PHOTOS

ಗ್ರಾಹಕರಿಗೆ ಗುಡ್ ನ್ಯೂಸ್: ಈಗ ಕೇವಲ 5 ರೂ.ಗೆ ಚಿನ್ನ ಖರೀದಿಸಲು ಅವಕಾಶ

ಧ್ಯೆ ಅಮೆಜಾನ್ ಇಂಡಿಯಾ ತನ್ನ ಗ್ರಾಹಕರಿಗೆ ಕೇವಲ 5 ರೂಪಾಯಿಗೆ ಚಿನ್ನ ಖರೀದ...

Advertisement
1/5
ಅಮೆಜಾನ್ ಪೇ ಗೋಲ್ಡ್ ವಾಲ್ಟ್ ಅನ್ನು ಪ್ರಾರಂಭಿಸಿತು
ಅಮೆಜಾನ್ ಪೇ ಗೋಲ್ಡ್ ವಾಲ್ಟ್ ಅನ್ನು ಪ್ರಾರಂಭಿಸಿತು

ಅಮೆಜಾನ್ ಪೇ (Amazon Pay) ಗ್ರಾಹಕರಿಗೆ ಡಿಜಿಟಲ್ ಗೋಲ್ಡ್ ಇನ್ವೆಸ್ಟ್ಮೆಂಟ್ ವೈಶಿಷ್ಟ್ಯ 'ಗೋಲ್ಡ್ ವಾಲ್ಟ್'  (Gold Vault) ಅನ್ನು ಬಿಡುಗಡೆ ಮಾಡಿದೆ. ಈ ಸೇವೆಗಾಗಿ ಕಂಪನಿಯು ಸೇಫ್‌ಗೋಲ್ಡ್ ಜೊತೆ ಪಾಲುದಾರಿಕೆ ಹೊಂದಿದೆ ಎಂದು ಕಂಪನಿ ಹೇಳಿಕೆ ನೀಡಿದೆ.

2/5
Paytm ಜೊತೆ ಸ್ಪರ್ಧೆ
Paytm ಜೊತೆ ಸ್ಪರ್ಧೆ

ಬಳಕೆದಾರರು ಗೋಲ್ಡ್ ವಾಲ್ಟ್ ಮೂಲಕ ಕನಿಷ್ಠ 5 ರೂಪಾಯಿಗಳ ಡಿಜಿಟಲ್ ಚಿನ್ನವನ್ನು  ಖರೀದಿಸಬಹುದು. ಅಮೆಜಾನ್‌ನ ಈ ಹೊಸ ವೈಶಿಷ್ಟ್ಯದ ಆಗಮನದ ನಂತರ ಈ ಕಂಪನಿಯು Paytm, PhonePe ನಂತಹ ಅನೇಕ ಅಪ್ಲಿಕೇಶನ್‌ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಬಹುದು. ಈ ಸಮಯದಲ್ಲಿ ಜನರು Paytm ನಲ್ಲಿ ಸಾಕಷ್ಟು ಡಿಜಿಟಲ್ ಚಿನ್ನವನ್ನು ಖರೀದಿಸಲು ಇಷ್ಟಪಡುತ್ತಾರೆ.

3/5
ಕೇವಲ 5 ರೂಪಾಯಿಗಳಿಗೆ ಗೋಲ್ಡ್ ಖರೀದಿಸಲು ಸಾಧ್ಯ
ಕೇವಲ 5 ರೂಪಾಯಿಗಳಿಗೆ ಗೋಲ್ಡ್ ಖರೀದಿಸಲು ಸಾಧ್ಯ

ನಮ್ಮ ಗ್ರಾಹಕರ ಅನುಭವವನ್ನು ಸುಧಾರಿಸುವ ಸಲುವಾಗಿ ನಾವು ಹೊಸತನವನ್ನು ಮುಂದುವರಿಸುತ್ತೇವೆ ಎಂದು ಅಮೆಜಾನ್ ಕಂಪನಿಯ ವಕ್ತಾರರು ಹೇಳಿದರು. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿದಿನ ಹೆಚ್ಚುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಗ್ರಾಹಕರು ಹೆಚ್ಚಾಗಿ ಚಿನ್ನವನ್ನು ಖರೀದಿಸಲು ಸಾಕಷ್ಟು ಹಣವನ್ನು ಹೊಂದಿರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಅಮೆಜಾನ್‌ನಲ್ಲಿ ಡಿಜಿಟಲ್ ಚಿನ್ನವನ್ನು ಹೊರತೆಗೆಯಲಾಗಿದೆ ಎಂದಿದ್ದಾರೆ.

4/5
ಚಿನ್ನವನ್ನು 'ಖರೀದಿಸಲು' ಮತ್ತು 'ಮಾರಾಟ ಮಾಡಲು' ಸ್ವಾತಂತ್ರ್ಯವಿರುತ್ತದೆ
ಚಿನ್ನವನ್ನು 'ಖರೀದಿಸಲು' ಮತ್ತು 'ಮಾರಾಟ ಮಾಡಲು' ಸ್ವಾತಂತ್ರ್ಯವಿರುತ್ತದೆ

ಕಂಪನಿಯ ಈ ವೇದಿಕೆಯಲ್ಲಿ ಗ್ರಾಹಕರಿಗೆ ಚಿನ್ನವನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸ್ವಾತಂತ್ರ್ಯವಿರುತ್ತದೆ. ಇದಕ್ಕೂ ಮೊದಲು ಪೇಟಿಎಂ ಮತ್ತು ಫೋನ್‌ಪೇ ಎರಡೂ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಡಿಜಿಟಲ್ ಚಿನ್ನವನ್ನು ನೀಡಲು ಪ್ರಾರಂಭಿಸಿದರೆ, ಗುರುಗ್ರಾಮ್ ಮೂಲದ ಮೊಬಿಕ್ವಿಕ್ 2018 ರಲ್ಲಿ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿತು ಮತ್ತು ಗೂಗಲ್ ಪೇ ಬಳಕೆದಾರರಿಗೆ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಲು 2019ರ ಏಪ್ರಿಲ್‌ನಲ್ಲಿ ಅನುಮತಿ ನೀಡಿತು.  

5/5
ನೀವು ಈ ರೀತಿ ಚಿನ್ನವನ್ನು ಖರೀದಿಸಬಹುದು
ನೀವು ಈ ರೀತಿ ಚಿನ್ನವನ್ನು ಖರೀದಿಸಬಹುದು

ಗೋಲ್ಡ್ ವಾಲ್ಟ್ ಗ್ರಾಹಕರಿಗೆ ಯಾವಾಗ ಬೇಕಾದರೂ ಚಿನ್ನವನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಅವರು 5 ರೂಪಾಯಿಗಿಂತ ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿಸಬಹುದು. ಗ್ರಾಹಕರು ಅಮೆಜಾನ್ ಪೇಗೆ ಹೋಗಿ ಚಿನ್ನ ಖರೀದಿಸಲು 'ಗೋಲ್ಡ್ ವಾಲ್ಟ್' ಆಯ್ಕೆಯನ್ನು ಕ್ಲಿಕ್ ಮಾಡಬಹುದು.





Read More