PHOTOS

ಕೈ ಹಿಡಿದ ಡ್ರ್ಯಾಗನ್ ಫ್ರೂಟ್; ನರೇಗಾ ಸಹಾಯದಿಂದ ಲಕ್ಷ ಲೆಕ್ಕದ ಫಸಲು ಬೆಳೆದ ರೈತ

ರೆಪ್ಪ ಚೋಳಮ್ಮನವರ ತಮ್ಮ ಒಂದು ಎಕರೆ ಜಮೀನಿನಲ್ಲಿ 2021-22ನೇ ಸಾಲಿನಲ್ಲಿ ಡ್ರ್ಯಾಗನ್ ಫ್ರೂಟ್ ಸಸಿ ನಾಟಿ‌ ಮಾಡಿದ್ದರು. ಆಗ ಡ್ರ್ಯಾಗನ್ ಫ್ರೂಟ್...

Advertisement
1/6

ನರೇಗಾ ಯೋಜನೆ ಒಳಗ ಡ್ರಾಗನ್ ಫ್ರೂಟ್ ಬೆಳಿಯಾಕ ಇರು ಮಾಹಿತಿ ಸಿಕ್ತು‌. ವಿಚಾರಿಸಿದಾಗ ತಾಲೂಕು ಪಂಚಾಯತಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡಿದ್ರು. ಇದರಿಂದ ಚೊಲೊ ಆಗೇತ್ರಿ. ವರ್ಷ ಆದಾಯ ಲಕ್ಷದಾಗ ಕೈ ಸೇರಾಕತ್ತಿತ್ರಿ.

-ಮೈಲಾರೆಪ್ಪ ಚೋಳಮ್ಮನವರ, ರೈತ

2/6

ಈಗ ಡ್ರ್ಯಾಗನ್ ಫ್ರೂಟ್ ಕಟಾವಿನ ಸಮಯದಲ್ಲಿ ಕೊಂಡುಕೊಳ್ಳಲು ಹಣ್ಣಿನ ವ್ಯಾಪಾರಸ್ಥರು ಮಹಾನಗರಗಳಿಂದ ಹಾರೋಗೇರಿ ಗ್ರಾಮದ ತೋಟಕ್ಕೆ ಬರುತ್ತಿದ್ದಾರೆ.ಇದರಿಂದ ಸಾಗಣೆ ವೆಚ್ಚವು ಕಡಿಮೆಯಾಗಿದ್ದು, ಮನೆಯವರೇ ಕಟಾವಿನ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ

3/6

ಇನ್ನು ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ತಂದು ರೈತ ಮೈಲಾರೆಪ್ಪನವರು ನೆಡುವಾಗ ಈ ಭಾಗಕ್ಕೆ ಅದು ಹೊಸ ಹಣ್ಣು‌. 

4/6

ಮೈಲಾರೆಪ್ಪನವರ ಮಕ್ಕಳಾದ ಮರುಳಸಿದ್ದಪ್ಪ, ಭರತ, ನಿಂಗರಾಜ ಅವರು ಸಹ ಜಮೀನಿನ ಉಸ್ತುವಾರಿಯಲ್ಲಿದ್ದು ಪ್ರತಿ ವರ್ಷದ ಮಳೆಗಾಲದ ಸಮಯದಲ್ಲಿ ಲಕ್ಷಗಳ ಲೆಕ್ಕದಲ್ಲಿ ಡ್ರ್ಯಾಗನ್ ಫ್ರೂಟ್ ಫಸಲು ಕಟಾವಿಗೆ ಬರುತ್ತಿರುವುದು ಅವರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.

5/6

ಈ ವರ್ಷ ಈಗಾಗಲೇ 2.50 ಲಕ್ಷ ಆದಾಯ ಕೈ ಸೇರಿದ್ದು ಇನ್ನು ಎರಡು ಲಕ್ಷ ರೂಪಾಯಿಗಳ ಆದಾಯದ ನಿರೀಕ್ಷೆಯಲ್ಲಿ ರೈತ ಮೈಲಾರೆಪ್ಪ ಇದ್ದಾರೆ.

6/6

ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ಮೂಲಕ ದೊರೆತ 1.32 ಲಕ್ಷ ಸಹಾಯಧನದಿಂದ ಒಂದು ಎಕರೆಯಲ್ಲಿ 35ರೂಪಾಯಿಗೆ ಒಂದರಂತೆ 1700 ಸಸಿಗಳನ್ನು ತಂದು ನೆಟ್ಟಿದ್ದರು. ನೆಟ್ಟ ವರ್ಷ ಹೊರತು ಪಡಿಸಿದರೆ ನಂತರದ ಮೂರು ವರ್ಷಗಳಲ್ಲಿ ಕ್ರಮವಾಗಿ 1.50 ಲಕ್ಷ, 2.50 ಲಕ್ಷ ಕೈ ಸೇರಿದೆ.





Read More