಗೇಲ್ ಹೆಸರನ್ನು ಕೇಳದ ಯಾವುದೇ ವ್ಯಕ್ತಿ ಕ್ರಿಕೆಟ್ ನೋಡುವುದಿಲ್ಲ. ಕ್ರಿಸ್ ಗೇಲ್ ಅವರನ್ನು ಫ್ಯಾನ್ಸ್ ‘ಯೂನಿವರ್ಸ್ ಬಾಸ್’ ಎಂದು ಕರೆಯುತ್ತಾರೆ. ಮೇಲಿಂದ ಮೇಲೆ ಸಿಕ್ಸರ್‌ಗಳನ್ನು ಬಾರಿಸುವ ಇವರ ಕಲೆ ಎಲ್ಲರಿಗೂ ತಿಳಿದಿದೆ. ಟಿ-20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದವರಲ್ಲಿ ಗೇಲ್ 2ನೇ ಸ್ಥಾನದಲ್ಲಿದ್ದಾರೆ. ಅವರು 31 ಪಂದ್ಯಗಳಲ್ಲಿ 949 ರನ್ ಗಳಿಸಿದ್ದಾರೆ, ಟಿ-20 ವಿಶ್ವಕಪ್‌ನಲ್ಲಿ 2 ಶತಕಗಳನ್ನು ಭಾರಿಸಿರುವ ಏಕೈಕ ಬ್ಯಾಟ್ಸ್‌ ಮನ್.

3/5
ತಿಲಕರತ್ನೆ ದಿಲ್ಶಾನ್
ತಿಲಕರತ್ನೆ ದಿಲ್ಶಾನ್

ತಿಲಕರತ್ನೆ ದಿಲ್ಶಾನ್ ಶ್ರೀಲಂಕಾದ ಅತ್ಯುತ್ತಮ ಬ್ಯಾಟ್ಸ್‌ ಮನ್ ಆಗಿದ್ದಾರೆ. ಇವರು ಟಿ-20 ವಿಶ್ವಕಪ್‌ನ 35 ಪಂದ್ಯಗಳಲ್ಲಿ 897 ರನ್ ಗಳಿಸಿದ್ದಾರೆ. ದಿಲ್ ಸ್ಕೂಪ್ ಎಂಬ ಸ್ಟ್ರೋಕ್ ಅನ್ನು ದಿಲ್ಶಾನ್ ಕಂಡುಹಿಡಿದಿದ್ದರು. ದಿಲ್ಶಾನ್ ಅವರ ಶ್ರೇಷ್ಠ ಬ್ಯಾಟಿಂಗ್ ಪ್ರೇಕ್ಷಕರ ಮನಸೂರೆಗೊಂಡಿದೆ. ಸದ್ಯ ಈ ಕ್ರಿಕೆಟಿಗ ನಿವೃತ್ತಿಯಾಗಿದ್ದಾರೆ.

4/5
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ, ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಪ್ರಸ್ತಕ್ತ ಯುಗದ ಅತ್ಯುತ್ತಮ ಬ್ಯಾಟ್ಸ್‌ ಮನ್. ಕೊಹ್ಲಿ ಎಲ್ಲಾ 3 ಮಾದರಿಯ ಕ್ರಿಕೆಟ್ ನಲ್ಲಿ ರನ್ ಗಳ ಹೊಳೆಯನ್ನೇ ಹರಿಸಿದ್ದಾರೆ. ಟಿ-20 ವಿಶ್ವಕಪ್‌ನಲ್ಲಿ ಕೇವಲ 17 ಪಂದ್ಯಗಳಲ್ಲಿ 85ರ ಸರಾಸರಿಯಲ್ಲಿ 834 ರನ್ ಗಳಿಸಿದ್ದಾರೆ. 2014 ಮತ್ತು 2016ರ ವಿಶ್ವಕಪ್‌ನಲ್ಲಿ ಕೊಹ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.

5/5
ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್

ಎಬಿ ಡಿವಿಲಿಯರ್ಸ್ ಅವರನ್ನು ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ ಮನ್ ಎಂದು ಪರಿಗಣಿಸಲಾಗಿದೆ. ಟಿ-20 ವಿಶ್ವಕಪ್‌ನಲ್ಲಿ 30 ಪಂದ್ಯಗಳಲ್ಲಿ 717 ರನ್ ಗಳಿಸಿದ್ದಾರೆ. ಡಿವಿಲಿಯರ್ಸ್ ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ ಅಟ್ಟುವ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದ್ದರು. ಎಬಿ ಡಿವಿಲಿಯರ್ಸ್ ಆಟವೆಂದರೆ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದೂಟವಿದ್ದಂತೆ.





Read More