PHOTOS

Cashew Health Benefits: ಪ್ರತಿದಿನ ನಾಲ್ಕೈದು ಗೊಡಂಬಿ ಸೇವಿಸಿದ್ರೆ ಏನಾಗುತ್ತೆ ಗೊತ್ತಾ?

Cashew Health Benefits: ಪ್ರತಿದಿನವೂ ನಾಲ್ಕೈದು ಗೊಡಂಬಿ ಸೇವಿಸಿದರೆ ನಿಮಗೆ ಅನೇಕ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ. ಅನೇಕ ರೋಗಗಳಿಗೆ ಗ...

Advertisement
1/5
ಚರ್ಮಕ್ಕೆ ಉತ್ತಮ  
ಚರ್ಮಕ್ಕೆ ಉತ್ತಮ  

ಗೋಡಂಬಿಯಲ್ಲಿ ಮೆಗ್ನೀಷಿಯಂ, ಝಿಂಕ್, ಕಬ್ಬಿಣ ಹಾಗೂ ಫಾಸ್ಫರಸ್ ಅಂಶ ಹೆಚ್ಚಿರುತ್ತದೆ. ಪ್ರೋಟೀನ್‌ಗಳು ಹಾಗೂ ಸೆಲೆನಿಯಂ ಸೇರಿದಂತೆ ಆ್ಯಂಟಿಆಕ್ಸಿಡೆಂಟ್ಸ್‌ ಕೂಡ ಹೆಚ್ಚಿರುತ್ತದೆ. ಹೀಗಾಗಿ ಇದು ನಿಮ್ಮ ಚರ್ಮಕ್ಕೆ ಉತ್ತಮ.

2/5
ಕಣ್ಣಿಗೆ ಸೋಂಕು ಹರಡದಂತೆ ಸಹಕಾರಿ
ಕಣ್ಣಿಗೆ ಸೋಂಕು ಹರಡದಂತೆ ಸಹಕಾರಿ

ವಾತಾವರಣದಲ್ಲಿ ಹೆಚ್ಚು ಮಾಲಿನ್ಯವಿದ್ದರೆ ಗೋಡಂಬಿ ತಿನ್ನುವುದರಿಂದ ಕಣ್ಣಿನ ಸೋಂಕು ಬರದಂತೆ ನೋಡಿಕೊಳ್ಳುತ್ತದೆ. ಆ್ಯಂಟಿಆಕ್ಸಿಡೆಂಟ್ ಹೊಂದಿರುವ ಗೊಡಂಬಿ ರೆಟಿನಾ ಮೇಲೆ ರಕ್ಷಣಾತ್ಮಕ ಪದರ ಸೃಷ್ಟಿಸಲಿದ್ದು, ಹಾನಿಕರ ಯುವಿ ಕಿರಣಗಳನ್ನು ತಡೆಯುತ್ತದೆ.

3/5
ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ
ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ

ಗೋಡಂಬಿಯಲ್ಲಿ ಒಮೆಗಾ 3 ಅಂಶವಿರುವುದರಿಂದ ಚಯಾಪಚಯ ಕ್ರಿಯೆ  ಹೆಚ್ಚಿಸುತ್ತದೆ. ಹಸಿವಾದಾಗ ಬೊಗಸೆಯಷ್ಟು ಗೋಡಂಬಿ ತಿಂದರೆ ಹೆಚ್ಚುಕಾಲ ಹೊಟ್ಟೆ ತುಂಬುವಂತೆ ನೋಡಿಕೊಳ್ಳುತ್ತದೆ.

4/5
ಹೃದಯ ರೋಗದ ನಿಯಂತ್ರಣ 
ಹೃದಯ ರೋಗದ ನಿಯಂತ್ರಣ 

ಗೋಡಂಬಿ LDL ಕೊಲೆಸ್ಟರಾಲ್‌ ಕಡಿಮೆ ಮಾಡಲಿದ್ದು, HDL ಕೊಲೆಸ್ಟರಾಲ್‌ ಸಾಮಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ರೋಗದ ಅಪಾಯವನ್ನು ದೂರ ಮಾಡುತ್ತದೆ.  

5/5
ಜೀರ್ಣ ಶಕ್ತಿ ಹೆಚ್ಚುತ್ತದೆ
ಜೀರ್ಣ ಶಕ್ತಿ ಹೆಚ್ಚುತ್ತದೆ

ಗೋಡಂಬಿ ಫೈಬರ್ ಅಂಶ ಹೊಂದಿದೆ. ಇದರಿಂದ ಜೀರ್ಣ ಶಕ್ತಿ ಹೆಚ್ಚಾಗಲಿದ್ದು, ಜೀರ್ಣಾಂಗ ಸಂಬಂಧಿ ರೋಗಗಳನ್ನು ಕಡಿಮೆಯಾಗುತ್ತವೆ. ಹೀಗಾಗಿ ಪ್ರತಿದಿನ ನೀವು ನಾಲ್ಕೈದು ಗೊಡಂಬಿ ಸೇವಿಸುವುದನ್ನು ರೂಢಿಸಿಕೊಳ್ಳಬೇಕು.





Read More