PHOTOS

ಚಿನ್ನದ ಉಂಗುರ ಹಾಕಿದರೆ ಮಾತ್ರ ಈ ರಾಶಿಯವರಿಗೆ ಗುರು ಬಲ! ಅದೃಷ್ಟ ಕೈ ಹಿಡಿಯಬೇಕಾದರೆ ಇವರು ಧರಿಸಲೇ ಬೇಕು ಬಂಗಾರದುಂಗುರ

Gold Ring Astrology : ಕೆಲವು ರಾಶಿಯವರು ಜೀವನದ ಮೇಲೆ ಅದೃಷ್ಟದ ನೆರಳು ಬೀಳಬೇಕಾದರೆ ಅವರು ಚಿನ್ನದ ಉಂಗುರವನ್ನು ಧರಿಸಲೇ ಬೇಕಂತೆ.   

...
Advertisement
1/6
ಚಿನ್ನದ ಉಂಗುರ ಯಾರಿಗೆ ಶುಭ :
ಚಿನ್ನದ ಉಂಗುರ ಯಾರಿಗೆ ಶುಭ :

ಗುರು ಗ್ರಹದ ಮೇಲೆ ಚಿನ್ನದ ಪ್ರಭಾವವಿದೆ.ಹಾಗಾಗಿ ಚಿನ್ನವನ್ನು ಧರಿಸುವುದರಿಂದ ಗುರು ಬಲ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ.ಅದರಲ್ಲಿಯೂ ಕೆಲವು ರಾಶಿಯವರ ಜೀವನದ ಮೇಲೆ ಅದೃಷ್ಟದ  ನೆರಳು ಬೀಳಬೇಕಾದರೆ ಅವರು ಚಿನ್ನದ ಉಂಗುರವನ್ನು ಧರಿಸಲೇ ಬೇಕಂತೆ. 

2/6
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ :ಈ ರಾಶಿಯವರಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಅನುಕೂಲವಾಗುತ್ತದೆ. ಈ ಮೂಲಕ ಅವರ ಜೀವನದಲ್ಲಿ ಸಾಲದಿಂದ ಮುಕ್ತಿ ಪಡೆಯುತ್ತಾರೆ. ಚಿನ್ನದ ಉಂಗುರ ಹಾಕುತ್ತಿದ್ದಂತೆಯೇ  ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ.ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ.    

3/6
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿ :ಸಿಂಹ ರಾಶಿಯವರಿಗೂ ಚಿನ್ನದ ಉಂಗುರ ಅತ್ಯಂತ ಮಂಗಳಕರ.  ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಯ ಅಧಿಪತಿ ಸೂರ್ಯ. ಆದ್ದರಿಂದ, ಸಿಂಹ ರಾಶಿಯ ಜನರು ಚಿನ್ನದ ಉಂಗುರವನ್ನು ಧರಿಸಿದರೆ ಆಗುವುದೇ ಇಲ್ಲ ಎನ್ನುವ ಕೆಲಸ ಕೂಡಾ ಕೈ ಹಿಡಿಯುವುದಂತೆ. 

4/6
ಕನ್ಯಾ ರಾಶಿ :
ಕನ್ಯಾ ರಾಶಿ :

ಕನ್ಯಾ ರಾಶಿ : ಈ ರಾಶಿಯವಿಗೆ ಸುಖ ಸಮೃದ್ದಿಯ ಜೀವನ ಬಹಳ ಇಷ್ಟ. ಕನ್ಯಾ ರಾಶಿಯವರು ಚಿನ್ನದ ಒಡವೆ ಧರಿಸಿದರೆ ಅವರ ಅದೃಷ್ಟದ ಬಾಗಿಲು ತೆರೆಯುವುದು. ಈ ರಾಶಿಯವರು ಚಿನ್ನದ ಉಂಗುರ, ಚೈನ್ ಹೀಗೆ ಚಿನ್ನದಿಂದ ಮಾಡಿದ ಯಾವುದಾದರೂ ಆಭರಣವನ್ನು ಧರಿಸಿದರೆ ಅವರಿಗೆ ಶುಭ.     

5/6
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ : ತುಲಾ ರಾಶಿಯ ಜನರಿಗೂ ಚಿನ್ನ ಶುಭವೇ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿನ್ನದ ಉಂಗುರವು ತುಲಾ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಈ ರಾಶಿಯ ಅಧಿಪತಿ ಶುಕ್ರ ದೇವ. ಹಾಗಾಗಿ ಇವರಿಗೆ ಬಂಗಾರದ ಭಾರೀ ಅದೃಷ್ಟ.  

6/6
ಮೀನ ರಾಶಿ :
ಮೀನ ರಾಶಿ :

ಮೀನ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನವನ್ನು ಧರಿಸುವುದು ಮೀನ ರಾಶಿಯವರಿಗೆ  ಅತ್ಯಂತ ಶುಭ. ಚಿನ್ನವನ್ನು ಧರಿಸುವುದು ಈ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ.  ( ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More