PHOTOS

Healthy Breakfast: ಬೆಳಗಿನ ಉಪಹಾರಕ್ಕೆ ಈ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

Healthy breakfast ideas: ಬೆಳಗ್ಗೆ ನಾವು ಆರೋಗ್ಯಕರ ಆಹಾರ ಸೇವಿಸಿದ್ರೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿಯಾ...

Advertisement
1/5
ಓಟ್‌ಮೀಲ್‌
ಓಟ್‌ಮೀಲ್‌

ಬೆಳಗಿನ ಉಪಾಹಾರಕ್ಕೆ ಓಟ್ ಮೀಲ್ ಹೇಳಿಮಾಡಿಸಿದಂತಿದೆ. ಇದು ಕರಗಬಲ್ಲ ಫೈಬರ್ ಹೊಂದಿದ್ದು, ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ ತೆಗೆದುಹಾಕಲು ಇದು ಸಹಕಾರಿಯಾಗಿದೆ. ಓಟ್‌ ಮೀಲ್‌ಗೆ ಕತ್ತರಿಸಿದ ಸೇಬು, ಪೇರಳೆ ಅಥವಾ ರಾಸ್ ಬೆರ್ರಿಗಳನ್ನು ಸೇರಿಸಿ ಸೇವಿಸಬೇಕು.

2/5
ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣು

ಬೆಳಗಿನ ಉಪಹಾರಕ್ಕೆ ನೀವು ಕಿತ್ತಳೆ ಹಣ್ಣು ಸಹ ಸೇವಿಸಬಹುದು. ಕಿತ್ತಳೆ ಹಣ್ಣಿನ ಜ್ಯೂಸ್‍ನಲ್ಲಿ ವಿಟಮಿನ್ ‘ಸಿ’ಯ ಸಮೃದ್ಧವಾಗಿದೆ. ಕಿತ್ತಳೆಯನ್ನು ನಾರಿನ ಜೊತೆಗೆ ತಿನ್ನುವುದು ಉತ್ತಮ. ಇದರಿಂದ ನೀವು ಸಾಕಷ್ಟು ಫೈಬರ್ ಪಡೆಯುತ್ತೀರಿ. ಇದು ದೇಹದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿಯಾಗಿದೆ. ಕಿತ್ತಳೆ ಜ್ಯೂಸ್‌ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

3/5
ಸಾಲ್ಮನ್ ಫಿಶ್‌
ಸಾಲ್ಮನ್ ಫಿಶ್‌

ಸಾಲ್ಮನ್ ಫಿಶ್‌ನಲ್ಲಿ ಒಮೆಗಾ-3 ಕೊಬ್ಬಿನಾಮ್ಲ ಹೇರಳವಾಗಿರುತ್ತದೆ. ಇದರ ಸೇವನೆಯಿಂದ ಆರೋಗ್ಯಕರ ಕೊಬ್ಬು ಮತ್ತು ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಬಹುದು. ರಕ್ತದಲ್ಲಿ ಇರುವ ಟ್ರೈಗ್ಲಿಸರೈಡ್‌ಗಳ ಸಂಖ್ಯೆ ಕಡಿಮೆ ಮಾಡಬಹುದು. ಹೀಗಾಗಿ ನೀವು ನಿಯಮಿತವಾಗಿ ಸ್ಮೋಕ್ಡ್‌ ಸಾಲ್ಮನ್‌ ಸೇವಿಸಬೇಕು.

4/5
ಮೊಟ್ಟೆಯ ಬಿಳಿಭಾಗ
ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗದಲ್ಲಿ ಉತ್ತಮ ಪೌಷ್ಟಿಕಾಂಶವಿದೆ.  ಇದು ಕೊಲೆಸ್ಟ್ರಾಲ್ ಹೆಚ್ಚಿಸುವುದಿಲ್ಲ. ಇದರಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಇದ್ದು, ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

5/5
ಚಿಯಾ ಬೀಜ
ಚಿಯಾ ಬೀಜ

ಚಿಯಾ ಬೀಜಗಳು ಅನೇಕ ಆರೋಗ್ಯಕರ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವು ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಶಿಯಮ್, ಕಬ್ಬಿಣ, ಪೊಟ್ಯಾಶಿಯಮ್ ಮತ್ತು ಹಲವಾರು ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ. ಇದರ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.





Read More