PHOTOS

Health Tips: ಬೇಸಿಗೆಯಲ್ಲಿ ಪ್ರತಿಯೊಬ್ಬರೂ ಸೇವಿಸಬೇಕಾದ ಆಹಾರಗಳಿವು

Summer Super Foods: ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿ ಹಣ್ಣುಗಳು ವಿಟಮಿನ್ Cಯಲ್ಲಿ ಸಮೃದ್ಧವಾಗಿರುವ ಹಣ್ಣುಗಳಾಗಿವೆ. ಇವು ಬಿಸಿ ವಾ...

Advertisement
1/5
ಎಳನೀರು
ಎಳನೀರು

ಎಳನೀರು ನೈಸರ್ಗಿಕ ಎಲೆಕ್ಟ್ರೋಲೈಟ್-ಸಮೃದ್ಧ ಪಾನೀಯವಾಗಿದ್ದು, ಬೆವರುವಿಕೆಯಿಂದ ಕಳೆದುಹೋದ ದ್ರವಗಳು ಮತ್ತು ಖನಿಜಗಳನ್ನು ದೇಹಕ್ಕೆ ಒದಗಿಸುತ್ತದೆ. ಇದು ಬೇಸಿಗೆಯಲ್ಲಿ ಉತ್ತಮ ಹೈಡ್ರೇಟಿಂಗ್ ಆಯ್ಕೆಯಾಗಿದೆ. ನಿಯಮಿತವಾಗಿ ಎಳನೀರು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು. 

2/5
ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣು

ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಹಣ್ಣು ಸೇವಿಸುವುದು ಅತ್ಯುತ್ತಮ ಆಯ್ಕೆಯಾಗಿದೆ. ಇದು ಹೆಚ್ಚಿನ ನೀರಿನಂಶವನ್ನು ಹೊಂದಿದ್ದು, ನಿಮ್ಮನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಇದು ಅಗತ್ಯ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ.

3/5
ಸೌತೆಕಾಯಿ
ಸೌತೆಕಾಯಿ

ಸೌತೆಕಾಯಿಯು ಬೇಸಿಗೆಯಲ್ಲಿ ನಿಮ್ಮ ದೇಹವನ್ನು ಹೈಡ್ರೇಟಿಂಗ್ ಆಗಿಡುವ ಉತ್ತಮ ಆಹಾರವಾಗಿದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ. ಇದು ಜಲಸಂಚಯನವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಹೆಚ್ಚಿನ ನೀರಿನಂಶವನ್ನು ಹೊಂದಿರುವ ಸೌತೆಕಾಯಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. 

4/5
ಹಸಿರು ಸೊಪ್ಪು
ಹಸಿರು ಸೊಪ್ಪು

ಪಾಲಕ್, ದಂಟು ಸೊಪ್ಪು, ಮೆಂತ್ಯ ಸೊಪ್ಪು ಮತ್ತು ಲೆಟಿಸ್‌ನಂತಹ ಹಸಿರು ಸೊಪ್ಪನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಕು. ಇವುಗಳು ನೀರಿನಂಶದಲ್ಲಿ ಸಮೃದ್ಧವಾಗಿದ್ದು, ವಿಟಮಿನ್ A, C ಮತ್ತು K ರೀತಿಯ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ.

5/5
ಸಿಟ್ರಸ್ ಹಣ್ಣುಗಳು
ಸಿಟ್ರಸ್ ಹಣ್ಣುಗಳು

ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿ ಹಣ್ಣುಗಳು ವಿಟಮಿನ್ Cಯಲ್ಲಿ ಸಮೃದ್ಧವಾಗಿರುವ ಹಣ್ಣುಗಳಾಗಿವೆ. ಇವು ಬಿಸಿ ವಾತಾವರಣದಲ್ಲಿ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತವೆ. ಇವುಗಳ ನಿಯಮಿತ ಸೇವನೆಯಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. 





Read More