PHOTOS

Health Tips: ಅಸಿಡಿಟಿ, ಗ್ಯಾಸ್ & ಮಲಬದ್ಧತೆ ಸಮಸ್ಯೆಗೆ ಓಂ ಕಾಳು ಸೇವಿಸಿ

Health Benefits of Ajwain: ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದರೆ ಪ್ರತಿದಿನ ಎರಡು ಚಮಚದಷ್ಟು ಓಂ ಕಾಳುಗಳನ್ನು ನೀರಿನಲ್ಲಿ ರಾತ...

Advertisement
1/5
ಅಸಿಡಿಟಿ ಸಮಸ್ಯೆ
ಅಸಿಡಿಟಿ ಸಮಸ್ಯೆ

ಜೀರಿಗೆಯೊಂದಿಗೆ ಓಂ ಕಾಳನ್ನು ಹುರಿದು ನೀರಿನಲ್ಲಿ ಬೇಯಿಸಿ ಸೋಸಿ, ಅದಕ್ಕೆ ಸಕ್ಕರೆ ಬೆರೆಸಿ ಕುಡಿದರೆ ನೈಸರ್ಗಿಕವಾಗಿಯೇ ಅಸಿಡಿಟಿ ಸಮಸ್ಯೆಯು ಕಡಿಮೆಯಾಗುತ್ತದೆ. ಓಂ ಕಾಳು ರಕ್ತವನ್ನು ಶುದ್ಧೀಕರಣಗೊಳಿಸಿ, ದೇಹದಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ.

2/5
ಜೀರ್ಣಕಾರಿ ಸಮಸ್ಯೆ
ಜೀರ್ಣಕಾರಿ ಸಮಸ್ಯೆ

ಓಂ ಕಾಳು ಹೊಟ್ಟೆ, ಕರುಳು ಮತ್ತು ಹುಣ್ಣಿನಂತಹ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಇವು ಆಮ್ಲೀಯತೆ, ಗ್ಯಾಸ್ ಮತ್ತು ಅಜೀರ್ಣಕ್ಕೆ ಚಿಕಿತ್ಸೆ ನೀಡಲು ಸಹಕಾರಿಯಾಗಿವೆ. ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ನೀವು ಅರ್ಧ ಟೀ ಚಮಚ ಓಂ ಕಾಳು ಜಗಿದು ರಸವನ್ನು ನುಂಗಬೇಕು ಅಥವಾ ನೀರಿನೊಂದಿಗೆ ಕುದಿಸಿ ಕುಡಿಯಬಹುದು.

3/5
ಹೊಟ್ಟೆ ಬೊಜ್ಜು ಕರಗಿಸಲು
ಹೊಟ್ಟೆ ಬೊಜ್ಜು ಕರಗಿಸಲು

ಓಂಕಾಳುಗಳಲ್ಲಿ ಹೆಚ್ಚಿನ ನಾರಿನಂಶ ಇದ್ದು, ಇದು ದೇಹದಲ್ಲಿ ಅನಗತ್ಯವಾಗಿ ಶೇಖರಣೆಯಾಗಿರುವ ಕೊಬ್ಬನ್ನು ತೆಗೆಯಲು ಸಹಾಯ ಮಾಡುತ್ತದೆ. ಓಂ ಕಾಳುಗಳಲ್ಲಿ ಉರಿಯೂತ ಶಮನ ಮಾಡುವ ಗುಣಗಳಿವೆ. ಆರ್ಥ್ರೈಟಿಸ್‌ನಿಂದ ಉಂಟಾಗಿರುವ ಮೂಳೆಗಳ ಊತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. 

4/5
ಹೊಟ್ಟೆಯ ಸಮಸ್ಯೆಗಳು
ಹೊಟ್ಟೆಯ ಸಮಸ್ಯೆಗಳು

ಹೊಟ್ಟೆ ನೋವಿನಿಂದ ಮುಕ್ತಿ ನೀಡಲು ಓಂ ಕಾಳುಗಳು ಸಹಾಯ ಮಾಡುತ್ತದೆ. ಜೀರ್ಣವಾಗದ ಆಹಾರವು ಮಲವಿಸರ್ಜನೆಯ ಮೂಲಕ ದೇಹದಿಂದ ಹೊರ ಹೋಗದಿದ್ದಾಗ ಹೊಟ್ಟೆಯ ಸಮಸ್ಯೆಗಳು ಬರಬಹುದು. ಓಂ ಕಾಳುಗಳನ್ನು ಜಗಿದು ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ. 

5/5
ಬಿಳಿ ಕೂದಲಿನ ಸಮಸ್ಯೆ
ಬಿಳಿ ಕೂದಲಿನ ಸಮಸ್ಯೆ

ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದರೆ ಪ್ರತಿದಿನ ಎರಡು ಚಮಚದಷ್ಟು ಓಂ ಕಾಳುಗಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿ ಬೆಳಗ್ಗೆ ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ. 





Read More