PHOTOS

Photo Gallery: 31ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ಕೃತಿ ಸನೊನ್

31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ನಟಿ ಕೃತಿ ಸನೊನ್.

...
Advertisement
1/5
‘ಬರೇಲಿ ಕಿ ಬರ್ಫಿ’
‘ಬರೇಲಿ ಕಿ ಬರ್ಫಿ’

ನಟಿ ಕೃತಿ ಸನೊನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ‘ಬರೇಲಿ ಕಿ ಬರ್ಫಿ’ಕೂಡ ಒಂದು.  2017 ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾವನ್ನು ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ, ರಾಜ್‌ಕುಮಾರ್ ರಾವ್ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

2/5
ರಾಬ್ತಾ
ರಾಬ್ತಾ

ಈ ಚಿತ್ರದಲ್ಲಿ ಕೃತಿ ಸನೊನ್ ಮತ್ತು ಬಾಲಿವುಡ್ ನ ಮೋಹಕ ನಟ, ದಿವಂಗತ ಸುಶಾಂತ್ ಸಿಂಗ್ ರಜಪೂತ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಆದರೆ ಸುಶಾಂತ್ ಸಿಂಗ್ ಮತ್ತು ಕೃತಿ ಅವರ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು. ಪ್ರತಿಯೊಬ್ಬರಿಗೂ ಈ ಚಿತ್ರ ಮೆಚ್ಚುಗೆಯಾಗಿತ್ತು. 2017ರಲ್ಲಿ ತೆರೆಕಂಡ ಈ ಚಿತ್ರವನ್ನು ದಿನೇಶ್ ವಿಜನ್ ನಿರ್ದೇಶಿಸಿದ್ದರು. ದೀಪಿಕಾ ಪಡುಕೋಣೆ, ರಾಜ್ ಕುಮಾರ್ ರಾವ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

3/5
‘ಲುಕಾ ಚುಪ್ಪಿ’
‘ಲುಕಾ ಚುಪ್ಪಿ’

2019ರಲ್ಲಿ ತೆರೆಕಂಡ ‘ಲುಕಾ ಚುಪ್ಪಿ’ ಸಿನಿಮಾ ಸಖತ್ ಸದ್ದು ಮಾಡಿತ್ತು. ಈ ಚಿತ್ರದ ಹಾಡುಗಳು ಇಂದಿಗೂ ಕೂಡ ಜನಪ್ರಿಯವಾಗಿವೆ. ಚಿತ್ರದಲ್ಲಿ ಕೃತಿ ಸನೊನ್ ಮತ್ತು ಕಾರ್ತಿಕ್ ಆರ್ಯನ್ ಮುಖ್ಯ ಪಾತ್ರಗಳಲ್ಲಿದ್ದರು. ಇದನ್ನು ಲಕ್ಷ್ಮಣ್ ಉಟೆಕರ್ ನಿರ್ದೇಶಿಸಿದ್ದು, ಗಲ್ಲಾಪೆಟ್ಟಿಗೆಯಲ್ಲೂ ಇದು ಯಶಸ್ಸು ಕಂಡಿತ್ತು.

4/5
ಹೌಸ್‌ಫುಲ್ 4
ಹೌಸ್‌ಫುಲ್ 4

‘ಹೌಸ್‌ಫುಲ್ 4’ ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡಿದ ಸಿನಿಮಾ. ಬಹುತಾರಾಗಣದಲ್ಲಿ ಮೂಡಿಬಂದಿದ್ದ ಈ ಚಿತ್ರವನ್ನು ಫರ್ಹಾದ್ ಸಂಜಿ ನಿರ್ದೇಶಿಸಿದ್ದಾರೆ. ಕೃತಿ ಮಾತ್ರವಲ್ಲದೆ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಪೂಜಾ ಹೆಗ್ಡೆ, ಕೃತಿ ಕರಬಂದಾ ಮತ್ತು ರಿತೇಶ್ ದೇಶಮುಖ್ ಕೂಡ ಇದ್ದರು. 2019ರಲ್ಲಿ ತೆರೆಕಂಡ ಈ ಸಿನಿಮಾ ಪ್ರೇಕ್ಷಕರ ಮನಸೂರೆಗೊಂಡಿತ್ತು.

5/5
ದಿಲ್ವಾಲೆ
ದಿಲ್ವಾಲೆ

ದಿಲ್ವಾಲೆ ಸಿನಿಮಾ 2015 ರಲ್ಲಿ ಬಿಡುಗಡೆಯಾಗಿದ್ದು, ಇದನ್ನು ರೋಹಿತ್ ಶೆಟ್ಟಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್, ಕಾಜೋಲ್ ಮತ್ತು ವರುಣ್ ಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.





Read More