PHOTOS

Goddess Lakshmi: ಇಂತಹ ಜನರ ಬಳಿ ಲಕ್ಷ್ಮಿ ಎಂದಿಗೂ ಉಳಿಯುವುದಿಲ್ಲ

                        

...
Advertisement
1/5
ರಾತ್ರಿ ಮೊಸರು ತಿನ್ನುವವನು
ರಾತ್ರಿ ಮೊಸರು ತಿನ್ನುವವನು

ರಾತ್ರಿ ಮೊಸರು ತಿನ್ನುವವನು: ಗರುಡ ಪುರಾಣದ ಪ್ರಕಾರ, ರಾತ್ರಿಯಲ್ಲಿ ಮರೆತೂ ಸಹ ಮೊಸರು ತಿನ್ನಬಾರದು. ಮೊಸರು ಆರೋಗ್ಯಕ್ಕೆ ಒಳ್ಳೆಯದಾದರೂ ರಾತ್ರಿ ಸೇವಿಸುವುದರಿಂದ ಆಯಸ್ಸು ಕಡಿಮೆಯಾಗುತ್ತದೆ.

2/5
ಇತರರನ್ನು ಅವಮಾನಿಸುವವರು
ಇತರರನ್ನು ಅವಮಾನಿಸುವವರು

ಶ್ರೀಮಂತರು ಇತರರನ್ನು ಅವಮಾನಿಸಲು ಪ್ರಯತ್ನಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಗರುಡ ಪುರಾಣದ ಪ್ರಕಾರ ಹೀಗೆ ಮಾಡುವುದು ಒಂದು ರೀತಿಯ ಪಾಪ. ಇದನ್ನು ಮಾಡುವವರು ಅಥವಾ ಸಂಪತ್ತಿನ ಬಗ್ಗೆ ಹೆಮ್ಮೆಪಡುವವರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿಯು ದೂರ ಹೋಗುತ್ತಾಳೆ.

3/5
ದುರಾಸೆಯ ವ್ಯಕ್ತಿ
ದುರಾಸೆಯ ವ್ಯಕ್ತಿ

ಗರುಡ ಪುರಾಣದ ಪ್ರಕಾರ, ಹಣದ ದುರಾಸೆಯ ಜನರು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಇದಲ್ಲದೇ ಪರರ ಸಂಪತ್ತನ್ನು ದೋಚಲು ಯತ್ನಿಸುವವನಿಗೆ ಯಾವ ಜನ್ಮದಲ್ಲೂ ತೃಪ್ತಿ ಸಿಗುವುದಿಲ್ಲ. ಇಂತಹ ದುರಾಸೆಯ ಮನೋಭಾವ ಇರುವವರ ಬಳಿ ಲಕ್ಷ್ಮಿ ನೆಲೆಸುವುದಿಲ್ಲ.

4/5
ಇತರರನ್ನು ಟೀಕಿಸುವುದು
ಇತರರನ್ನು ಟೀಕಿಸುವುದು

ಗರುಡ ಪುರಾಣದ ಪ್ರಕಾರ, ಇತರರನ್ನು ಟೀಕಿಸುವುದು ಅಥವಾ ಹೀಯಾಳಿಸುವುದು  ಪಾಪ.  ಅಂತಹ ಜನರು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. 

5/5
Garuda Purana
Garuda Purana

ಗರುಡ ಪುರಾಣದ ಪ್ರಕಾರ ಯಾವಾಗಲೂ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ಏಕೆಂದರೆ ಇದನ್ನು ಮಾಡದ ವ್ಯಕ್ತಿಯ ಜೀವನದಲ್ಲಿ ಯಾವಾಗಲೂ ಹಣದ ಕೊರತೆ ಇರುತ್ತದೆ. ಅಂತಹವರ ಜೊತೆ ಲಕ್ಷ್ಮಿ ಒಂದು ಕ್ಷಣವೂ ಉಳಿಯುವುದಿಲ್ಲ.





Read More