PHOTOS

GT Texa: 1 ರೂ. ಖರ್ಚಿಲ್ಲದೆ ನಿತ್ಯ 130KM ಚಲಿಸಬಲ್ಲ ಹೊಸ ಬೈಕ್ ಬಿಡುಗಡೆ

GT Texa electric motorcycle: GT ಟೆಕ್ಸಾ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದ್ದು, ಮುಂಭಾಗದ ಟೈರ್ ಗಾತ್ರ 80-100/18 ಮತ್ತು ಹಿಂಭಾಗದ ಟ...

Advertisement
1/5
120-130KM ರೇಂಜ್
120-130KM ರೇಂಜ್

ಹೊಸ ಜಿಟಿ ಟೆಕ್ಸಾ ಬೈಕ್‌ನಲ್ಲಿ 3.5 kWh Lithium-Ion ಬ್ಯಾಟರಿ ಅಳವಡಿಸಲಾಗಿದ್ದು, ಒಂದೇ ಚಾರ್ಜ್‌ನಲ್ಲಿ 120-130KM ರೇಂಜ್ ನೀಡುತ್ತದೆ. ಇದಕ್ಕೆ ನೀಡಲಾಗಿರುವ ಆಧುನಿಕ ಮೈಕ್ರೋ-ಚಾರ್ಜರ್‌ನೊಂದಿಗೆ ಬೈಕ್‌ಅನ್ನು ಕೇವಲ 4-5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಬ್ಲಾಕ್ & ರೆಡ್ 2 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುವ GT ಟೆಕ್ಸಾ ಬೈಕ್ 180KG ಲೋಡ್ ಸಾಮರ್ಥ್ಯ ಮತ್ತು 18 ಡಿಗ್ರಿಗಳ ಗ್ರೇಡಬಿಲಿಟಿಯೊಂದಿಗೆ ನಗರ ಪ್ರದೇಶಗಳಲ್ಲಿ ಸುಲಭವಾಗಿ ರೈಡ್ ಮಾಡಬಹುದಾಗಿದೆ. 

2/5
ಬ್ರೇಕಿಂಗ್ & ಟೈರ್
ಬ್ರೇಕಿಂಗ್ & ಟೈರ್

GT ಟೆಕ್ಸಾ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದ್ದು, ಮುಂಭಾಗದ ಟೈರ್ ಗಾತ್ರ 80-100/18 ಮತ್ತು ಹಿಂಭಾಗದ ಟೈರ್ ಗಾತ್ರ 120-80/17 ಇದೆ. ಈ ಟೈರ್‌ಗಳಿಗೆ ಅನುಗುಣವಾಗಿ ಮುಂಭಾಗದಲ್ಲಿ 457.2MM ಮತ್ತು ಹಿಂಭಾಗದಲ್ಲಿ 431.8MM ಅಳತೆಯ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಜೊತೆಗೆ ಎರಡೂ ವೀಲ್‌ಗಳಲ್ಲಿ ಡಿಸ್ಕ್ ಬ್ರೇಕ್‌ ನೀಡಿದ್ದು, ಉತ್ತಮ ಬ್ರೇಕಿಂಗ್‌ಗಾಗಿ E-ABS ಇದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಟೆಲಿಸ್ಕೋಪಿಕ್ ಡ್ಯುಯಲ್ ಸಸ್ಪೆನ್ಶನ್ ನೀಡಲಾಗಿದ್ದು, ಒರಟಾದ ರಸ್ತೆಗಳಲ್ಲಿಯೂ ನೀವು ಆರಾಮದಾಯಕ ಸವಾರಿ ಮಾಡಬಹುದು ಎಂದು ಕಂಪನಿ ಹೇಳಿದೆ. 

3/5
ರಿಮೋಟ್ ಸ್ಟಾರ್ಟ್
ರಿಮೋಟ್ ಸ್ಟಾರ್ಟ್

ಸವಾರರು ರಿಮೋಟ್ ಸ್ಟಾರ್ಟ್ ಅಥವಾ ಕೀಲಿಯನ್ನು ಬಳಸಿಕೊಂಡು ಬೈಕ್‌ಅನ್ನು ಪ್ರಾರಂಭಿಸಬಹುದು. ಇದರಲ್ಲಿನ 17.78 CM LED ಡಿಸ್ಪ್ಲೇ ಅನುಕೂಲಕರ ಮಾಹಿತಿ ಒದಗಿಸುತ್ತದೆ. ಡಿಜಿಟಲ್ ಸ್ಪೀಡೋಮೀಟರ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, LED ಹೆಡ್ಲೈಟ್, ಟೈಲ್‌ಲೈಟ್ & ಟರ್ನ್ ಸಿಗ್ನಲ್ ಲ್ಯಾಂಪ್‌ಗಳನ್ನು ಫ್ಯೂಚರಿಸ್ಟಿಕ್ ಆಗಿ ನೀಡಲಾಗಿದೆ.

4/5
120KG ತೂಕ
120KG ತೂಕ

770MM ಸ್ಯಾಡಲ್ ಎತ್ತರ ಮತ್ತು 145MM ಗ್ರೌಂಡ್ ಕ್ಲಿಯರೆನ್ಸ್, 120KG ಹಗುರವಾದ ಕರ್ಬ್ ತೂಕದಿಂದ ಸವಾರರು ಸುಲಭವಾಗಿ ಬೈಕ್ ನಿಯಂತ್ರಿಸಬಹುದು. ಕಂಪನಿಯು ಕೇವಲ ಈ ಒಂದು ಬೈಕ್‌ ಮಾತ್ರವಲ್ಲದೇ 55,555 ರೂ.ನಿಂದ ಆರಂಭಿಸಿ 84,555 ರೂ. (ಎಕ್ಸ್ ಶೋ ರೂಂ) ಬೆಲೆಯಲ್ಲಿ ಕೈಗೆಟುಕುವ ದ್ವಿಚಕ್ರ ವಾಹನಗಳನ್ನು ನೀಡುತ್ತಿದೆ.

5/5
ಪರಿಸರಸ್ನೇಹಿ ವಾಹನ
ಪರಿಸರಸ್ನೇಹಿ ವಾಹನ

GT ವೇಗಾಸ್, GT Ryd Plus, GT One Plus Pro ಮತ್ತು GT ಡ್ರೈವ್ ಪ್ರೊ ಸೇರಿದಂತೆ GTಯ ಇತ್ತೀಚಿನ ಶ್ರೇಣಿಯ ಹೆಚ್ಚಿನ ಮತ್ತು ಕಡಿಮೆ-ವೇಗದ EV ದ್ವಿಚಕ್ರ ವಾಹನಗಳನ್ನು ಈಗಾಗಲೇ ಮಾರಾಟ ಮಾಡುತ್ತಿದೆ. ತನ್ನ ಪರಿಸರಸ್ನೇಹಿ ವಾಹನಗಳನ್ನು ಹೆಚ್ಚಿಸಲು 2024ರ ಅಂತ್ಯದ ವೇಳೆಗೆ ಒಟ್ಟು 100 ಡೀಲರ್‌ಶಿಪ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿಕೊಂಡಿರುವುದಾಗಿ ಕಂಪನಿ ಹೇಳಿಕೊಂಡಿದೆ.





Read More