PHOTOS

Health Tips: ಬೇಸಿಗೆಯಲ್ಲಿ ಅಪ್ಪಿತಪ್ಪಿಯೂ ಇವುಗಳನ್ನು ಕುಡಿಯಬೇಡಿ..!

Summer Drinks: ಬೇಸಿಗೆ ಕಾಲದಲ್ಲಿ ನಾವು ದನಿವು ಮತ್ತು ಆಯಾಸ ನಿವಾರಿಸಲು ಹಲವಾರು ಪಾನೀಯಗಳನ್ನು ಸೇವಿಸುತ್ತೇವೆ. ಬೇಸಿಗೆಯ ಬಾಯಾರಿಕೆ ...

Advertisement
1/5
ಕಾಫಿ
ಕಾಫಿ

ಬೇಸಿಗೆಯಲ್ಲಿ ಹೆಚ್ಚು ಕಾಫಿ ಕುಡಿದರೆ ಆರೋಗ್ಯಕ್ಕೆ ಮಾರಕ. ಕಾಫಿಯಲ್ಲಿರುವ ಕೆಫೀನ್ ಅಂಶವು ದೇಹದಲ್ಲಿ ನೀರಿನ ಕೊರತೆಯನ್ನುಂಟು ಮಾಡುತ್ತದೆ. ಇದರಿಂದ ನಿಮಗೆ ಡಿಹೈಡ್ರೇಶನ್‌ ಉಂಟಾಗುತ್ತದೆ. ಹೀಗಾಗಿ ದಿನಕ್ಕೆ 2 ಕಪ್‌ಗಳಿಗಿಂತ ಹೆಚ್ಚು ಕಾಫಿ ಸೇವಿಸಬೇಡಿ.

2/5
ಚಹಾ
ಚಹಾ

ಬೇಸಿಗೆಯಲ್ಲಿ ಚಹಾ ಸೇವಿಸುವುದರಿಂದ ದೂರವಿರುವುದು ಉತ್ತಮ. ಚಹಾದಲ್ಲೂ ಕೆಫೀನ್ ಇದ್ದು, ಇದು ದೇಹಕ್ಕೆ ಒಳ್ಳೆಯದಲ್ಲ. ಇದು ಸಹ ಡಿಹೈಡ್ರೇಶನ್‌ಗೆ ಕಾರಣವಾಗುತ್ತದೆ. ಚಹಾ ಮೂತ್ರವರ್ಧಕದಂತೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ನಿಮಗೆ ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆ ಬರಬಹುದು.  

3/5
ಸೋಡಾ
ಸೋಡಾ

ಬೇಸಿಗೆಯ ಬಾಯಾರಿಕೆ ತಣಿಸಲು ಅನೇಕರು ಸೋಡಾ ಸೇವಿಸುತ್ತಾರೆ. ಆದರೆ ಇದು ನಿಮ್ಮ ಆರೋಗ್ಯಕ್ಕೂ ಹಾನಿಯನ್ನುಂಟು ಮಾಡುತ್ತದೆ. ಸೋಡಾ ನೀರಿನಲ್ಲಿ ಕಾರ್ಬನ್ ಮತ್ತು ಬಹಳಷ್ಟು ಫಾಸ್ಪರಿಕ್ ಆಮ್ಲವಿರುತ್ತದೆ. ಇದು ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಇದರ ಬಗ್ಗೆ ಎಚ್ಚರವಹಿಸುವುದು ಅಗತ್ಯ.

4/5
ಮಿಲ್ಕ್ ಶೇಕ್ಸ್
ಮಿಲ್ಕ್ ಶೇಕ್ಸ್

ಬೇಸಿಗೆ ಕಾಲದಲ್ಲಿ ಬಹುತೇಕರು ಮಿಲ್ಕ್ ಶೇಕ್ಸ್ ಸೇವಿಸಲು ಇಷ್ಟಪಡುತ್ತಾರೆ. ಆದರೆ ಇದರಿಂದ ನಿಮಗೆ ತೊಂದರೆಯುಂಟಾಗುತ್ತದೆ. ಅತಿಯಾಗಿ ಮಿಲ್ಕ್ ಶೇಕ್ಸ್ ಸೇವನೆಯಿಂದ ದೂರವಿರುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ.

5/5
ಫ್ರೂಟ್ ಜ್ಯೂಸ್
ಫ್ರೂಟ್ ಜ್ಯೂಸ್

ಬೇಸಿಗೆಯಲ್ಲಿ ಬಹುತೇಕರು ಫ್ರೂಟ್ ಜ್ಯೂಸ್ ಸೇವಿಸುತ್ತಾರೆ. ಫ್ರೂಟ್ ಜ್ಯೂಸ್ ಸೇವನೆಯಿಂದ ನಿಮಗೆ ತಾತ್ಕಾಲಿಕ ಖುಷಿ ಸಿಗಬಹುದು. ಆದರೆ ಇದರಿಂದ ನಿಮಗೆ ಅನಾರೋಗ್ಯ ಸಮಸ್ಯೆ ಎದುರಾಗುತ್ತದೆ.





Read More