PHOTOS

Soaked Almonds Benefits: ನೆನಸಿದ ಬಾದಾಮಿ ಸೇವಿಸುವುದರ ಅದ್ಭುತ ಪ್ರಯೋಜನಗಳು

Health Benefits Of Soaked Almonds: ಬಾದಾಮಿಯನ್ನು ನಿತ್ಯವೂ ಬೆಳಗ್ಗಿನ ಆಹಾರವಾಗಿ ಸೇವಿಸುವ ವ್ಯಕ್ತಿಗಳ ಮೆದುಳಿನ ಕ್ಷಮತೆ ಉಳಿದವರಿ...

Advertisement
1/5
ನೆನಸಿದ ಬಾದಾಮಿ ಪ್ರಯೋಜನ
ನೆನಸಿದ ಬಾದಾಮಿ ಪ್ರಯೋಜನ

ಒಣ ಬಾದಾಮಿ ಸೇವಿಸುವುದಕ್ಕಿಂತ ನೆನೆಸಿಟ್ಟು ಸೇವಿಸಿದ್ರೆ ಜೀರ್ಣಿಸಿಕೊಳ್ಳುವುದು ಸುಲಭ. ನೆನೆಸಿಟ್ಟ ಬಾದಾಮಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಪೋಷಕಾಂಶ ಹೀರಿಕೊಳ್ಳಲು ಹೆಚ್ಚಿನ ಸಹಾಯ ಸಿಗುತ್ತದೆ. ಈ ಪೋಷಕಾಂಶಗಳು ಜೀರ್ಣಕ್ರಿಯೆ ಉತ್ತೇಜಿಸುವ ಕಿಣ್ವಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತವೆ. ಪರಿಣಾಮ ಜೀರ್ಣಕ್ರಿಯೆ ಸುಲಭ ಮತ್ತು ಪರಿಪೂರ್ಣವಾಗುತ್ತದೆ.

2/5
ವಿಟಮಿನ್ E ಸಮೃದ್ಧವಾಗಿದೆ
ವಿಟಮಿನ್ E ಸಮೃದ್ಧವಾಗಿದೆ

ಬಾದಾಮಿಗಳಲ್ಲಿ ವಿಟಮಿನ್ E ಸಮೃದ್ಧವಾಗಿದೆ. ಈ ವಿಟಮಿನ್ E ನಮ್ಮ ಚರ್ಮ ಮತ್ತು ಕೂದಲಿನ ಪೋಷಣೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶ. ಬಾದಾಮಿಯಲ್ಲಿರುವ ವಿಟಮಿನ್ E ನಿಮ್ಮ ಚರ್ಮವನ್ನು ನಯವಾಗಿ ಮತ್ತು ಸೊಂಪಾಗಿಸಲು ನೆರವಾಗುತ್ತದೆ.

3/5
ಬಾದಾಮಿ ಎಣ್ಣೆ ಪ್ರಯೋಜನ
ಬಾದಾಮಿ ಎಣ್ಣೆ ಪ್ರಯೋಜನ

ಚರ್ಮಕ್ಕೆ ಬಾದಾಮಿ ಎಣ್ಣೆ ಬಳಸುವುದರಿಂದಲೂ ಹೆಚ್ಚಿನ ಪ್ರಯೋಜನವಿದೆ. ಕೂದಲಿನ ಸಮಸ್ಯೆಗಳ ವಿರುದ್ಧ ಹೋರಾಡಲು ಬಾದಾಮಿ ನೆರವಾಗುತ್ತದೆ. ವಿಶೇಷವಾಗಿ ಕೂದಲು ಉದುರುವಿಕೆ ತೊಂದರೆ ಇರುವ ವ್ಯಕ್ತಿಗಳಿಗೆ ಬಾದಾಮಿ ಎಣ್ಣೆ ಸಹಕಾರಿಯಾಗಿದೆ.

4/5
ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ
ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ

ಬಾದಾಮಿಯು ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ. ಪ್ರತಿದಿನ ಬೆಳಗ್ಗಿನ ಆಹಾರವಾಗಿ ಬಾದಾಮಿ ಸೇವಿಸುವ ವ್ಯಕ್ತಿಗಳ ಮೆದುಳಿನ ಕ್ಷಮತೆ ಉಳಿದವರಿಗಿಂತ ಹೆಚ್ಚಿರುತ್ತದಂತೆ. ಬಾದಾಮಿಯಲ್ಲಿರುವ ವಿಟಮಿನ್ E ಮೆದುಳಿನ ತಾರ್ಕಿಕ, ಸ್ಮರಣಾ ಮತ್ತು ಚಿಂತನಾ ಸಾಮರ್ಥ್ಯ ಹೆಚ್ಚಿಸುತ್ತದೆ. 

5/5
ಉತ್ತಮ ಕೊಲೆಸ್ಟ್ರಾಲ್
ಉತ್ತಮ ಕೊಲೆಸ್ಟ್ರಾಲ್

ನಮ್ಮ ಆರೋಗ್ಯಕ್ಕೆ ಉತ್ತಮ ಕೊಲೆಸ್ಟ್ರಾಲ್ ಬೇಕು. ಇದರಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್‍ಗಳಿವೆ(HDL &  LDL). ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಲು ಬಾದಾಮಿ ನೆರವಾಗುತ್ತವೆ.





Read More